ಬೆಂಗಳೂರು(ಜ. 05)  ದಾರಿಯಲ್ಲಿ ಹೋಗುವಾಗ ಅರಿಶಿನ ಕುಂಕುಮ ಹಚ್ಚಿದ ನಿಂಬೆಹಣ್ಣು, ಒಡೆದ ಮೊಟ್ಟೆಯ ಚೂರುಗಳು ಕಂಡುಬಂದರೆ ಎಂಥ ವ್ಯಕ್ತಿಯಾದರೂ ಒಂದು ಕ್ಷಣ ಹೆದರುತ್ತಾನೆ. ಅವರವರ ನಂಬಿಕೆಗೆ ಬಿಟ್ಟಿದ್ದರೂ ಈ ವಾಮಾಚಾರ, ಮಾಟ-ಮಂತ್ರ  ಒಂದು ವರ್ಗವನ್ನು ಮಾತ್ರ ಭಯಕ್ಕೆ ಕೆಡವುದು ಸುಳ್ಳಲ್ಲ. ಇದ್ದಿಲು, ಮೊಟ್ಟೆ, ಅರಿಶಿನ ಕುಂಕುಮ, ಕೂದಲು, ಬಳೆ ಚೂರು ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಆದರೆ ನಿಂಬೆಹಣ್ಣು ಮಾತ್ರ ಇರಲೇಬೇಕು.

ಅಂಗಡಿ ಮಾಲೀಕನ ಮೇಲೆ ಕೆಲಸಗಾರನೇ ವಾಮಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕೆಲಸದಿಂದ ತೆಗೆದಿದ್ದಕ್ಕೆ ಅಂಗಡಿ ಮಾಲೀಕರ ವಿರುದ್ದ ಈತ ಕೃತ್ಯ ಎಸಗಿದ್ದಾನೆ.  ಬೆಳಗಿನ ಜಾವ ಅಂಗಡಿ ಬಳಿ ಬಂದು ನೋಡಿದಾಗ ಮೂಳೆ, ಕಬ್ಬಿಣದ ಮೊಳೆ, ನಿಂಬೆಹಣ್ಣು,‌ಕರಿ ಎಳ್ಳು, ಅರಿಶಿಣ ಕುಂಕುಮ ಕಂಡು ಮಾಲೀಕ ಹೌಹಾರಿದ್ದಾರೆ.

ರಾಜ್ ನಾಥ್ ಸಿಂಗ್ ಅವರಿಗೂ ನಿಂಬೆಹಣ್ಣು ಕೊಟ್ಟ ರೇವಣ್ಣ!

ಆರೋಪಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುರುಬರಹಳ್ಳಿ ಸರ್ಕಲ್ ನಲ್ಲಿ ನಡೆದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಶ್ರೀನಿವಾಸ್ ಎಂಬಾತ ಕುರುಬರಹಳ್ಳಿ ಸರ್ಕಲ್ ನ ಭುವನೇಶ್ವರಿ ಹಾರ್ಡ್ ವೇರ್ ನಲ್ಲಿ‌  ಕೆಲ್ಸ ಮಾಡುತ್ತಿದ್ದ. ಇತ್ತೀಚೆಗೆ ಅಂಗಡಿ ಮಾಲೀಕ ವಿಶ್ವನಾಥ್, ಆರೋಪಿಯನ್ನ ಕೆಲಸದಿಂದ ತೆಗೆದಿದ್ದರು.  ಇದೇ ಕೋಪಕ್ಕೆ ಇಂದು ಅಂಗಡಿ ಬಳಿ ಬಂದು ವಾಮಾಚಾರ ಮಾಡಿ  ಆರೋಪಿ ಎಸ್ಕೇಪ್ ಆಗಿದ್ದಾನೆ.

ಶಿರಸಿ ಮಾರಿಕಾಂಬಾ ಆಡಳಿತ ಮಂಡಳಿ ಅಧ್ಯಕ್ಷರ ಮನೆ ಮುಂದೆ ಇದೆಂಥಾ ಕೃತ್ಯ

ಎಳ್ಳು, ಮೊಟ್ಟೆ, ನಿಂಬೆಹಣ್ಣು, ಬಳೆ ಹೀಗೆ ಪ್ರತಿದಿನ ಇಂಥ ವಸ್ತುಗಳು ಕಂಡುಬರುತ್ತಲೇ ಇರುತ್ತವೆ. ಹೊಟ್ಟೆ ಊರಿಗೆ ಈ ಕೆಲಸ ಮಾಡಿದ್ದಾನೆ ಎಂದು ಅಂಗಡಿ ಮಾಲೀಕ ವಿಶ್ವನಾಥ್ ಹೇಳುತ್ತಾರೆ. ಶಿರಸಿಯ ಮಾರಿಕಾಂಬಾ ದೇವಾಲಯದ ಅಧ್ಯಕ್ಷರ ಮನೆ ಮುಂದೆ ವಾಮಚಾರ ನಡೆದ ಘಟನೆಯೂ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು.

2010ರಲ್ಲಿ ವಿಧಾನಸೌಧದ ಗೇಟಿನ ಬಳಿಯೂ ವಾಮಾಚಾರದ ಕುರುಹು ಕಂಡುಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರಿನ ಶೇಷಾದ್ರಿಪುರಂ ಜೆಡಿಎಸ್ ಕಚೇರಿ ಕಾಂಗ್ರೆಸ್ ಕೈವಶವಾದಾಗಲೂ ಅರಿಶಿನ-ಕುಂಕುಮ ನಿಂಬೆಹಣ್ಣು ಕಂಡುಬಂದಿದ್ದವು.