ಕಾರವಾರ [ಜ.03]: ಶಿರಸಿ ಮಾರಿಕಾಂಬ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮನೆ ಮುಂದೆ ಮಾಟ ಮಂತ್ರ ಮಾಡಲಾಗಿದೆ. 

ಶಿರಸಿಯಲ್ಲಿರುವ ಪ್ರಸಿದ್ಧ ಮಾರಿಕಾಂಬ ದೇವಾಲಯದ ಜಾತ್ರೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ ನಾಯ್ಕ್ ಅವರ ಮನೆ ಮುಂದೆ ಮಾಟ ಮಂತ್ರ ಮಾಡಲಾಗಿದೆ. 

ಮನೆಯ ಮುಂದೆ ಕುಂಬಳಕಾಯಿ, ಗಿಂಬೆ, ಲಿಂಬು ಹಾಗೂ ಕಪ್ಪು ದಾರಗಳನ್ನು ಮಂತ್ರಿಸಿ ಮನೆ ಎದುರು ಇರಿಸಲಾಗಿದೆ. ಅಲ್ಲದೇ ಕುಂಬಳಕಾಯಿಯಲ್ಲಿ ಕುಂಕುಮವನ್ನು ಹಾಕಿ ಇರಿಸಿದ್ದಾರೆ. 

ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಿಮಿಸಿದ ಪೊಲೀಸರು ಪರಿಶೀಲನೆ ನಡೆಸಿ ನಡೆಸಿದ್ದಾರೆ. ಅಲ್ಲದೇ ಕೃತ್ಯ ಎಸಗಿದವರ ಪತ್ತೆ ಕಾರ್ಯ ನಡೆಸಿದ್ದಾರೆ.

ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಗೆ ಡೇಟ್ ಫಿಕ್ಸ್...

ಮೂರು ವರ್ಷಗಳಿಗೆ ಒಮ್ಮೆ ಶಿರಸಿಯಲ್ಲಿ ಮಾರಿಕಾಂಬ ದೇವಿಯ ಅದ್ಧೂರಿ ಜಾತ್ರೆ ನಡೆಯಲಿದ್ದು. ಈ ಬಾರಿಯೂ ಇಲ್ಲಿ ಜಾತ್ರೆ ಜರುಗಲಿದೆ. ಈಗಾಗಲೇ ಜಾತ್ರೆ ದಿನಾಂಕ ಘೋಷಣೆಯಾಗಿದೆ. ಮಾರ್ಚ್ 3 ರಿಂದ 11ರವರೆಗೆ ಇಲ್ಲಿ ಜಾತ್ರೆ ನಡೆಯಲು ದಿನಾಂಕ ಫಿಕ್ಸ್ ಮಾಡಲಾಗಿದ್ದು, ಇದರ ಬೆನ್ನಲ್ಲೇ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.