ಗಾಂಧಿನಗರದ ಎಸ್.ಸಿ.ರಸ್ತೆಯ ಶ್ರೀಹರಿ ಪ್ರೆಸೆಂಟಾ ಲಾಡ್ಜ್‌ನಲ್ಲಿ ಘಟನೆ ನಡೆದಿದೆ. ಲಾಡ್ಜ್‌ನ ಮ್ಯಾನೇಜರ್ ಮೊಹಮ್ಮದ್ ಸರ್ಫರಾಜ್ ನೀಡಿದ ದೂರಿನ ಮೇರೆಗೆ ಕ್ಯಾಶಿಯರ್ ಮೊಹಮ್ಮದ್ ಮಿದಲಾಜ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು.
ಬೆಂಗಳೂರು(ಜು.30): ಲಾಡ್ಜ್‌ವೊಂದರ ಕ್ಯಾಶಿಯರ್ ಸಿಸಿಟಿವಿ ಕ್ಯಾಮರಾ ಆಫ್ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿದ್ದ .2.50 ಲಕ್ಷ ಕದ್ದು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಂಧಿನಗರದ ಎಸ್.ಸಿ.ರಸ್ತೆಯ ಶ್ರೀಹರಿ ಪ್ರೆಸೆಂಟಾ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ಲಾಡ್ಜ್‌ನ ಮ್ಯಾನೇಜರ್ ಮೊಹಮ್ಮದ್ ಸರ್ಫರಾಜ್ ನೀಡಿದ ದೂರಿನ ಮೇರೆಗೆ ಕ್ಯಾಶಿಯರ್ ಮೊಹಮ್ಮದ್ ಮಿದಲಾಜ್ (29) ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಹತ್ತುವ ವೇಳೆ ಮಹಿಳೆಯ ಚಿನ್ನಾಭರಣ ಕಳ್ಳತನ; ಇಬ್ಬರು ಸರಗಳ್ಳಿಯರ ಬಂಧನ
ಕಳೆದ ಒಂದೂವರೆ ವರ್ಷದಿಂದ ಲಾಡ್ಜ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮಿದಲಾಜ್, ಜು.24ರಂದು ಬೆಳಗ್ಗೆ 9.30ಕ್ಕೆ ಲಾಡ್ಜ್‌ನ ಸಿಸಿಟಿವಿ ಕ್ಯಾಮರಾ ಆಫ್ ಮಾಡಿ, ಕ್ಯಾಶ್ ಕೌಂಟರ್‌ನಲ್ಲಿದ್ದ .2.50 ಲಕ್ಷ ಕದ್ದು ಪರಾರಿಯಾಗಿದ್ದಾನೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
