Belagavi Crime News: ರಸ್ತೆ ಬದಿಯಲ್ಲಿ ಇದ್ದ ಎರಡಂತಸ್ತಿನ ಕಟ್ಟಡದ ಟೆರಸ್ ಮೇಲೆ ಗ್ಯಾಲರಿಗೆ ಹಗ್ಗ ಹಾಗೂ ಕೇಬಲ್ ಕಟ್ಟಿ ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ವರದಿ: ಮಹಾಂತೇಶ ಕುರಬೇಟ್, ಬೆಳಗಾವಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ (ಜೂ.30): ರಸ್ತೆ ಬದಿಯಲ್ಲಿ ಇದ್ದ ಎರಡಂತಸ್ತಿನ ಕಟ್ಟಡದ ಟೆರಸ್ ಮೇಲೆ ಗ್ಯಾಲರಿಗೆ ಹಗ್ಗ ಹಾಗೂ ಕೇಬಲ್ ಕಟ್ಟಿ ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ (Belagavi Crime News) ನಡೆದಿದೆ‌. ಬೆಳಗಾವಿಯ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 65 ವರ್ಷದ ಶಿವಾಜಿ ಬಿರ್ಜೆ ಶಾಹುನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. 

ನಿನ್ನೆ ತಡರಾತ್ರಿ ಎರಡಂತಸ್ತಿನ ಕಟ್ಟಡದ ಟೆರಸ್ ಮೇಲೆ ಹತ್ತಿ ಗ್ಯಾಲರಿಯಲ್ಲಿ ಹಗ್ಗ ಮತ್ತು ಕೇಬಲ್ ಕಟ್ಟಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ವಾಕಿಂಗ್‌ಗೆ ತೆರಳುತ್ತಿದ್ದ ಸ್ಥಳೀಯರು ಕಟ್ಟಡದ ಮೇಲೆ ಶವ ನೇತಾಡೋದನ್ನು ಕಂಡು ಬೆಚ್ಚಿ ಬಿದ್ದಿದ್ದರು. 

ಸ್ಥಳೀಯರು ಎಪಿಎಂಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಧಳಕ್ಕೆ ತೆರಳಿದ ಪೊಲೀಸರು ಮೃತದೇಹ ಕೆಳಗಿಳಿಸಿ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಕೆಲಸಕ್ಕೆ ಹೋಗಿರಲಿಲ್ವಂತೆ.

ಇದನ್ನೂ ಓದಿ:ಪತ್ನಿ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ: ಸಂಧಾನಕ್ಕೆ ಕರೆದು ರಾಕ್ಷಸ ನಡೆ!

ಶವಾಗಾರ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಪ್ರತಿಕ್ರಿಯಿಸಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.