Bengaluru Crime News: ಗುರಾಯಿಸಿದ್ದಕ್ಕೆ ಪಾಪಿ ಅಣ್ಣ ತನ್ನ ಸ್ವಂತ ತಮ್ಮನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜು. 02): ಗುರಾಯಿಸಿದ್ದಕ್ಕೆ ಪಾಪಿ ಅಣ್ಣ ತನ್ನ ಸ್ವಂತ ತಮ್ಮನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಬೆಂಗಳೂರಿನ (Bengaluru)ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. ಅಣ್ಣ ರಾಮಕೃಷ್ಣ ಎಂಬಾತನಿಂದ ತಮ್ಮ ಬಾಲಕೃಷ್ಣ ಬರ್ಬರವಾಗಿ ಕೊಲೆಯಾಗಿದ್ದಾನೆ (Crime News).ಯಾವಾಗ್ಲೂ ತಮ್ಮನ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದ ರಾಮಕೃಷ್ಣ ಈ ಬಾರಿ ಗುರಾಯಿಸಿದ ಅನ್ನೋ ಕಾರಣಕ್ಕೆ ತಮ್ಮ ಬಾಲಕೃಷ್ಣಗೆ ಇರಿದು ಕೊಲೆ ಮಾಡಿದ್ದು ಕೆ.ಆರ್ ಪುರಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಅಂದ ಹಾಗೆ ಬೇರೆ ಊರಿನವರಾದರೂ ಹಲವು ವರ್ಷಗಳಿಂದ ಈ ಕುಟುಂಬ ಬೆಂಗಳೂರಿನಲ್ಲೇ ವಾಸವಿದೆ. ಆರೋಪಿಗೆ ಒಬ್ಬ ತಮ್ಮನಿದ್ರೆ ಇಬ್ಬರು ತಂಗಿಯರಿದ್ದಾರೆ. ಅಪ್ಪ- ತಂಗಿಯರು ಕಜ್ಜಾಯ ಮಾರಿ ಜೀವನ ಸಾಗಿಸುತ್ತಿದ್ದರೇ ಅಮ್ಮ ಮಾನಸಿಕವಾಗಿ ವೀಕ್ ಇರೋದ್ರಿಂದ ಮನೆಯಲ್ಲೇ ಇರುತ್ತಿದ್ದರು.
ತಮ್ಮ ಬಾಲಕೃಷ್ಣ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ರಾಮಕೃಷ್ಣ ಬಾರ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದ. ಕುಟುಂಬದ ಜೊತೆ ಸದಾ ಕಿರಿಕ್ ಮಾಡುತ್ತಿದ್ದ ಆರೋಪಿ ಕುಟುಂಬಸ್ಥರಿಂದ ದೂರವೇ ವಾಸವಿದ್ದ. ಆದರೆ ಆಗಾಗ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ.
ಇದನ್ನೂ ಓದಿ: ಮಲತಾಯಿ ಕಿರುಕುಳ ಸಹಿಸದೆ ತಂದೆಯನ್ನೇ ಕೊಂದ ಮಕ್ಕಳು..!
ಮುಂಜಾನೆ ನಾಲ್ಕು ಗಂಟೆಗೆ, ರಾತ್ರಿ ಹನ್ನೆರಡು ಗಂಟೆಗೆ ಹೀಗೆ ಮನಬಂದಾಗ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ತಮ್ಮನ ಜೊತೆ ಕ್ಷುಲ್ಲಕ ವಿಚಾರಗಳಿಗೆ ಜಗಳ ಮಾಡುತ್ತಿದ್ದ. ಈ ಹಿಂದೆ ಇದೇ ರೀತಿ ಜಗಳ ಮಾಡಿ ಕೊಲೆಗೆ ಯತ್ನಿಸಿದ್ದ. ಈ ವೇಳೆ ಸ್ಥಳೀಯರು ರಾಮಕೃಷ್ಣನನ್ನು ತಡೆದು ಓಡಿಸಿದ್ದರು.
ಅದೇ ರೀತಿ ನಿನ್ನೆ ಕೂಡ ತಮ್ಮ ಗುರಾಯಿಸಿದ ಎಂದು ಜಗಳ ತೆಗೆದುಕೊಂಡಾತ ಚಾಕು ಇರಿದು ಹತ್ಯೆ ಮಾಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಪೊಲೀಸರು ಭೇಟಿ ನೀಡಿದ್ದು ಆರೋಪಿ ರಾಮಕೃಷ್ಣನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮೂರು ವರ್ಷದ ಮಗು ಕೊಂದು ತಾನೂ ಆತ್ಮಹತ್ಯೆಗೆ ಮಾಡಿಕೊಂಡ ಅಮ್ಮ
ಕಷ್ಟಪಟ್ಟು ಜೀವನ ಮಾಡ್ತಿದ್ದ ಫ್ಯಾಮಿಲಿ, ತಾನೂ ಕಷ್ಟಪಟ್ಟು ದುಡಿಯೋನು ಆದರೆ ಅದ್ಯಾಕೆ ತಮ್ಮ ಅಂದ್ರೆ ಅಷ್ಟು ಉರಿದು ಬೀಳ್ತಿದ್ನೋ ಗೊತ್ತಿಲ್ಲ. ರಾಮಕೃಷ್ಣ-ಬಾಲಕೃಷ್ಣ ಅಂತಾ ಹೆಸ್ರಲ್ಲಿ ಜೊತೆಯಿದ್ದರು, ಜೀವನದಲ್ಲಿ ತಮ್ಮನನ್ನೇ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
