*  ಪೇದೆ ಹತ್ಯೆ ಪ್ರಕರಣದಲ್ಲಿ ಮಗ, ಮಗಳೇ ಆರೋಪಿ*  ಆರೋಪಿಗಳನ್ನ ಬಂಧಿಸಿದ ಎಪಿಎಂಸಿ ನವನಗರ ಪೊಲೀಸರು*  ಗದಗದ ಕಣವಿ ಗ್ರಾಮದ ಇಸ್ಮಾಯಿಲ್‌ ಸಾಬ್‌ ಮೃತ ಪೇದೆ

ಹುಬ್ಬಳ್ಳಿ(ಜು.02): ಮಲತಾಯಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕೆಎಸ್‌ಆರ್‌ಪಿ ಪೇದೆಯಾಗಿದ್ದ ತಮ್ಮ ತಂದೆಯನ್ನೇ ಕೊಲೆಗೈದಿರುವ ಪ್ರಕರಣದಲ್ಲಿ ಪುತ್ರ, ಪುತ್ರಿ ಸೇರಿ ಐವರನ್ನು ಎಪಿಎಂಸಿ ನವನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಇಸ್ಮಾಯಿಲ್‌ ಸಾಬ್‌ ಪುತ್ರ ಫಕ್ರುಸಾಬ್‌ ಕಿಲ್ಲೇದಾರ, ಪುತ್ರಿ ದಾವಲಮುನ್ನಿ ಕಾಲೇಖಾನ್‌, ಶಿಕಾರಿಪುರದ ಶಿವಕುಮಾರ ಆರಿಕಟ್ಟಿ, ಈಶ್ವರ ಆರಿಕಟ್ಟಿ, ಮಂಟೂರು ರಸ್ತೆಯ ರೋಹನ್‌ ಕರಾ ಬಂಧಿತರು.

'ತುಂಬಾ ಒಳ್ಳೆ ಕೆಲಸ ಮಾಡಿದ್ದಿ ಬ್ರದರ್':‌ ಫೇಸ್‌ಬುಕ್‌ನಲ್ಲಿ ಕನ್ಹಯ್ಯಾ ಹತ್ಯೆ ವಿಡಿಯೋ ಹೊಗಳಿದ ವ್ಯಕ್ತಿ ಬಂಧನ!

ಗದಗದ ಕಣವಿ ಗ್ರಾಮದ ಇಸ್ಮಾಯಿಲ್‌ ಸಾಬ್‌ (54)ರ ಮೃತದೇಹ ಸುತಗಟ್ಟಿ ಕಾನೂನು ಕಾಲೇಜು ಬಳಿ ಬುಧವಾರ ಪತ್ತೆಯಾಗಿತ್ತು. ಈ ಬಗ್ಗೆ 2ನೇ ಪತ್ನಿ ಕಾತುನಬಿ ಕಿಲ್ಲೇದಾರ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಪತ್ನಿ ಸಾವಿನ ನಂತರ ಇಸ್ಮಾಯಿಲ್‌ 2ನೇ ಮದುವೆಯಾಗಿದ್ದರು. ಮಲತಾಯಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮಕ್ಕಳು ತಂದೆ ಜೊತೆ ಆಗಾಗ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಸಿಟ್ಟಿಂದ ತಂದೆಯನ್ನು ಯಾವುದೋ ನೆಪ ಹೇಳಿ ಆಟೋದಲ್ಲಿ ಕರೆದೊಯ್ದು, ಸ್ನೇಹಿತರ ನೆರವಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.