Asianet Suvarna News Asianet Suvarna News

ನಿಂತಿದ್ದ ಕಾರ್ ಮೇಲೆ ಹರಿದ ಟ್ರಕ್, ಒಂದೇ ಕುಟುಂಬದ 8 ಮಂದಿ ಸಾವು

* ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಎಂಟು ಮಂದಿ  ಸಾವು
* ಉತ್ತರ ಪ್ರದೇಶ ಮೂಲದವರಿಗೆ ಯಮನಾಗಿ ಬಂದ ಟ್ರಕ್
* ನಿಂತಿದ್ದ ಎರ್ಟಿಗಾ ಮೇಲೆ ಹರಿದ ಲಾರಿ

Eight of family killed in road accident Haryana mah
Author
Bengaluru, First Published Oct 22, 2021, 6:00 PM IST
  • Facebook
  • Twitter
  • Whatsapp

ಹರ್ಯಾಣ(ಅ. 22)  ಭೀಕರ ರಸ್ತೆ ಅಪಘಾತದಲ್ಲಿ(Road Accident) ಒಂದೇ ಕುಟುಂಬದ  8  ಜನ ದುರಂತ (Death) ಸಾವಿಗೀಡಾಗಿದ್ದಾರೆ.  ಹರ್ಯಾಣ  ಜಜ್ಜರ್ ಜಿಲ್ಲೆಯ ಬಹದ್ದೂರ್​ಗಢ್​​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮಗು ಸೇರಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ.

ವೇಗವಾಗಿ ಬಂದ ಟ್ರಕ್ ಎರ್ಟಿಗಾದ ಮೇಲೆ ಹರಿದಿದೆ. Kundli-Manesar-Palwal (KMP) ರಸ್ತೆ ಬದಿ ನಿಲ್ಲಿಸಿದ್ದ ಎರ್ಟಿಗಾದ ಮೇಲೆ ಟ್ರಕ್ ಹರಿದಿದೆ.

ದುರಂತದಲ್ಲಿ ಸಾವಿಗೀಡಾದವರು ಉತ್ತರ ಪ್ರದೇಶ ಮೂಲದವರು ಎಂಬುದು ತಿಳಿದು ಬಂದಿದೆ.  ರಾಜಸ್ಥಾನದ ದೇವಾಲಯವೊಂದಕ್ಕೆ ತೆರಳಿ ಊರಿನ ಕಡೆ ವಾಪಾಸಾಗುತ್ತಿದ್ದ ವೇಳೆ ಘೋರ ಅವಘಡ ಸಂಭವಿಸಿದೆ.

ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದ ಟ್ರಕ್, 18  ಜನರ ಪ್ರಾಣ ಹೋಯ್ತು

ಚಾಲಕ ಸೇರಿ ಎರ್ಟಿಗಾದಲ್ಲಿ ಹನ್ನೊಂದ ಮಂದಿ ಪ್ರಯಾಣಿಸುತ್ತಿದ್ದರು  ವೇಗವಾಗಿ ಬಂದ ಟ್ರಕ್ ನಿಂತಿದ್ದ ಎರ್ಟಿಗಾಕ್ಕೆ ಹಿಂದಿನಿಂದ ಗುದ್ದಿದೆ. ಚಾಲಕ ಮತ್ತು ಒಬ್ಬ ಮಹಿಳೆ ಸ್ವಲ್ಪ ದೂರದಲ್ಲಿ ನಿಂತಿದ್ದರಿಂದ ಬಚಾವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಲಾರಿ ಚಾಲಕನ ಮೇಲೆ  ಅಜಾಗರೂಕತೆಯ ವಾಹನ ಚಾಲನೆ (279 (rash driving)) ನಿರ್ಲಕ್ಷ್ಯದಿಂದ ಬೇರೆಯವರ ಸಾವಿಗೆ ಕಾರಣ  304-A (causing death due to negligence) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಪೊಲೀಸರು ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಪ್ರವಾಸ ಹೊರಟಿದ್ದ ಬಾಲ್ಯ ಗೆಳತಿಯರು ಘೋರ ಅಪಘಾತದಲ್ಲಿ ಕಳೆದ ವರ್ಷ ಬಲಿಯಾಗಿದ್ದರು.

Eight of family killed in road accident Haryana mah

Follow Us:
Download App:
  • android
  • ios