ಒಡಿಶಾದ ಮೂವರು ಸೇರಿ 8 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ

  • ಒಡಿಶಾದಿಂದ ರೈಲು ಮತ್ತು ಕಾರಲ್ಲಿ ಗಾಂಜಾ ತಂದು ನಗರದಲ್ಲಿ ಮಾರಾಟ
  • ವಿಲ್ಸನ್‌ ಗಾರ್ಡನ್‌ನಲ್ಲಿ 1.20 ಲಕ್ಷ ಮೌಲ್ಯದ ಗಾಂಜಾ ಜಪ್ತಿ
  • ಆಂದ್ರದಿಂದ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದವನ ಸೆರೆ

 

Eight drug peddlers arrested including three from Odisha in bengaluru gow

ಬೆಂಗಳೂರು (ಜು.13): ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎಂಟು ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ನರೇಶ್‌ ಬೆಹೆ​ರಾ​(47), ಅಕ್ಷಯ್‌ ಬಿಂದಾನಿ (35), ತಪನ್‌ ಕುಮಾರ್‌ ಪಾಂಡಾ (27), ಮೈಸೂ​ರಿನ ಶೇಖ್‌ ಮಸ್ತಾನ್‌ (47), ಖಾಸೀಮ್‌ ಷರೀ​ಪ್‌​ (39), ಕಂದÜ (48), ನಂದೀಶ್‌ (27) ಮತ್ತು ಯಾಸೀನ್‌ ಪಾಷಾ(36) ಬಂಧಿ​ತರು. ಇವರಿಂದ .32.40 ಲಕ್ಷ ಮೌಲ್ಯ​ದ 55 ಕೆ.ಜಿ. 810 ಗ್ರಾಂ ಗಾಂಜಾ ಮತ್ತು ಒಂದು ಕಾರು ಜಪ್ತಿ ಮಾಡ​ಲಾ​ಗಿದೆ. ಚಿಕ್ಕಬೇಗೂರು ಬಸಾಪುರ ಮುಖ್ಯರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ನರೇಸ್‌ ಬೆಹೆರಾ, ಅಕ್ಷಯ್‌ ಬಿಂದಾನಿ, ತಪನ್‌ ಕುಮಾರ್‌ ಪಂಡಾ ಒಡಿಶಾ ಮೂಲ​ದ​ವ​ರು. ಒಡಿ​ಶಾ​ದಿಂದ ರೈಲು ಹಾಗೂ ಕಾರಿನಲ್ಲಿ ಗಾಂಜಾವನ್ನು ನಗ​ರಕ್ಕೆ ತಂದು ಸ್ಥಳೀಯ ಪೆಡ್ಲ​ರ್‌​ಗಳ ಜತೆ ವ್ಯವ​ಹಾರ ಕುದುರಿಸಿ, ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡುತ್ತಿದ್ದರು. ಇತ್ತೀ​ಚೆಗೆ ಠಾಣೆ ವ್ಯಾಪ್ತಿಯ ಚಿಕ್ಕ​ಬೇ​ಗೂರು ಬಸಾ​ಪುರ ಮಖ್ಯ ರಸ್ತೆಯಲ್ಲಿ ನರೇಶ್‌ ಬೆಹೆರಾ ಗಾಂಜಾ ಮಾರಾಟ ಮಾಡು​ತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಬಂಧಿ​ಸ​ಲಾ​ಗಿ​ದೆ. ಬಳಿಕ ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಇತರೆ ಆರೋ​ಪಿ​ಗ​ಳನ್ನು ಬಂಧಿ​ಸ​ಲಾ​ಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru; ಗಾಂಜಾ ಹಣದಲ್ಲಿ ಖರೀದಿಸಿದ್ದ 8 ಎಕರೆ ಜಾಗ ಜಪ್ತಿ, ಬ್ಯಾಂಕ್‌ನಲ್ಲಿ 2ಕೋಟಿ!

ವಿಲ್ಸನ್‌ ಗಾರ್ಡನ್‌ನಲ್ಲಿ 1.20 ಲಕ್ಷ ಮೌಲ್ಯದ ಗಾಂಜಾ ಜಪ್ತಿ
ಬೆಂಗಳೂರು (ಜು.13): ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್‌ನನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಸಂಜಯ್‌(28) ಬಂಧಿತ. ಈತನಿಂದ 1.20 ಲಕ್ಷ ರು. ಮೌಲ್ಯದ 3.59 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವಿಲ್ಸನ್‌ ಗಾರ್ಡನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸಂಜಯ್‌ ನೆರೆ ರಾಜ್ಯದ ಡ್ರಗ್‌್ಸ ಪೆಡ್ಲರ್‌ಗಳಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ನಗರಕ್ಕೆ ತಂದು ದುಬಾರಿ ದರಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಈ ಸಂಬಂಧ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದವನ ಸೆರೆ
ಬೆಂಗಳೂರು (ಜು.13): ಆಂಧ್ರ​ಪ್ರ​ದೇ​ಶದ ವಿಶಾಖ​ಪ​ಟ್ಟ​ಣಂನಿಂದ ಅಕ್ರಮವಾಗಿ ಗಾಂಜಾ ತಂದು ಕಾಲೇಜು ವಿದ್ಯಾ​ರ್ಥಿ​ಗ​ಳಿಗೆ ಮಾರಾಟ ಮಾಡು​ತ್ತಿದ್ದ ಅಂತಾರಾಜ್ಯ ಡ್ರಗ್‌್ಸ ಪೆಡ್ಲರ್‌ನನ್ನು ಹುಳಿ​ಮಾವು ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ಆಂಧ್ರಪ್ರದೇಶದ ವಿಜ​ಯ​ವಾಡ ಮೂಲ​ದ ರಾಜ​ರತ್ನ (27) ಬಂಧಿತ. ಈತನಿಂದ .15 ಲಕ್ಷ ಮೌಲ್ಯದ 25 ಕೆ.ಜಿ.ಗಾಂಜಾ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆರೋಪಿಯು ಹುಳಿಮಾವು ಠಾಣಾ ವ್ಯಾಪ್ತಿಯ ಬಸ​ವ​ನ​ಪುರ ಗ್ರಾಮದ ಕಾಲೇ​ಜೊಂದರ ಬಳಿ ಗಾಂಜಾ ಮಾರಾಟ ಮಾಡು​ತ್ತಿದ್ದ. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಬಂಧಿ​ಸ​ಲಾ​ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ಕಡಿಮೆ ದರಕ್ಕೆ ವಿಶಾಖಪಟ್ಟಣಂನಲ್ಲಿ ಗಾಂಜಾ ಖರೀದಿಸಿ ನಗರಕ್ಕೆ ತಂದು, ಕಾಲೇಜು ವಿದ್ಯಾರ್ಥಿಗಳಿಗೆ ದುಬಾರಿ ಹಣಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios