ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕ ವೃದ್ಧ ದಂಪತಿ ಮೇಲೆ ಯುವಕನಿಂದ ಮೂತ್ರ ವಿಸರ್ಜನೆ

ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕ ವೃದ್ಧ ದಂಪತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಯುವಕ. 

Drunk passenger urinates on senior citizens onboard train in Uttar pradesh gow

ಝಾನ್ಸಿ (ಅ.7): ಕುಡಿದ ಮತ್ತಿನಲ್ಲಿ ಪ್ರಯಾಣಿಕರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹಲವು ಘಟನೆಗಳ ಇತ್ತೀಚೆಗೆ ವಿಮಾನದಲ್ಲಿ ನಡೆದಿದ್ದವು. ಆದರೆ ಇದೀಗ ಇದೇ ರೀತಿ ಪ್ರಕರಣ ರೈಲಲ್ಲೂ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ರೈಲಿನಲ್ಲಿ ಮಲಗಿದ್ದ ಹಿರಿಯ ದಂಪತಿಗಳ ಮೇಲೆ ಮೂತ್ರ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನ ಬಿ3 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕ ಕುಡಿದ ಅಮಲಿನಲ್ಲಿದ್ದಾಗ ಶೌಚಾಲಯದೆಡೆಗೆ ತೆರಳುವ ಬದಲು ಪಕ್ಕದ ಕ್ಯಾಬಿನ್‌ಗೆ ತೆರಳಿದ್ದ. ಅಲ್ಲಿ ಮಲಗಿದ್ದ ಹಿರಿಯ ದಂಪತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಬಳಿಕ ದಂಪತಿಗಳು ಪೊಲೀಸರಿಗೆ ದೂರಿತ್ತರು. ತದ ನಂತರ  ಆತನನ್ನು ಝಾನ್ಸಿಯಲ್ಲಿ ಬಂಧಿಸಿ ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಲಾಯಿತು ಎಂದು ಉತ್ತರ ಕೇಂದ್ರ ರೈಲ್ವೆ ತಿಳಿಸಿದೆ.

 ಹಣಕ್ಕಾಗಿ ನೀಟ್‌ ತಯಾರಿಯಲ್ಲಿದ್ದ ವಿದ್ಯಾರ್ಥಿ ಅಪಹರಿಸಿ ಕೊಲೆ, ಶವ ಸೂಟ್‌ಕೇಸ್‌ನಲ್ಲಿಟ್ಟ ಹೋಟೆಲ್ ಮಾಲೀಕ!

ಬುಧವಾರ (ಅಕ್ಟೋಬರ್ 4) ರೈಲು ವಿರಂಗನ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ಕಡೆಗೆ ಪ್ರಯಾಣಿಸುವಾಗ B3 ಕೋಚ್ ಒಳಗೆ ಈ ಘಟನೆ ಸಂಭವಿಸಿದೆ. ವಯಸ್ಸಾದ ದಂಪತಿಗಳು ಕೆಳ ಬರ್ತ್ ಸಂಖ್ಯೆ 57 ಮತ್ತು 60 ರಲ್ಲಿ ಮಲಗಿದ್ದರು, ಆಗ ಇಪ್ಪತ್ತರ ಆಸುಪಾಸಿನ ವ್ಯಕ್ತಿ, ಅವರ ಮೇಲೆ ಮತ್ತು ಅವರ ಲಗೇಜ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಅವರು ಆಘಾತಕ್ಕೊಳಗಾದರು.

ಇದು ನಮಗೆ ಆಘಾತಕಾರಿಯಾಗಿದೆ. ರಾಷ್ಟ್ರ ರಾಜಧಾನಿಗೆ ನಮ್ಮ ಪ್ರಯಾಣವು ಶಾಂತಿಯುತವಾಗಿರಬೇಕಿತ್ತು, ಆದರೆ ನಮ್ಮ ನಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ ಎಂದು ಕನಸಿನಲ್ಲೂ ನಾವು ಭಾವಿಸಿರಲಿಲ್ಲ" ಎಂದು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದನಿವೃತ್ತ ಮೂಳೆಚಿಕಿತ್ಸಕರಾದ ಪ್ರಯಾಣಿಕರೊಬ್ಬರು ಹೇಳಿದರು.

 ಅಂಬಾನಿ ಭಾವೀ ಸೊಸೆ ರಾಧಿಕಾ ಮರ್ಚೆಂಟ್‌ ಸಹೋದರಿ ಕೂಡ

ಆರೋಪಿಯು ಮಹೋಬಾದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು ಮತ್ತು ಕೆಳಗಿನ ಬರ್ತ್ ಸಂಖ್ಯೆ 63 ರಲ್ಲಿ ಪ್ರಯಾಣಿಸುತ್ತಿದ್ದನು. ಅವನನ್ನು ನೈಋತ್ಯ ದೆಹಲಿಯ ಕುತುಬ್ ವಿಹಾರ್‌ನ ರಿತೇಶ್ ಎಂದು ಗುರುತಿಸಲಾಗಿದೆ.

Latest Videos
Follow Us:
Download App:
  • android
  • ios