ದಾರಿಯಲ್ಲಿ ತನ್ನಪಾಡಿಗೆ ಸಾಗುತ್ತಿದ್ದ ಮಹಿಳೆಯನ್ನು ಬಲವಂತಾಗಿ ಹಿಡಿದು ಎಳೆದಾಡಿ, ಆಕೆಯನ್ನು ವಿವಸ್ತ್ರಗೊಳಿಸಲಾಗಿದೆ. ಕಿಡಿಗೇಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನ ತಾಯಿಯ ಎದುರೇ ಕಿಡಿಗೇಡಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಾನೆ.

ಹೈದರಾಬಾದ್(ಆ.07) ದಾರಿಯಲ್ಲಿ ಸಾಗುತ್ತಿದ್ದ ಮಹಿಳೆಯನ್ನು ನಗ್ನಗೊಳಿಸಿ ಕಿರುಕುಳ ನೀಡಿದ ಬೆಚ್ಚಿಬೀಳಿಸುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ. ಕುಡಿತ ನಶೆ ಏರಿಸಿಕೊಂಡ ವ್ಯಕ್ತಿ, ಮಹಿಳೆಯನ್ನು ಹಿಡಿದು ಎಳೆದಿದ್ದಾನೆ. ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಉಡುಪುಗಳನ್ನು ಹಿಡಿದೆಳೆದಿದ್ದಾನೆ. 15 ನಿಮಿಷಗಳ ಕಾಲ ಮಹಿಳೆ ನಗ್ನವಾಗಿ ನಡು ರಸ್ತೆಯಲ್ಲೇ ನಿಲ್ಲಬೇಕಾಯಿತು. ಇತ್ತ ಕುಡಿತದ ನಶೆ ಏರಿಸಿಕೊಂಡ ವ್ಯಕ್ತಿಯ ತಾಯಿ ಕೂಡ ಸ್ಥಳದಲ್ಲಿದ್ದು ಬಿಡಿಸುವ ಪ್ರಯತ್ನವೇ ಮಾಡಿಲ್ಲ. ಇನ್ನು ಇದೇ ದಾರಿಯಲ್ಲಿ ಸಾಗಿದ ಹಲವರು ತಮ್ಮ ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ, ಆದರೆ ಮಹಿಳೆಯ ಸಹಾಯಕ್ಕೆ ಬರಲಿಲ್ಲ. ಸಂಪೂರ್ಣ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಭಯಾನಕ ಘಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬಾಲಾಜಿ ನಗರದ ಕೂಲಿ ಕಾರ್ಮಿಕ ಪೆದ್ದಮಾರಯ್ಯ ಭಾನುವಾರ ರಾತ್ರಿ 8.30ರ ವೇಳೆ ಕಂಠಪೂರ್ತಿ ಕುಡಿದು ತನ್ನ ತಾಯಿ ಜೊತೆ ರಸ್ತೆಯಲ್ಲಿ ನಡೆದುಕೊಂಡು ಸಾಗಿದ್ದಾನೆ. ಇದೇ ದಾರಿಯಲ್ಲಿ ಬರುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿದ ಪೆದ್ದಮಾರಯ್ಯ, ಕಿರುಕುಳ ನೀಡಲು ಶುರುಮಾಡಿದ್ದಾನೆ. ಆತನಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಮಹಿಳೆಗೆ ಹಲ್ಲೆ ಮಾಡಿ ಆಕೆಯ ಉಡುಪನ್ನು ಎಳದು ಹರಿದಿದ್ದಾನೆ. 15 ರಿಂದ 20 ನಿಮಿಷಗಳ ಕಾಲ ರಂಪಾಟ ನಡೆದಿದೆ.

ಬಂಗಾಳ ಮಹಿಳಾ ಬಿಜೆಪಿ ಕಾರ್ಯಕರ್ತೆಯನ್ನು ನಗ್ನಗೊಳಿಸಿ ಮೆರವಣಿಗೆ, ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಂಸದೆ!

ನಡು ರಸ್ತೆಯಲ್ಲಿ ಪೆದ್ದಮಾರಯ್ಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಿರುಕುಳು ನೀಡುತ್ತಿದ್ದ. ಇದೇ ದಾರಿಯಲ್ಲಿ ಹಲವರು ಸಾಗಿದ್ದಾರೆ. ಆದರೆ ಯಾರೊಬ್ಬರು ನೆರವಿಗೆ ಬಂದಿಲ್ಲ. ಇನ್ನೂ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಮುಂದೆ ಸಾಗಿದ್ದಾರೆ. ಮತ್ತೊಂದು ದುರಂತ ಎಂದರೆ ಪೆದ್ದಮಾರಯ್ಯನ ತಾಯಿ ಕೂಡ ಸ್ಥಳದಲ್ಲಿದ್ದರೂ, ಈತನ ಕೌರ್ಯವನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಮಹಿಳೆಗೆ ನೆರವು ಕೂಡ ನೀಡಿಲ್ಲ.

Scroll to load tweet…

ಸುಮಾರು 20 ನಿಮಿಷಗಳ ಬಳಿಕ ಈ ದಾರಿಯಲ್ಲಿ ಬಂದ ಕೆಲವರು ಪೆದ್ದಮಾರಯ್ಯನಿಂದ ಮಹಿಳೆಯನ್ನು ಬಿಡಿಸಿ ಆಕೆಗೆ ವಸ್ತ್ರ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಗೆ ರಕ್ಷಣೆ ನೀಡಿ ಠಾಣೆಗೆ ಕರೆದೊಯ್ದಿದ್ದಾರೆ. ಮತ್ತೊಂದು ತಂಡ, ಆರೋಪಿಗೆ ಹುಡುಕಾಟ ಆರಂಭಿಸಿದ್ದಾರೆ. ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಬಾಲಿಜಿ ನಗರದ ಪಕ್ಕದ ರಸ್ತೆ ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿ ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ, ಫೋಟೊ ತೆಗೆದು ವಾಟ್ಸ್‌ಆಪ್‌ನಲ್ಲಿ ಹಂಚಿದ ಶಿಕ್ಷಕ

ಈ ಘಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಸ್ತೆಯಲ್ಲಿ ಸಾಗುವ ಮಹಿಳೆಯರಿಗೆ ರಕ್ಷಣೆ ಇಲ್ಲ. ಇದೇ ರಸ್ತೆಯಲ್ಲಿ ಹಲವರು ಸಾಗುತ್ತಿದ್ದರೂ ಯಾರೊಬ್ಬರು ನೆರವಿಗೆ ಬಂದಿಲ್ಲ. ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಬಾಲಾಜಿ ನಗರದಲ್ಲಿ ಸಂಜೆಯಾದರೆ ಸಾಕು ಕುಡುಕರ ಸಂಖ್ಯೆ ಮೀತಿ ಮೀರುತ್ತಿದೆ. ರಸ್ತೆ ಬದಿಯಲ್ಲಿ ಜಗಳ, ಹೊಡೆದಾಟಗಳು ನಡೆಯುತ್ತದೆ. ಮಹಿಳೆಯರು ಮಾತ್ರವಲ್ಲ, ಈ ರಸ್ತೆಯಲ್ಲಿ ಸಾಗುವ ಯಾರಿಗೂ ರಕ್ಷಣೆ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.