*  ಇಬ್ಬರು ವಿದ್ಯಾರ್ಥಿಗಳು ಸೇರಿ 6 ಮಂದಿ ಬಂಧನ*  ಮಡಿವಾಳ ಸಮೀಪ ಡ್ರಗ್ಸ್‌ ಪೂರೈಕೆಗೆ ಸಜ್ಜಾಗಿದ್ದ ಆರೋಪಿಗಳು*  ಈ ದಾಳಿ ವೇಳೆ ತಪ್ಪಿಸಿಕೊಂಡ ಇಬ್ಬರು ಪ್ರಮುಖ ಆರೋಪಿಗಳು 

ಬೆಂಗಳೂರು(ಡಿ.08): ದಿನಸಿ(Groceries) ಪೂರೈಕೆ ಸೋಗಿನಲ್ಲಿ ತಮ್ಮ ಗ್ರಾಹಕರ(Customers) ಮನೆಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿ ಸೇರಿದಂತೆ ಆರು ಮಂದಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಮಡಿವಾಳ ವೆಂಕರಮಣ ಲೇಔಟ್‌ ನಿವಾಸಿ ಪ್ರವಣ್‌, ಎಚ್‌ಎಸ್‌ಆರ್‌ ಲೇಔಟ್‌ನ ಶ್ಯಾಮ್‌ದಾಸ್‌, ಬಂಡೇಪಾಳ್ಯದ ಮೊಹಮ್ಮದ್‌ ಝಕಾರಿಯಾ, ಶಾಮೀಲ್‌ ಹಾಗೂ ಅನುಭವ್‌ ರವೀಂದ್ರನ್‌ ಬಂಧಿತರು(Arrest).

ಆರೋಪಿಗಳಿಂದ 27 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 20 ಎಲ್‌ಎಸ್‌ಡಿ ಸ್ಟ್ರೀಫ್ಸ್‌ ಹಾಗೂ ಗಾಂಜಾ(Marijuana) ಸೇರಿದಂತೆ 10 ಲಕ್ಷ ಮೌಲ್ಯದ ಡ್ರಗ್ಸ್‌(Drugs) ಜಪ್ತಿ ಮಾಡಲಾಗಿದೆ. ಮಡಿವಾಳ ಸಮೀಪ ಡ್ರಗ್ಸ್‌ ಪೂರೈಕೆಗೆ ಆರೋಪಿಗಳು(Accused) ಸಜ್ಜಾಗಿದ್ದ ಖಚಿತ ಮಾಹಿತಿ ಪಡೆದು ಮಾದಕ ವಸ್ತು ನಿಗ್ರಹ ದಳದ ಇನ್ಸ್‌ಪೆಕ್ಟರ್‌ ಆರ್‌.ದೀಪಕ್‌ ತಂಡ ಕಾರ್ಯಾಚರಣೆ ನಡೆಸಿತು. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತಿಬ್ಬರು ಪ್ರಮುಖ ಆರೋಪಿಗಳ ಪತ್ತೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

CCB Raid: ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!

ಈ ಆರೋಪಿಗಳು ಮೂಲತಃ ಕೇರಳದವರಾಗಿದ್ದು(Kerala), ಎರಡು ವರ್ಷಗಳಿಂದ ಡ್ರಗ್ಸ್‌ ದಂಧೆಯಲ್ಲಿ(Drugs Racket) ತೊಡಗಿದ್ದರು. ಪ್ರಣವ್‌ ಮತ್ತು ಶ್ಯಾಮ್‌ದಾಸ್‌ ಅವರು ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನುಳಿದ ಆರೋಪಿಗಳು ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿದ್ದರು. ಮೊದಲು ಮಾದಕ ವಸ್ತು ವ್ಯಸನಿಗಳಾಗಿದ್ದ ಈ ಗೆಳೆಯರು, ಬಳಿಕ ಡ್ರಗ್ಸ್‌ ಮಾರಾಟದಲ್ಲಿ ತೊಡಗಿದ್ದಾರೆ. ಆನ್‌ಲೈನ್‌ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಈ ತಂಡ, ನಂತರ ಆ ಗ್ರಾಹಕರ ಮನೆಗೆ ದಿನಸಿ ಪೂರೈಕೆ ಸೋಗಿನಲ್ಲಿ ಮಾದಕ ವಸ್ತು ತಲುಪಿಸುತ್ತಿದ್ದರು. ಐಟಿ-ಬಿಟಿ ಉದ್ಯೋಗಿಗಳು(IT-BT Employees) ಹಾಗೂ ಶಾಲಾ ವಿದ್ಯಾರ್ಥಿಗಳನ್ನೇ(Students) ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಂಜಾ ನಶೆಯಲ್ಲಿ ಪುಂಡಾಟ: 5 ಆಪ್ರಾಪ್ತರು ಪೊಲೀಸರ ವಶಕ್ಕೆ

ಬೆಂಗಳೂರು: ಗಾಂಜಾ ನಶೆಯಲ್ಲಿ ಮನೆಗಳ ಮೇಲೆ ಕಲ್ಲು ತೂರುವುದು ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ನಾಗರಿಕರಿಂದ ಹಣ ಸುಲಿಗೆ ಮಾಡುವ ಕೃತ್ಯಗಳಲ್ಲಿ ತೊಡಗಿದ್ದ ಐವರು ಅಪ್ರಾಪ್ತರನ್ನು(Minor) ಪುಲಿಕೇಶಿನಗರದ ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ.

ಅಕ್ರಮ ಗಾಂಜಾ ಮಾರಾಟ : ಮೂವರು ಅರೆಸ್ಟ್

ಗಾಂಜಾ ನಶೆಯಲ್ಲಿ ಐವರು ಬಾಲಕರು ಮನೆಗಳ ಮೇಲೆ ಕಲ್ಲೆ ಎಸೆದು ಪುಂಡಾಟಿಕೆ ಪ್ರದರ್ಶಿಸಿದ್ದರು. ರಸ್ತೆಯಲ್ಲಿ ವೃದ್ಧರೊಬ್ಬರಿಗೆ ಲಾಂಗ್‌ ಬೀಸಿ ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಹೀಗಾಗಿ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಚಟಕ್ಕೆ ಬಿದ್ದಿದ್ದ ಯುವಕರು ರಾತ್ರಿ ವೇಳೆ ರಸ್ತೆಯಲ್ಲಿ ಬರುವವರನ್ನು ತಡೆದು ದರೋಡೆ(Robbery) ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡಗಳಿಗೆ ನುಗ್ಗಿ ಕಬ್ಬಿಣ, ಸಿಮೆಂಟ್‌ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಗಾಂಜಾ, ಸಿಗರೆಟ್‌, ಮದ್ಯ ಇತರೆ ಶೋಕಿಗಳಿಗೆ ವ್ಯಯಿಸುತ್ತಿದ್ದರು. ಕೆಲ ದಿನಗಳ ಹಿಂದೆ ಜೀವನಹಳ್ಳಿಯ ಬೀದಿಗಳಲ್ಲಿ ಹಲವು ಮನೆಗಳ ಮೇಲೆ ಕಲ್ಲು ತೂರಿದ್ದರು. ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿ ದರೋಡೆಗೆ ಯತ್ನಿಸಿದ್ದರು. ಈ ವೇಳೆ ಕಟ್ಟಡದ ಕೆಲಸಗಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಅವರ ಮೇಲೆ ಕಲ್ಲು ತೂರಿ, ದೊಣ್ಣೆಯಿಂದ ಹಲ್ಲೆ(Assault) ಮಾಡಿದ್ದರು. ಈ ಬಾಲಕರ ಹುಚ್ಚಾಟದಿಂದ ನಿವಾಸಿಗಳು ರೋಸಿ ಹೋಗಿದ್ದರು.
ಇವರ ಪುಂಡಾಟ ಹಲವು ಮನೆಗಳ ಸಿಸಿಟಿವಿ(CCTV) ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇವರ ಕಾಟ ತಳಲಾರದೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.