Asianet Suvarna News Asianet Suvarna News

ಡ್ರಗ್ಸ್ ದಂಧೆ: ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ, ಮೈಸೂರಲ್ಲಿ ಫಾರ್ಮ್ ಹೌಸ್ ಇರೋ ನಟ ಭಾಗಿ!

ಡ್ರಗ್ಸ್‌ ಪಟ್ಟಿಯಲ್ಲಿ ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ!| ಇಂದ್ರಜಿತ್‌ ಕೊಟ್ಟಿರುವ ಪಟ್ಟಿಯಲ್ಲಿ ಇವರ ಹೆಸರು|  ಉ.ಭಾರತದ ನಟಿ, ಧಾರಾವಾಹಿ ನಟ, ಸಂಗೀತ ನಿರ್ದೇಶಕನ ಹೆಸರೂ ಇದೆ| ಮೈಸೂರಿನಲ್ಲಿನ ನಟನ ಫಾಮ್‌ರ್‍ಹೌಸ್‌ ಕೂಡ ಪ್ರಸ್ತಾಪ

Drugs Mafia Indrajit Lankesh Reveals Shocking Information To CCB Police
Author
Bangalore, First Published Sep 2, 2020, 7:40 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.02): ಕನ್ನಡ ಚಿತ್ರರಂಗದಲ್ಲಿನ ಮಾದಕ ವಸ್ತು ಜಾಲದ ಸಂಬಂಧ ಸಿಸಿಬಿ ಪೊಲೀಸರಿಗೆ ನಿರ್ದೇಶಕ, ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಅವರ ಸಲ್ಲಿಸಿರುವ 15 ನಟ, ನಟಿಯರ ಪಟ್ಟಿಯಲ್ಲಿ ತ್ರಿಭಾಷಾ ತಾರೆ, ಜನಪ್ರಿಯ ಧಾರಾವಾಹಿ ನಟ, ಉತ್ತರ ಭಾರತ ಮೂಲದ ನಟಿ, ಸ್ಟಾರ್‌ ದಂಪತಿ ಹಾಗೂ ಮೈಸೂರು ಜಿಲ್ಲೆಯಲ್ಲಿರುವ ನಟನ ಫಾಮ್‌ರ್‍ ಹೌಸ್‌ ಹೆಸರು ಪ್ರಸ್ತಾಪವಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.

ಇಂದ್ರಜಿತ್‌ ಅವರ ಮಾಹಿತಿ ಆಧರಿಸಿ ಸಿಸಿಬಿ ತನಿಖೆ ಮುಂದುವರೆಸಿದ್ದು, ಮತ್ತೊಂದೆಡೆ ಆರೋಪಗಳಿಗೆ ಸೂಕ್ತವಾದ ಪುರಾವೆ ಸಲ್ಲಿಸುವಂತೆ ಸಹ ಇಂದ್ರಜಿತ್‌ ಅವರಿಗೆ ಸಿಸಿಬಿ ನೋಟಿಸ್‌ ನೀಡಿದೆ. ಆದರೆ ಸಿಸಿಬಿಗೆ ಇಂದ್ರಜಿತ್‌ ನೀಡಿರುವ ಪಟ್ಟಿಕುರಿತು ಅಧಿಕಾರಿಗಳಿಂದ ಖಚಿತ ಮಾಹಿತಿ ಇಲ್ಲ. ಊಹಾಪೋಹಗಳಿಗೆ ಮಾತ್ರ ಸಿಮೀತವಾಗಿದೆ.

15 ಹೆಸರು; ಇಂದ್ರಜಿತ್ ಬಳಿ ಸಿಸಿಬಿ ಕೇಳಿದ ಅಚ್ಚರಿ ಸಾಕ್ಷ್ಯಗಳು!

ಇಂದ್ರಜಿತ್‌ ಹೆಸರುಪ್ರಸ್ತಾಪಿಸಿದ್ದಾರೆ ಎನ್ನಲಾದ ನಟಿಯೊಬ್ಬರು ಕನ್ನಡದ ಹಲವು ಚಿತ್ರಗಳಲ್ಲಿ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡಾ ಮಿಂಚಿದ್ದರು. ಆದರೆ ಇತ್ತೀಚಿಗೆ ಚಲನಚಿತ್ರಗಳಲ್ಲಿ ಆಕೆಗೆ ಅವಕಾಶಗಳು ಕಡಿಮೆಯಾಗಿವೆ. ಸದಾ ಒಂದಿಲ್ಲೊಂದು ವಿವಾದಗಳಿಂದ ಸಾರ್ವಜನಿಕವಾಗಿ ನಟಿ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಸಹ ಹೋಟೆಲ್‌ವೊಂದರಲ್ಲಿ ಸ್ನೇಹಿತೆಯರ ಜತೆ ಜಗಳ ಮಾಡಿಕೊಂಡಿದ್ದರು. ಪಬ್‌ನಲ್ಲಿ ನಶೆಯಲ್ಲಿ ತೇಲಾಡುವ ದೃಶ್ಯಾವಳಿಗಳು ಸಹ ಪತ್ತೆಯಾಗಿವೆÜ. ಇದರಿಂದ ಮತ್ತೊಮ್ಮೆ ತ್ರಿಭಾಷೆ ತಾರೆಗೆ ಸಂಕಷ್ಟಎದುರಾಗಿದೆ ಎನ್ನಲಾಗಿದೆ.

ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕನಿಗೂ ಮಾದಕ ಗುಂಗು ಬಿಟ್ಟಿಲ್ಲ. ಹಲವು ಸೂಪರ್‌ ಹಿಟ್‌ ಗೀತೆಗಳಿಗೆ ಅವರು ರಾಗ ಸಂಯೋಜಿಸಿದ್ದಾರೆ. ಅಮಲೇರಿದ ಪಟ್ಟಿಯಲ್ಲಿ ಇವರ ಹೆಸರು ಉಲ್ಲೇಖವಾಗಿರುವುದು ಅಚ್ಚರಿ ತಂದಿದೆ. ಚಲನಚಿತ್ರ ನಟರು ಮಾತ್ರವಲ್ಲ ಧಾರಾವಾಹಿ ಕಲಾವಿದರಿಗೆ ಮಾದಕ ಕೆಸರು ಮೆತ್ತಿಕೊಂಡಿದೆ. ಕನ್ನಡದ ಜನಪ್ರಿಯ ಧಾರಾವಾಹಿ ನಟನಿಗೆ ಸಿಸಿಬಿ ತನಿಖೆ ತಟ್ಟಲಿದೆ ಎಂದು ಗೊತ್ತಾಗಿದೆ.

ಇವರು ಸ್ಟಾರ್ ನಟರಲ್ಲ, ಸಾಮಾಜಿಕ ದುಷ್ಕೃತ್ಯದ ರಾಯಭಾರಿಗಳು: ನಟ ಚೇತನ್ ಆಕ್ರೋಶ

ಚಿತ್ರರಂಗದಿಂದ ದೂರವಾಗಿರುವ ಕೆಲವು ಹಿರಿಯ ನಟಿಮಣಿಯರಿಗೂ ಮಾದಕ ಜಾಲ ಬಿಟ್ಟಿಲ್ಲ. ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುವ ಸಂಗೀತ ನಿರ್ದೇಶಕರೊಬ್ಬರಿಗೆ ಸಹ ಸಂಕಟ ಎದುರಾಗಿದೆ. ಈ ಸಂಗೀತ ನಿರ್ದೇಶಕರು ಜನಪದ, ವಚನಗಳು, ತತ್ವಪದಗಳಿಗೆ ಹೊಸ ಮಾದರಿಯ ಸಂಗೀತ ಸ್ಪರ್ಶ ನೀಡಿ ಜನಪ್ರಿಯಗೊಳಿಸಿದ ಖ್ಯಾತಿ ಪಡೆದಿದ್ದಾರೆ. ಇನ್ನು ಸ್ಟಾರ್‌ ದಂಪತಿ ಸಹ ಮಾದಕ ಜಾಲದ ಸುಳಿಗೆ ಸಿಲುಕಿದ್ದಾರೆ. ಹಲವು ಚಿತ್ರಗಳಲ್ಲಿ ದಂಪತಿ ಒಟ್ಟಿಗೆ ನಟಿಸಿದ್ದಾರೆ. ಈ ಸೂಪರ್‌ ಹಿಟ್‌ ಜೋಡಿ, ಖುಲ್ಲಂಖುಲ್ಲ ಜೀವನ ಶೈಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆಹಿಟ್‌ ಆಗಿದ್ದಾರೆ. ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ದಂಪತಿಗೆ ಮಾದಕ ವಸ್ತು ಸೇವನೆ ಚಟವಿದೆ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರು ಜಿಲ್ಲೆಯಲ್ಲಿ ಹಿರಿಯ ನಟನ ಫಾಮ್‌ರ್‍ ಹೌಸ್‌ನಲ್ಲಿ ನಡೆದಿರುವ ಪಾರ್ಟಿಗಳಿಗೆ ಡ್ರಗ್ಸ್‌ ಸರಾಗವಾಗಿ ಹರದಾಡಿದೆ. ಎರಡು ದಶಕಗಳಿಂದ ಚನಲಚಿತ್ರ ರಂಗದಲ್ಲಿರುವ ಆ ನಟ, ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಾರೆ. ಕೆಲವು ಬಾರಿ ವೈಯಕ್ತಿಕ ವಿಚಾರಗಳಿಂದ ಅವರು ವಿವಾದಕ್ಕೆ ಸಿಲುಕಿದ್ದರು. ಈಗ ಡ್ರಗ್ಸ್‌ ವಿವಾದದಲ್ಲೂ ಅವರ ಹೆಸರು ಉಲ್ಲೇಖವಾಗಿದೆ. ಹಲವು ಕಿರಿಯ ನಟರ ಪಾಲಿಗೆ ಆ ನಟನ ಫಾಮ್‌ರ್‍ ಹೌಸ್‌ನ ಡ್ರಗ್ಸ್‌ ಸೇವಿಸುವ ಅಡ್ಡೆಯಾಗಿದೆ. ಹಿರಿಯ ನಟರೊಬ್ಬರ ಇಬ್ಬರು ಮಕ್ಕಳು ಸಹ ವ್ಯಸನಿಗಳಾಗಿದ್ದಾರೆ ಎಂದು ಇಂದ್ರಜಿತ್‌ ಹೇಳಿದ್ದಾರೆ ಎನ್ನಲಾಗಿದೆ.

ಸಿಸಿಬಿಗೆ ದಾಖಲೆ ಸಲ್ಲಿಸಿದ ಇಂದ್ರಜಿತ್; ವಿಡಿಯೋದಲ್ಲಿರುವ ಆ ನಟಿ ಯಾರು?

ಡ್ರಗ್‌ ದಂಧೆ ಬಗ್ಗೆ ಗೊತ್ತಿಲ್ಲ: ಸುದೀಪ್‌

ನನಗೆ ರೈಸ್‌, ದಾಲ್‌ ಗೊತ್ತು, ಡ್ರಗ್ಸ್‌ ದಂಧೆ ಬಗ್ಗೆ ಗೊತ್ತಿಲ್ಲ. ಡ್ರಗ್ಸ್‌ ವಿಷಯದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕಳಂಕ ತರುವುದು ಸರಿಯಲ್ಲ ಎಂದು ನಟ ಸುದೀಪ್‌ ತುಮಕೂರಿನಲ್ಲಿ ಹೇಳಿದ್ದಾರೆ. ವಿವರ ಪುಟ-7

ಇಂದ್ರಜಿತ್‌ ಒಳ್ಳೆ ಕೆಲಸ ಮಾಡಿದ್ದಾರೆ-ದುನಿಯಾ ವಿಜಿ

ಡ್ರಗ್ಸ್‌ ಮಾಫಿಯಾ ವಿರುದ್ಧ ದನಿ ಎತ್ತುವ ಮೂಲಕ ಇಂದ್ರಜಿತ್‌ ಲಂಕೇಶ್‌ ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸರೂ ಡ್ರಗ್ಸ್‌ ದಂಧೆಯ ಕುರಿತು ಬೆಳಕು ಚೆಲ್ಲುವ ಕೆಲಸಕ್ಕೆ ಮುಂದಾಗಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ನಟ ದುನಿಯಾ ವಿಜಿ ಹೇಳಿದ್ದಾರೆ.

"

Follow Us:
Download App:
  • android
  • ios