ರಾಗಿಣಿಯನ್ನು ಜೈಲಲ್ಲಿ ಬಿಗಿದಪ್ಪಿ ಅತ್ತ ಸಂಜನಾ!

ರಾಗಿಣಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಕೂಡ ಡ್ರಗ್ ಮಾಫಿಯಾ ಕೇಸಲ್ಲಿ ಪರಪ್ಪನ ಅಗ್ರಹಾರ ಸೇರಿದ್ದು ಇಬ್ಬರನಗನೂ ಒಂದೇ ಕೋಣೆಯಲ್ಲಿ ಡಿಲಾಗಿದೆ. ರಾಗಿಣಿಯನ್ನು ಸಂಜನಾ ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ. 

Drug Mafia Sanjana Galrani Sent To Parappana Agrahara  Jail

ಬೆಂಗಳೂರು (ಸೆ.17):  ಮಾದಕ ವಸ್ತು ಮಾರಾಟ ಜಾಲದ ನಂಟು ಪ್ರಕರಣದಲ್ಲಿ ರಾಗಿಣಿ ದ್ವಿವೇದಿ ಬಳಿಕ ನಟಿ ಸಂಜನಾ ಗಲಾನ್ರಿ ಸಹ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಜೈಲು ಪ್ರವೇಶಿಸುವ ವೇಳೆ ಸಂಜನಾ ಕೆಲ ಸೆಕೆಂಡ್‌ಗಳು ಕಿರಿಕ್‌ ಸಹ ಮಾಡಿದ್ದಾಳೆ ಎನ್ನಲಾಗುತ್ತಿದೆ.

ಪೊಲೀಸ್‌ ವಶದಲ್ಲಿದ್ದಾಗ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಆಕೆಯನ್ನು ಸಿಸಿಬಿ ಪೊಲೀಸರು, ಕೋರ್ಟ್‌ ಆದೇಶಾನುಸಾರ ಬುಧವಾರ ಸಂಜೆ ಜೈಲಿಗೆ ಕರೆದೊಯ್ದರು. ಬಳಿಕ ಡ್ರಗ್ಸ್‌ ಕೇಸಲ್ಲೇ ಬಂಧಿತಳಾಗಿರುವ ನಟಿ ರಾಗಿಣಿ ಇರುವ ಅದೇ ಬ್ಯಾರಕ್‌ನ ಸೆಲ್‌ನಲ್ಲೇ ಸಂಜನಾರನ್ನೂ ಇರಿಸಲಾಯಿತು. 

ಡ್ರಗ್ಸ್‌ ಮಾಫಿಯಾ: ನಟಿಯರಿಗೆ ನಶೆಯೇರಿಸುತ್ತಿದ್ದ ಪೆಡ್ಲರ್‌ ಸೆರೆ!

ಸೆಲ್‌ಗೆ ಆಗಮಿಸಿದ ಸಂಜನಾಳನ್ನು ರಾಗಿಣಿ ಅಪ್ಪಿಕೊಂಡಳೆನ್ನಲಾಗಿದೆ. ಈ ವೇಳೆ ತಮಗೊದಗಿದ ಪರಿಸ್ಥಿತಿ ನೆನೆದು ಇಬ್ಬರು ನಟಿಯರು ಕಣ್ಣೀರು ಸುರಿಸಿದ್ದಾರೆ ಎಂದು ತಿಳಿದು ಬಂದಿದೆ.

2 ದಿನದಿಂದ ಜೈಲಲ್ಲಿರುವ ರಾಗಿಣಿ, ಈಗಾಗಲೇ ಜೈಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಾರಂಭಿಸಿದ್ದಾಳೆ.

Latest Videos
Follow Us:
Download App:
  • android
  • ios