ಬೆಂಗಳೂರು: ಮನೆ ಬಾಗಿಲಿಗೇ ಡ್ರಗ್ಸ್ ಡೆಲಿವರಿ: 3 ಝೋಮ್ಯಾಟೋ ಬಾಯ್ಸ್ ಸೆರೆ

ಮನೆ ಬಾಗಿಲಿಗೆ ಡ್ರಗ್‌್ಸ ಪೂರೈಸುತ್ತಿದ್ದ ಮೂವರು ‘ಝೋಮ್ಯಾಟೋ’ ಫುಡ್‌ ಡೆಲಿವರಿ ಬಾಯ್‌್ಸ ಹಾಗೂ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಪ್ರತ್ಯೇಕವಾಗಿ ಸಿಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.

Doorstep delivery of drug 3 Zomato boys arrested in bengaluru rav

ಬೆಂಗಳೂರು (ಫೆ.10) : ಮನೆ ಬಾಗಿಲಿಗೆ ಡ್ರಗ್‌್ಸ ಪೂರೈಸುತ್ತಿದ್ದ ಮೂವರು ‘ಝೋಮ್ಯಾಟೋ’ ಫುಡ್‌ ಡೆಲಿವರಿ ಬಾಯ್‌್ಸ ಹಾಗೂ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಪ್ರತ್ಯೇಕವಾಗಿ ಸಿಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.

ತಾಂಜೇನಿಯಾದ ಟಿಬೇರಿಯಸ್‌ ನ್ಯಾಕುಂಡಿ, ಕೀನ್ಯಾದ ಕೆರ್ರಿ ಸಾರಾ, ಮೊಹಮ್ಮದ್‌ ರಿಜ್ವಾನ್‌, ಕೇರಳದ ರಾಗೇಶ್‌, ಸಚಿನ್‌, ಶಾಹುಲ್‌, ಹಲಸೂರಿನ ಪ್ರಶಾಂತ್‌ ಹಾಗೂ ಪಶ್ಚಿಮ ಬಂಗಾಳದ ಸಿದ್ಧಾಂತ್‌ ಸೇರಿದಂತೆ 11 ಮಂದಿ ಬಂಧಿತರಾಗಿದ್ದು, ಆರೋಪಿಗಳಿಂದ 926.45 ಗ್ರಾಂ ಎಡಿಎಂಎ ಕ್ರಿಸ್ಟೆಲ್‌, 50.95 ಗ್ರಾಂ ತೂಕದ 117 ಎಡಿಎಂಎ ಎಕ್ಸೈಟೆಸಿ ಮಾತ್ರೆಗಳು, 3.83 ಗ್ರಾಂ 219 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು ಮತ್ತು 83.37 ಗ್ರಾಂ ಹ್ಯಾಶಿಸ್‌ ಆಯಿಲ್‌ ಸೇರಿದಂತೆ .1.34 ಕೋಟಿ ಮೌಲ್ಯದ ಡ್ರಗ್‌್ಸ ಹಾಗೂ 10 ಮೊಬೈಲ್‌ಗಳು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

 

Bengaluru crimes: ಸಾಲ ತೀರಿಸಲು ಪ್ರಯಾಣಿಕನ ಹಣ ಕದ್ದ ಆಟೋ ಚಾಲಕ ಸೆರೆ

ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಟಿಬೇರಿಯಸ್‌ ಹಾಗೂ ಕೆರ್ರಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರವೇಶಿಸಿ ಪಡೆದು ಬಾಣಸವಾಡಿ ಬಳಿ ನೆಲೆಸಿದ್ದರು. ‘ಆಫ್ರಿಕನ್‌ ಕಿಚನ್‌’ ಸರ್ಕಲ್‌ನಲ್ಲಿ ಡ್ರಗ್‌್ಸ ದಂಧೆಕೋರರಿಗೆ ಪರಿಚಯವಾಗಿದ್ದಾರೆ. ಬಳಿಕ ಹಣದಾಸೆಗೆ ಡ್ರಗ್‌್ಸ ಮಾರಾಟಕ್ಕಿಳಿದ್ದಿದ್ದರು.

ಫುಡ್‌ ಡೆಲವರಿ ಸೋಗಲ್ಲಿ ಡ್ರಗ್ಸ್:

ಕೆ.ಆರ್‌.ಪುರ ಸಮೀಪ ನೆಲೆಸಿದ್ದ ಶಾಹುಲ್‌, ಹಲಸೂರಿನ ಪ್ರಶಾಂತ್‌ ಹಾಗೂ ಪಶ್ಚಿಮ ಬಂಗಾಳದ ಸಿದ್ಧಾಂತ್‌, ಝೋಮಾಟೋ ಆ್ಯಪ್‌ನಲ್ಲಿ ಫುಡ್‌ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ಮನೆ ಬಾಗಿಲಿಗೆ ಡ್ರಗ್‌್ಸ ಪೂರೈಸುತ್ತಿದ್ದರು. ಆರು ತಿಂಗಳಿಂದ ಡ್ರಗ್‌್ಸ ಮಾರಾಟದಲ್ಲಿ ಇವರು ನಿರತರಾಗಿದ್ದರು. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಡಿ.ಕುಮಾರ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ದೀಪಕ್‌ ಹಾಗೂ ಮೊಹಮ್ಮದ್‌ ಮುಕ್ರಂ ತಂಡಗಳು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ: 7ನೇ ದಿನ ₹12.36 ಕೋಟಿ ಸಂಗ್ರಹ!

Latest Videos
Follow Us:
Download App:
  • android
  • ios