Bengaluru crimes: ಸಾಲ ತೀರಿಸಲು ಪ್ರಯಾಣಿಕನ ಹಣ ಕದ್ದ ಆಟೋ ಚಾಲಕ ಸೆರೆ

:ಕೆಲವು ನಿಮಿಷ ಕಾಯುವಂತೆ ಹೇಳಿ ಪ್ರಯಾಣಿಕರೊಬ್ಬರು ವೈದ್ಯರ ಬಳಿ ಹೋಗಿ ಬರುವುದರೊಳಗೆ .2 ಲಕ್ಷವಿದ್ದ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದ ಆಟೋ ಚಾಲಕನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Auto driver arrested for stealing passenger's money to pay off loan bengaluru rav

ಬೆಂಗಳೂರು (ಜ.31) :ಕೆಲವು ನಿಮಿಷ ಕಾಯುವಂತೆ ಹೇಳಿ ಪ್ರಯಾಣಿಕರೊಬ್ಬರು ವೈದ್ಯರ ಬಳಿ ಹೋಗಿ ಬರುವುದರೊಳಗೆ .2 ಲಕ್ಷವಿದ್ದ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದ ಆಟೋ ಚಾಲಕನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆಟೋ ಚಾಲಕ ತ್ಯಾಗರಾಜನಗರದ ರಂಗಸ್ವಾಮಿ (37) ಎಂಬಾತನಿಂದ .1.50 ಲಕ್ಷ ನಗದು ಹಾಗೂ ಆಟೋರಿಕ್ಷಾ ಜಪ್ತಿ ಮಾಡಲಾಗಿದೆ. ಬನಶಂಕರಿಯ ಅಶೋಕನಗರ 1ನೇ ಹಂತದ ನಿವಾಸಿ ಜಿ.ಎಸ್‌.ರವಿ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ತೀರಿಸಲು ಮಂಗಳಮುಖಿ ಮನೆಯಲ್ಲಿ ಚಿನ್ನ ಕಳ್ಳತನ: ಇಬ್ಬರ ಬಂಧನ

ಜಿ.ಎಸ್‌.ರವಿ ಅವರು ಜ.24ರಂದು ಸಂಜೆ 4ಕ್ಕೆ ಗಾಂಧಿ ಬಜಾರ್‌ದಿಂದ ಮಲ್ಲೇಶ್ವರದ ವಿಜಯ ಹೋಮಿಯೋಪತಿ ಕ್ಲಿನಿಕ್‌ಗೆ ಆರೋಪಿಯ ಆಟೋರಿಕ್ಷಾದಲ್ಲಿ ಬಂದಿದ್ದರು. ಈ ವೇಳೆ ಕ್ಲಿನಿಕ್‌ ತೆರಳಿ ವೈದ್ಯರಿಗೆ ಕಿವಿ ತೋರಿಸಿಕೊಂಡು 20 ನಿಮಿಷದಲ್ಲಿ ವಾಪಾಸ್‌ ಬರುತ್ತೇನೆ. ಅಲ್ಲಿಯವರೆಗೂ ಕಾಯುವಂತೆ ಹೇಳಿ ತಮ್ಮ ಹಣ ಹಾಗೂ ದಾಖಲೆಗಳಿದ್ದ ಬ್ಯಾಗನ್ನು ಆಟೋರಿಕ್ಷಾದ ಹಿಂಬದಿ ಸೀಟಿನಲ್ಲಿ ಇರಿಸಿ ವಾಪಾಸ್‌ ಬರುವವರೆಗೂ ಬ್ಯಾಗ್‌ ನೋಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಜಿ.ಎಸ್‌.ರವಿ ಅವರು ಚಿಕಿತ್ಸೆ ಮುಗಿಸಿಕೊಂಡು ವಾಪಾಸ್‌ ಬಂದು ನೋಡಿದಾಗ ಆರೋಪಿ ಬ್ಯಾಗ್‌ ಸಹಿತ ಪರಾರಿಯಾಗಿದ್ದ. ಈ ಸಂಬಂಧ ರವಿ ದೂರು ನೀಡಿದ್ದರು.

ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕಿ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ರಂಗಸ್ವಾಮಿ ಸಾಲ ಮಾಡಿಕೊಂಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆಟೋ ಚಾಲನೆಯಿಂದ ಬರುವ ಆದಾಯ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಪ್ರಯಾಣಿಕ ರವಿ ಅವರ ಬ್ಯಾಗ್‌ ಪರಿಶೀಲಿಸಿದಾಗ ಹಣ ಇರುವುದು ಕಂಡು ಹಣ ಕದ್ದರೆ ಸಾಲ ತೀರಿಸಬಹುದು ಎಂದು ಬ್ಯಾಗ್‌ ಸಹಿತ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದ. ಕದ್ದ .2 ಲಕ್ಷದ ಪೈಕಿ ಆಟೋರಿಕ್ಷಾ ರಿಪೇರಿ ಹಾಗೂ ಸಣ್ಣಪುಟ್ಟಸಾಲಗಳನ್ನು ಪಾವತಿಸಿದ್ದ. ಉಳಿದ .1.50 ಲಕ್ಷವನ್ನು ಮನೆಯಲ್ಲೇ ಇರಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್ ಪೆಡ್ಲರ್‌ ಬಂಧನ; ₹6 ಲಕ್ಷದ ಡ್ರಗ್ಸ್ ಜಪ್ತಿ

 ಬೆಂಗಳೂರು : ಹಾಡಹಗಲೇ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಡ್ರಗ್‌್ಸ ಪೆಡ್ಲರ್‌ನೊಬ್ಬನನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ಹಳೆ ಸೋಪ್‌ ಫ್ಯಾಕ್ಟರಿ ರಸ್ತೆ ನಿವಾಸಿ ಹುಸೇನ್‌ ಶರೀಫ್‌ (25) ಬಂಧಿತ. ಈತನಿಂದ ಸುಮಾರು .6 ಲಕ್ಷ ಮೌಲ್ಯದ 300 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಡಿ.ಜೆ.ಹಳ್ಳಿ ರಸ್ತೆ ಶ್ಯಾಂಪುರ ಮುಖ್ಯರಸ್ತೆಯ ಚರ್ಮದ ಮಂಡಿ ಗೋದಾಮಿನ ಬಳಿ ಜ.28ರಂದು ಅಪರಿಚಿತ ವ್ಯಕ್ತಿ ಮಾದಕವಸ್ತು ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ತಿಂಗಳಲ್ಲಿ 3 ಲಕ್ಷ ಟ್ರಾನ್ಸ್‌ಫರ್‌; ಶ್ರೀಜಾನ್‌ ಡ್ರಗ್ಸ್‌ ವ್ಯಸನಿ ಎಂದು ಆರೋಪ ಮಾಡಿದ ತನಿಷಾ ತಾಯಿ

ನೈಜೀರಿಯಾ ಮೂಲದ ಡ್ರಗ್‌್ಸ ಪೆಡ್ಲರ್‌ ಜಾನ್‌ ವಿನ್ಸೆಂಟ್‌ ಅಲಿಯಾಸ್‌ ಮೂಸಾನಿಂದ ಎಂಡಿಎಂಎ ಮಾದಕವಸ್ತು ಖರೀದಿಸಿ ತಂದು ಪರಿಚಿತ ಗಿರಾಕಿಗಳು, ಖಾಸಗಿ ಕಂಪನಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ. ನೈಜೀರಿಯಾ ಮೂಲದ ಡ್ರಗ್‌್ಸ ಪೆಡ್ಲರ್‌ ಜಾನ್‌ ವಿನ್ಸೆಂಟ್‌ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

Latest Videos
Follow Us:
Download App:
  • android
  • ios