ಸಂಚಾರ ನಿಯಮ ಉಲ್ಲಂಘನೆ: 7ನೇ ದಿನ ₹12.36 ಕೋಟಿ ಸಂಗ್ರಹ!

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ಶೇ.50ರಷ್ಟುವಿನಾಯಿತಿಗೆ ರಾಜಧಾನಿಯಲ್ಲಿ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ಮುಂದುವರೆದಿದ್ದು, ಗುರುವಾರ 4.84 ಲಕ್ಷ ಪ್ರಕರಣಗಳಿಂದ ದಾಖಲೆಯ .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಕಳೆದ ಏಳು ದಿನಗಳಲ್ಲಿ 23.73 ಲಕ್ಷ ಪ್ರಕರಣಗಳಿಂದ ಒಟ್ಟು .65.93 ಕೋಟಿ ದಂಡ ಸಂಗ್ರಹವಾಗಿದೆ.

Violation of traffic rules 7th day .12.36 crore collection at bengaluru rav

ಬೆಂಗಳೂರು (ಫೆ.10) : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ಶೇ.50ರಷ್ಟುವಿನಾಯಿತಿಗೆ ರಾಜಧಾನಿಯಲ್ಲಿ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ಮುಂದುವರೆದಿದ್ದು, ಗುರುವಾರ 4.84 ಲಕ್ಷ ಪ್ರಕರಣಗಳಿಂದ ದಾಖಲೆಯ .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಕಳೆದ ಏಳು ದಿನಗಳಲ್ಲಿ 23.73 ಲಕ್ಷ ಪ್ರಕರಣಗಳಿಂದ ಒಟ್ಟು .65.93 ಕೋಟಿ ದಂಡ ಸಂಗ್ರಹವಾಗಿದೆ.

ಗುರುವಾರ ಸಂಚಾರ ಪೊಲೀಸ್‌ ಠಾಣೆಗಳಲ್ಲಿ 2.51 ಲಕ್ಷ ಪ್ರಕರಣಗಳಿಂದ .5.99 ಕೋಟಿ, ಪೆಟಿಎಂ ಮುಖಾಂತರ 1.49 ಲಕ್ಷ ಪ್ರಕರಣಗಳಿಂದ .4.24 ಕೋಟಿ, ಟಿಎಂಸಿ ಕೌಂಟರ್‌ನಲ್ಲಿ 595 ಪ್ರಕರಣಗಳಿಂದ .1.52 ಕೋಟಿ ಹಾಗೂ ಬೆಂಗಳೂರು ಒನ್‌ ವೆಬ್‌ಪೋರ್ಟಲ್‌ನಲ್ಲಿ 82 ಸಾವಿರ ಪ್ರಕರಣಗಳಿಂದ .2.11 ಕೋಟಿ ಸೇರಿದಂತೆ ಒಟ್ಟು .12.36 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.

ವಿನಾಯಿತಿ ಅಂತ್ಯಕ್ಕೆ 2 ದಿನ ಬಾಕಿ

ಬಾಕಿ ದಂಡ ಪಾವತಿಗೆ ಶೇ.50ರಷ್ಟುವಿನಾಯಿತಿ ಸೌಲಭ್ಯ ಶುಕ್ರವಾರ ಮತ್ತು ಶನಿವಾರ(ಫೆ.11) ಮಾತ್ರ ಇರಲಿದೆ. ಈ ಎರಡೂ ದಿನ ಬಾಕಿ ದಂಡ ಪಾವತಿಸುವವರ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಸಾಧ್ಯತೆಯಿದೆ. ಗುರುವಾರವೇ ಬಾಕಿ ದಂಡ ಪಾವತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನಗರ ಸಂಚಾರ ಪೊಲೀಸ್‌ ಠಾಣೆಗಳಿಗೆ ಮುಗಿಬಿದ್ದರು. ಇನ್ನು ಇನ್‌ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದ ಕೌಂಟರ್‌ ಬಳಿಯೂ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಇದರ ಜತೆಗೆ ಆನ್‌ಲೈನ್‌ನಲ್ಲಿ ದಂಡ ಪಾವತಿಸುವವರ ಸಂಖ್ಯೆಯೂ ಹೆಚ್ಚಿತ್ತು.

6ನೇ ದಿನ ದಾಖಲೆಯ 9 ಕೋಟಿ ಟ್ರಾಫಿಕ್‌ ದಂಡ; ಈವರೆಗೆ 18 ಲಕ್ಷ ಪ್ರಕರಣ ಇತ್ಯರ್ಥ

Latest Videos
Follow Us:
Download App:
  • android
  • ios