ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಪಿಎಸ್‌ಐ ಗುಂಡು ಹಾರಿಸಿದ್ದಾರೆ: ಎಸ್‌ಪಿ ಕ್ರಿಮಿನಲ್‌ಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಎಸ್‌ಪಿ ಮಿಥುನ್‌ಕುಮಾರ್‌

ಶಿವಮೊಗ್ಗ (ಅ.5) : ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಮತ್ತೆ ಗುಂಡಿನ ಶಬ್ದ ಮೊಳಗಿದ್ದು, ಇತ್ತೀಚೆಗೆ ರಾಯಲ್‌ ಆರ್ಕಿಡ್‌ ಹೋಟೆಲ್‌ ಬಳಿ ಅಶೋಕ್‌ ಪ್ರಭು ಎಂಬ ಪಾದಚಾರಿಯ ಮೇಲೆ ಹಲ್ಲೆ ಮಾಡಿದ ಅಸ್ಲಾಂ ಕಾಲಿಗೆ ದೊಡ್ಡ ಪೇಟೆ ಠಾಣೆ ಪಿಎಸ್‌ಐ ವಸಂತ್‌ ಅವರು ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮೃತ್ತಿಕೆ ಸಂಗ್ರಹಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

ಅಸ್ಲಾಂ ಪುರಲೆಯ ಲೇಔಟ್‌ಯೊಂದರಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಸ್ಲಾಂ ತನ್ನ ಬಳಿ ಇರುವ ಚಾಕುವಿನಿಂದ ಪೊಲೀಸ್‌ ಕಾನ್ಸ್‌ಟೇಬಲ್‌ ರಮೇಶ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ರಮೇಶ್‌ ಜೀವರಕ್ಷಣೆಗೆ ಪಿಎಸ್‌ಐ ವಸಂತ್‌ ಅವರು ಅಸ್ಲಾಂ ಕಾಲಿಗೆ ಒಂದು ಸುತ್ತು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಆತನನ್ನು ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಅಸ್ಲಾಂನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಹೇಳಿದರು.

ಈ ಪ್ರಕರಣದಲ್ಲಿ ಅಸ್ಲಾಂ ಪ್ರಮುಖ ಆರೋಪಿಯಾಗಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ಗುರುತಿಸಲಾಗಿರ. ಶುಕ್ರವಾರ ರಾತ್ರಿ ಎ-2 ಆರೋಪಿ ಸಾಗರ ಟೌನ್‌ ನಿವಾಸಿ ಆಸೀಫ್‌ ಈತನನ್ನು ದಸ್ತಗಿರಿ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ ಅಸ್ಲಾಂನನ್ನು ಬಂಧಿಸಿದ್ದು, ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಲಾಗಿದೆ. ಅಸ್ಲಂ ಮೇಲೆ 9 ಕೇಸುಗಳಿದ್ದು, ಪ್ರಾಪರ್ಟಿ ರಿಲೇಟೆಡ್‌ ಅಪರಾಧ ದಾಖಲಾಗಿದೆ. ಈ ನಾಲ್ವರು ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗವಹಿಸಿದ್ದು ಕಂಡುಬಂದಿದೆ. ಇವರ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದ್ದು, ಬೇಲ್‌ ಮೇಲೆ ಹೊರಗೆ ಬಂದು ಮತ್ತೆ ಇಂತಹ ದುಷ್ಕೃತ್ಯಗಳಿಗೆ ಕೈಹಾಕಿದ್ದರಿಂದ ಅವರ ಬೇಲನ್ನು ಕ್ಯಾನ್ಸಲ್‌ ಮಾಡಲು ಶಿಫಾರಸು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸದ್ಯದಲ್ಲೇ ಗೂಂಡಾ ಕಾಯ್ದೆ ಜಾರಿ:

ಅಮಾಯಕರ ಮೇಲೆ ಹಲ್ಲೆ ನಡೆಸಿ ರಾಬರಿ ಮಾಡುವಂತಹ ಹಲವು ಕ್ರಿಮಿನಲ್‌ಳನ್ನು ಇಲಾಖೆ ಗಮನಿಸುತ್ತಿದೆ. 23 ಜನರ ಗಡಿಪಾರು ಪಟ್ಟಿಯನ್ನು ತಯಾರಿಸಲಾಗಿದೆ. ಅದರಲ್ಲಿ ಮೂವರಿಗೆ ಜಿಲ್ಲಾಧಿಕಾರಿ ಈಗಾಗಲೇ ಗಡಿಪಾರಿಗೆ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕ್ರಿಮಿನಲ್‌ಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಗೂಂಡಾ ಕಾಯ್ದೆ ಕೂಡ ಸದ್ಯದಲ್ಲೇ ಜಾರಿ ಮಾಡಲಿದ್ದೇವೆ ಎಂದರು.

ದುಡಿದು ಜೀವನ ಮಾಡಲು ಬೇಕಾದಷ್ಟುದಾರಿಗಳಿವೆ. ತಮಗೆ ಉದ್ಯೋಗ ಇಲ್ಲ, ಪೋಷಕರಿಲ್ಲ, ಕುಟುಂಬದಿಂದ ಹೊರಗಿದ್ದೇನೆ ಎಂಬ ನೆಪವೊಡ್ಡಿ ಅಪರಾಧ ಕೃತ್ಯಗಳಿಗೆ ಕೈಹಾಕಿದರೆ ಅವರಿಗೆ ಜೈಲು ಗ್ಯಾರಂಟಿ. ಕಾನೂನಿನಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

ಪೊಲೀಸರು ತಮ್ಮ ಪ್ರಾಣದ ಹಂಗುತೊರೆದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಮೇಲೆ ದಾಳಿ ಮಾಡಿದಾಗ ಆತ್ಮರಕ್ಷಣೆಗೆ ಗುಂಡು ಹಾರಿಸುವ ಕ್ರಮ ಅನಿವಾರ್ಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ವಿಕ್ರಂ ಅಮ್ಟೆ, ಡಿವೈಎಸ್‌ಪಿ ಬಾಲರಾಜ್‌ ಇದ್ದರು.