Asianet Suvarna News Asianet Suvarna News

Loan; ಸಾಲ ತೀರಿಸಲು ಕೆಲಸ ಮಾಡ್ತಿದ್ದ ಕಂಪನಿಯ ಚಿನ್ನ ನುಂಗಿ ನೀರು ಕುಡಿದ!

* ಮಾಡಿಕೊಂಡಿದ್ದ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಸಂಸ್ಥೆಯ ಚಿನ್ನ ನುಂಗಿದ
* ಮೆಟಲ್ ಡಿಟೆಕ್ಟರ್  ಸೌಂಡ್ ಮಾಡಿದ ಪರಿಣಾಮ ಸಿಕ್ಕಿಹಾಕಿಕೊಂಡ
* ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸ್ ರೇ ಮಾಡಿಸಲಾಗಿದೆ
* ಸಾಲ ತೀರಿಸಲು ಚಿನ್ನ ನುಂಗಿದ್ದಾಗಿ ತಪ್ಪೊಪ್ಪಿಕೊಂಡ

Desperate for money man steals gold swallows it to repay home loan mah
Author
Bengaluru, First Published Nov 16, 2021, 1:32 AM IST

ಗುರುಗ್ರಾಮ್ (ನ. 16)  ಮಾಡಿಕೊಂಡಿದ್ದ ಮನೆ ಸಾಲ( Home Loan) ತೀರಿಸಲು ಹಣ ಇರಲಿಲ್ಲ... ಆದರೆ ಈ ಪುಣ್ಯಾತ್ಮ ಚಿನ್ನ (Gold) ನುಂಗಿಬಿಟ್ಟಿದ್ದಾನೆ. ಪ್ರಕರಣ ವಿಚಿತ್ರ ಎನಿಸುತ್ತಿದ್ದರೆ ಅಸಲಿ ಕತೆ ಹೇಳುತ್ತೇವೆ ಕೇಳಿ.

ಐಎಂಟಿ ಮನೇಸರ್ ಪ್ರದೇಶದಲ್ಲಿನ ಲೋಹ ಸಂಸ್ಕರಣಾಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಚಿನ್ನವನ್ನು ಮಾರಾಟ ಮಾಡಿ ಸಾಲ  ತೀರಿಸುವ ಯೋಚನೆ ಮಾಡಿದ್ದ.  ಅದು ಆತನ ಬಳಿ ಇದ್ದ ಚಿನ್ನ ಅಲ್ಲ. ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಚಿನ್ನ!

ನವೆಂಬರ್ 11 ರಂದು ಸಂಜೆ 5.30 ರ ಸುಮಾರಿಗೆ  ಘಟನೆ ನಡೆದಿದೆ.  ಚಿನ್ನ ನುಂಗಿದವನನ್ನು ಸುಬ್ರತಾ ಬರ್ಮನ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಿವಾಸಿಯಾಗಿರುವ ಬರ್ಮನ್ ಸೆಕ್ಟರ್ 4 ರಲ್ಲಿ ರಿಫೈನರಿ ಕಂಪನಿಯ ಆಭರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ಕೆಲಸ ಮುಗಿಸಿ ಹೊರಟಾಗ ಮೆಟಲ್ ಡಿಟೆಕ್ಟರ್  ಸೌಂಡ್ ಮಾಡಿದೆ, ಆತನ ಜೇಬು ಉಳಿದ ಕಡೆ ಸರ್ಚ್ ಮಾಡಿದಾಗ ಗೊತ್ತಾಗಿಲ್ಲ. ಕೊನೆಗೆ ಆತನ ದೇಹದ ಒಳಗೆ ಚಿನ್ನ ಇದೆ ಎಂಬುದು ಪತ್ತೆಯಾಗಿದೆ.

ಅಲ್ಲಿಂದ ಆತನನ್ನು ಕರೆದುಕೊಂಡು ಹೋಗಿ ಎಕ್ಸ್ ರೇ ಗೆ ಒಳಪಡಿಸಲಾಗಿದೆ. ಆತನ ಹೊಟ್ಟೆಯಲ್ಲಿ ಲೋಹ ಇರುವುದು ಪತ್ತೆಯಾಗಿದೆ.  ವಿಚಾರಜಣೆ ನಡೆಸಿದಾಗ ಮನೆ ಸಾಲವನ್ನು ತೀರಿಸಸಲು 1. 6 ಗ್ರಾಂ ಚಿನ್ನ ನುಂಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಯೋನಿ ಮತ್ತು ಗುದದ್ವಾರದಲ್ಲಿ 17 ತುಂಡು ಚಿನ್ನ ಬಚ್ಚಿಟ್ಟಿದ್ದ 3 ಮಹಿಳೆಯರು!

ಹಣದ ಅತಿಯಾದ ಅಗತ್ಯ ಇದ್ದಿದ್ದಕ್ಕೆ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಆತ ನುಂಗಿದ ಚಿನ್ನ ಹೊರಕ್ಕೆ ಬರಲು ಆತನಿಗೆ ಬಾಳೆ ಹಣ್ಣು ಸೇರಿ ಇತರೆ ಪದಾರ್ಥಗಳನ್ನು ನೀಡಲಾಯಿತು.  ಘಟನೆಯ ನಂತರ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 381 (ಮಾಸ್ಟರ್ ಅಥವಾ ಉದ್ಯೋಗದಾತರ ಸ್ವಾಧೀನದಲ್ಲಿರುವ ಆಸ್ತಿ ಕಳ್ಳತನ) ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮುಂಬೈ ಪ್ರಕರಣ;  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)  ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3   ಮಹಿಳೆಯರನ್ನು ಬಂಧಿಸಿತ್ತು. ಕೀನ್ಯಾದ ಮಹಿಳೆಯರು  17 ಚಿನ್ನದ ತುಂಡುಗಳನ್ನು ತಮ್ಮ ಜನನನೇಂದ್ರೀಯ ಮತ್ತು ಗುದದ್ವಾರದಲ್ಲಿ ಅಡಗಿಸಿಕೊಂಡಿದ್ದರು.

3 ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದು ಮೂವರಿಂದ 937.78 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿತ್ತು.  ಇನ್ನೊಂದು ಪ್ರಕರಣದಲ್ಲಿ ಯುಎಇಯಿಂದ ಆಗಮಿಸುತ್ತಿದ್ದ ನಾಲ್ಕು ಪ್ರಯಾಣಿಕರಿಂದ 47 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ತುಗಳನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು.  . ವರ್ಷದ ಜೂನ್ ನಲ್ಲಿ, ಯುಎಇಯಿಂದ ಆಗಮಿಸಿದ ನಾಲ್ಕು ಜನರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ   ಬಂಧಿಸಲಾಗಿತ್ತು.  ತಮ್ಮ ಅಂಡರ್ ವೇರ್ ಮತ್ತು ಬ್ಯಾಗ್ ನಲ್ಲಿ ಚಿನ್ನ ಬಚ್ಚಿಟ್ಟಿದ್ದರು.

ಕಳೆದ ವರ್ಷ ಬೆಂಗಳೂನಿಂದಲೂ  ಇಮಥದ್ದೆ ಪ್ರಕರಣ ವರದಿಯಾಗಿತ್ತು. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ಪುಣ್ಯಾತ್ಮ ಕದ್ದ ಚಿನ್ನದ ಸರವನ್ನು ಇಡೀಯಾಗಿ ನುಂಗಿದ್ದ. ಆದರು ಸಿಕ್ಕಿಬಿದ್ದಿದ್ದ. ವೈದ್ಯರು ಹರಸಾಹಸ ಮಾಡಿ ಆತನ ಹೊಟ್ಟೆಯಿಂದ ಹೊರಗೆ ತೆಗೆದಿದ್ದರು.  ಗಂಡನ ಮೆಡಿಸಿನ್ ಗಗಿ ದುಡ್ಡಿಲ್ಲ ಎಂಬ ಕಾರಣಕ್ಕೆ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಆಸ್ಪತ್ರೆಯಿಂದ ಗಾಯಬ್ ಮಾಡುತ್ತಿದ್ದ ಮಹಿಳೆಯನ್ನು ಲೂಧಿಯಾನದಲ್ಲಿ ಬಂಧಿಸಲಾಗಿದೆ. 

Follow Us:
Download App:
  • android
  • ios