Asianet Suvarna News Asianet Suvarna News

Crime News; ಸಹೋದ್ಯೋಗಿ ಪುತ್ರ-ಮಾವನಿಗೆ ಮಹಿಳೆ ಅಶ್ಲೀಲ ಚಿತ್ರ ರವಾನಿಸಿದ ಡೆಪ್ಯೂಟಿ ಕಲೆಕ್ಟರ್!

* ಮಾಜಿ ಸಹೋದ್ಯೋಗಿಗೆ ನಿರಂತರ ಕಿರುಕುಳ
* ಪರಿಚಯದ ಮಹಿಳೆಗೆ ಮಾನಹಾನಿ
* ಮಹಿಳೆ ಮಗನಿಗೆ ಅಮ್ಮನ  ಅಶ್ಲೀಲ ಪೋಟೋ ಕಳಿಸಿದ
* ಉನ್ನತ ಸ್ಥಾನದಲ್ಲಿದ್ದ ಅಧಿಕಾರಿ ಮಾಡಿದ ಹೀನ ಕೆಲಸ

Deputy collector harasses stalks woman sends obscene images to her minor son Gujarat mah
Author
Bengaluru, First Published Nov 10, 2021, 5:35 PM IST

ಅಹಮದಾಬಾದ್(ನ. 10)   ಡೆಪ್ಯೂಟಿ ಕಲೆಕ್ಟರ್(Deputy Collector) ಒಬ್ಬರು ತಮ್ಮ ಮಾಜಿ ಸಹೋದ್ಯೋಗಿಗೆ ಪದೇ ಪದೇ ಕಿರುಕುಳ (Sexual Harassment)ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.  ಮಹಿಳೆಯ (Woman) ಅಪ್ರಾಪ್ತ ಮಗನಿಗೆ ಅಶ್ಲೀಲ ಫೋಟೋಗಳನ್ನು ಒಂದಾದ ಮೇಲೆ ಒಂದರಂತೆ ಅಧಿಕಾರಿ ಕಳುಹಿಸುತ್ತಿದ್ದ. ಅರಾವಳಿಯ ಮೊಡಸಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದವನ  ಬಂಧನವಾಗಿದೆ.

ಆರೋಪಿಯನ್ನು ಮಯಾಂಕ್ ಪಟೇಲ್ ಎಂದು ಗುರುತಿಸಲಾಗಿದೆ. ಗುಜರಾತ್ ಆಡಳಿತ ಸೇವೆಗಳ (ಜಿಎಎಸ್) ಅಧಿಕಾರಿಯಾಗಿರುವ ಪಟೇಲ್ ಅರಾವಳಿಯಲ್ಲಿರುವ ಮೊಡಸಾ ಜಿಲ್ಲಾ ಸೇವಾ ಸದನ್‌ನಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ

ಸಾಮಾಜಿಕ  ಜಾಲತಾಣದಲ್ಲಿ(Social Media) ಹಿಂಸೆ : ಒಂದೂವರೆ ವರ್ಷದಿಂದ ಆರೋಪಿ ಸಾಮಾಜಿಕ ತಾಣದ ಮೂಲಕ ಮೆಸೇಜ್ ಕಳಿಸುತ್ತಿದ್ದ.  ಈಕೆಗೆ ಮಾನಹಾನಿಯಾಗುವಂತಹ ಬರಹಗಳನ್ನು ಬರೆದಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಸಹೋದ್ಯೋಗಿಗಳ ಸ್ನಾನದ ವಿಡಿಯೋ ಪ್ರಿಯಕರಗೆ ಕಳಿಸುತ್ತಿದ್ದ ನರ್ಸ್ : ಪ್ರಿಯಕರ ಅರೆಸ್ಟ್

ಮಹಿಳೆ ರಾಜ್ಯ (Gujarat)ಸರ್ಕಾರದ ಉದ್ಯೋಗಿ; ಕಿರುಕುಳಕ್ಕೆ ಒಳಗಾದ ಮಹಿಳೆ ಸಹ  ಗುಜರಾತ್ ರಾಜ್ಯ ಸರ್ಕಾರದ ಸಿಬ್ಬಂದಿ.  ಆರೋಪಿಯನ್ನು ಉಪ ಮಮಲದಾರ್ ಆಗಿ ನಿಯೋಜಿಸಿದಾಗ ಎರಡು ಅಥವಾ ಮೂರು ಬಾರಿ ಭೇಟಿಯಾಗಿದ್ದೆ ಎಂದು ಮಹಿಳೆ  ಹೇಳಿದ್ದಾರೆ.  ಇದಾದ ಮೇಲೆ ಮೋಡಾಸಾದಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿ  ಆರೋಪಿ ನಿಯೋಜನೆ ಗೊಂಡಾಗ  ಮೀಟಿಂಗ್ ನಲ್ಲಿ ಪರಸ್ಪರ ಭೇಟಿಯಾಗಿದ್ದು ಒಬ್ಬರ ಮನೆಗೆ ಇನ್ನೊಬ್ಬರು  ಹೋಗಿ ಬಂದಿದ್ದರು.

ಕರೆ ಸ್ವೀಕಾರ ನಿಲ್ಲಿಸಿದರು; ಇದಾದ ಮೇಲೆ ವಾಟ್ಸಪ್ (Whatsapp))ಸಂಪರ್ಕ ಆರಂಭವಾಗಿದೆ. ಈತನ ಕಿರುಕುಳ ತಾಳಲಾರದೆ ಮಹಿಳೆ ಮೆಸೇಜ್ ಮತ್ತು ಕರೆಗಳನ್ನು ಸ್ವೀಕಾರ ಮಾಡಿಲ್ಲ. ಅಧಿಕಾರ ಬಳಸಿ ಮಹಿಳೆಯ ಪೋನ್ ಲೋಕೇಶನ್  ಪತ್ತೆ ಮಾಡಿ ಅಲ್ಲಿಯೂ ಕಿರುಕುಳ ನೀಡುವ ಕೆಲಸ ಮಾಡಿದ್ದಾನೆ. ಅಷ್ಟೇ ಅಲ್ಲದೆ ಮಹಿಳೆಯ ಪತಿಗೆ ಕರೆ ಮಾಡಿ  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಸಾಕಷ್ಟು ಸಾಕ್ಷ್ಯ ಸಿಕ್ಕಿದೆ; ಅಹಮದಾಬಾದ್ ಸೈಬರ್ ಕ್ರೈಂ ಸೆಲ್‌ನ ಉಪ ಪೊಲೀಸ್ ಆಯುಕ್ತ ಅಮಿತ್ ವಾಸವ ಈ ಬಗ್ಗೆ ವಿವರಣೆ  ನೀಡಿದ್ದು"ಆರೋಪಿಯು ಮಹಿಳೆಯ ಅಸಭ್ಯ ಚಿತ್ರಗಳನ್ನು ಆಕೆಯ ಮಗ ಮತ್ತು ಮಾವನಿಗೆ ಕಳುಹಿಸಿ ಆಕೆಯ ಮಾನಹಾನಿ ಮಾಡಲು ಪ್ರಯತ್ನಿಸಿದ್ದು ಇದೆ.  ಮಹಿಳೆ ಆರೋಪಿಯ ಪೋಷಕರು ಮತ್ತು ಹೆಂಡತಿ ಜತೆ ಮಾತನಾಡಲು ಮುಂದಾದಾಗ ಆಕೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದಾನೆ.   ಈ ಎಲ್ಲ ಆಧಾರ ಇಟ್ಟುಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆರೋಪಿಯ ಮೊಬೈಲ್‌ನಿಂದ ಬೆದರಿಕೆ ಸಂದೇಶಗಳು, ಅಸಭ್ಯ ಚಿತ್ರಗಳು, ಟೆಕ್ಸ್ಟ್ ಮೆಸೇಜ್, ಚಾಟ್ ಹಿಸ್ಟರಿ, ಕಾಲ್ ಹಿಸ್ಟರಿ ಸೇರಿದಂತೆ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಯ ಈ ದುವರ್ತನೆಯಿಂದ ಮಹಿಳೆ  ಖಿನ್ನತೆಗೆ ಒಳಗಾಗಿದ್ದು ಆಕೆಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ  ಎಂದು ಪೊಲೀಸರು ತಿಳಿಸಿದ್ದಾರೆ. 

ಮಂಗಳೂರಿನ ಪ್ರಕರಣ;  ಕಚೇರಿಯಲ್ಲಿ ಸಹೋದ್ಯೋಗಿ (Colleague) ಯುವತಿ ಮೇಲೆ ಲೈಂಗಿಕ ಕಿರುಕುಳ  ನೀಡುತ್ತಿದ್ದ ಆರೋಪದಲ್ಲಿ ದ.ಕ. ಜಿಲ್ಲಾ (Dakshina kannada) ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (Minorities Development Corporation ) ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್‌ ಫಾರೂಕ್‌(45) ಎಂಬಾತನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು (Police) ಬಂಧಿಸಿದ್ದರು.

19 ವರ್ಷದ ಯುವತಿ ಪಾಂಡೇಶ್ವರದ (Pandeshwara) ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ (Office) ಕೆಲಸಕ್ಕಿದ್ದಳು. ಆಕೆಯನ್ನು ಆರೋಪಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ವಾಟ್ಸಪ್‌ನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯ ಪಡಿಸುತ್ತಿದ್ದ. ಅಲ್ಲದೆ, ನಿನ್ನ ನಗ್ನ ಚಿತ್ರವನ್ನು ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದವಳು ಈತನ ಕಿರುಕುಳದಿಂದ ಬೇಸತ್ತು ಹೊರನಡೆದಿದ್ದಳು.

Follow Us:
Download App:
  • android
  • ios