ನರ್ಸ್ ಒಬ್ಬರು ತಮ್ಮ ಸಹೋದ್ಯೋಗಿಗಳ ಸ್ನಾನದ ವಿಡಿಯೋವನ್ನು ರೆಕಾರ್ಡ್ ಮಾಡಿ ತನ್ನ ಪ್ರಿಯಕರಗೆ ಕಳಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು ಆಕೆಯನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರು (ಡಿ. 15): ನರ್ಸ್‌ಗಳ ಸ್ನಾನದ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಪ್ರೇಯಸಿಯಿಂದ ಸ್ವೀಕರಿಸುತ್ತಿದ್ದ ಪ್ರಿಯಕರನನ್ನು ವೈಟ್‌ ಫಿಲ್ಡ್ ಪೊಲೀಸರು ಬಂಧಿಸಿದ್ದಾರೆ. 

ಚೆನ್ನೈನ ಪ್ರತಿಷ್ಠಿತ ಹೋಟೆಲ್‌ ಬಾಣಸಿಗ ಪ್ರಭು (31) ಬಂಧಿತ ಆರೋಪಿಯಾಗಿದ್ದಾನೆ. 

ಪ್ರೇಯಸಿ ನರ್ಸ್ ಅಶ್ವಿನಿ ವಾಟ್ಸ್‌ ಆಪ್‌ನಲ್ಲಿ ಕಳುಹಿಸುತ್ತಿದ್ದ ಅಶ್ಲೀಲ ವಿಡಿಯೋಗಳನ್ನು ನೋಡಿ ಅನಂತರ ಡಿಲೀಟ್ ಮಾಡುತ್ತಿದ್ದಾಗಿ ಆರೋಪಿ ಹೇಳಿದ್ದಾನೆ. ಮೊಬೈಲ್ ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಪತ್ನಿಯನ್ನೇ ಪಣಕ್ಕಿಟ್ಟು ಸೋತು ಕಳುಹಿಸಿಕೊಟ್ಟ.. ಮನೆಗೆ ಬಂದವಳ ಗುಪ್ತಾಂಗಕ್ಕೆ ಆಸಿಡ್ ಹಾಕಿದ! .

ಅಶ್ವಿನಿ ವೈಟ್‌ಫಿಲ್ಡ್‌ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಆಸ್ಪತ್ರೆ ಆಡಳಿತ ಮಂಡಳಿ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳಿಗೆ ವಸತಿ ಗೃಹದ ಸೌಲಭ್ಯ ಒದಗಿಸಿತ್ತು. ಡಿ.5ರ ಸಂಜೆ ನರ್ಸ್‌ ಒಬ್ಬರು ಸ್ನಾನ ಮಾಡಲು ಹೋದಾಗ ಮೊಬೈಲ್‌ ಬಚ್ಚಿಟ್ಟಿರುವುದು ಪತ್ತೆಯಾಗಿದೆ. 

ಪರಿಶಿಲಿಸಿದಾಗ ವಿಡಿಯೋ ರೆಕಾರ್ಡ್ ಆನ್‌ ಆಗಿರುವುದು ಕಂಡು ಬಂದಿದೆ. ಗಾಬರಿಗೊಂಡ ನರ್ಸ್ ಮೊಬೈಲ್‌ನಲ್ಲಿ ಗ್ಯಾಲರಿ ಪರಿಶಿಲಿದಾಗ ಹಲವು ಸಿಬ್ಬಂದಿ ಸ್ನಾನದ ದೃಶ್ಯ ಸೆರೆಯಾಗಿತ್ತು. 

ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದುಇದೀಗ ಅಶ್ವಿನಿ ಹಾಗೂ ಪ್ರಿಯಕರನನ್ನು ಅರೆಸ್ಟ್ ಮಾಡಲಾಗಿದೆ.