ಜೀವನದಲ್ಲಿ ಜಿಗುಪ್ಸೆಗೊಂಡು ವಿದೇಶಿ ಪ್ರಜೆಯೊಬ್ಬ ಮನೆಯ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಡಿ.20) : ಜೀವನದಲ್ಲಿ ಜಿಗುಪ್ಸೆಗೊಂಡು ವಿದೇಶಿ ಪ್ರಜೆಯೊಬ್ಬ ಮನೆಯ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂಜನಾ ಲೇಔಟ್‌ನ ನಿವಾಸಿ ಮಾರ್ಟಿನ್ (40) ಮೃತ ದುರ್ದೈವಿ. ಮನೆಯಲ್ಲಿ ರಾತ್ರಿ ಸ್ನೇಹಿತೆ ಮಲಗಿದ ಬಳಿಕ 11.30ರ ಸುಮಾರಿಗೆ ಹೊರ ಬಂದು ಏಕಾಏಕಿ ಮಹಡಿಯಿಂದ ಮಾರ್ಟಿನ್ ಕೆಳಗೆ ಜಿಗಿದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
7ನೇ ಮಹಡಿಯಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ!
ಮೃತ ಮಾರ್ಟಿನ್ ಮೂಲತಃ ನೈಜೀರಿಯಾ ದೇಶದವನಾಗಿದ್ದು, ಕೆಲ ತಿಂಗಳ ಹಿಂದೆ ನಗರಕ್ಕೆ ಬ್ಯುಸಿನೆಸ್ ವೀಸಾದಡಿ ಬಂದಿದ್ದ. ಬಳಿಕ ಸೋಲದೇವನಹಳ್ಳಿಯ ಅಂಜನಾ ಲೇಔಟ್‌ನಲ್ಲಿ ನೆಲೆಸಿದ್ದ ಮಾರ್ಟಿನ್, ಒಂದೂವರೆ ತಿಂಗಳ ಹಿಂದೆ ಹೆಬ್ಬಾಳ ಸಮೀಪ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಅಂದು ಅಪಘಾತದಲ್ಲಿ ಆತನ ತಲೆಗೆ ಗಂಭೀರ ಪೆಟ್ಟಾಗಿತ್ತು. ಒಂದು ತಿಂಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ವಾರದ ಹಿಂದಷ್ಟೇ ಆತ ಮನೆಗೆ ಮರಳಿದ್ದ. ಮನೆಯಲ್ಲಿ ಆತನನ್ನು ಅಲೆಕ್ಸಾ ಎಂಬ ಆತನ ಸ್ನೇಹಿತೆ ಆರೈಕೆ ಮಾಡುತ್ತಿದ್ದಳು. ಅಪಘಾತದ ಬಳಿಕ ಖಿನ್ನತೆಗೊಳಗಾಗಿದ್ದ ಮಾರ್ಟಿನ್, ಇದೇ ಯಾತನೆಯಲ್ಲೇ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನದಿಯಲ್ಲಿ ಹುಚ್ಚಾಟವಾಡಿ ಕೊಚ್ಚಿ ಹೋದ ವ್ಯಕ್ತಿ
ಆನೇಕಲ್: ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ರಾಜ್ಯದ ಗಡಿ ಭಾಗದ ತಮಿಳುನಾಡಿನ ಸಿಂಗಾರಪೇಟೆ ಬಳಿ ನಡೆದಿದೆ. ಗೋವಿಂದನ್(32) ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ. ಅಂಗುತ್ತಿ ನದಿಯಲ್ಲಿ ಹರಿಯುವ ನೀರಿನಲ್ಲಿ ಸ್ನೇಹಿತರ ಜೊತೆ ನೀರಿಗಿಳಿದಿದ್ದ. ಈ ವೇಳೆ ಸ್ನೇಹಿತರು ಬೇಜವಾಬ್ದಾರಿಯಿಂದ ಹುಚ್ಚಾಟ ಪ್ರಾರಂಭಿಸಿದರು. ಗೋವಿಂದನ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು ದೃಶ್ಯ ವಿಡಿಯೋ ಸೆರೆ ಆಗಿದೆ. ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿಯ ಹುಡುಕಾಟ ನಡೆಸಿದೆ.
ಅಮೆರಿಕದ ಗೋಲ್ಡನ್ ಗೇಟ್ ಬ್ರಿಡ್ಜ್‌ಗೆ ಜಿಗಿದು ಮೃತಪಟ್ಟ ಭಾರತ ಮೂಲದ ಯುವಕ..!
