Bengaluru: ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ ಭೀಕರ ಅಂತ್ಯ

ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಪ್ಲೇಓವರ್ ಮೇಲೆ ಅಪಘಾತಗಳು ಪದೇ ಪದೇ ನಡೆಯುತ್ತಿದ್ದು, ಸೋಮವಾರ ಕೂಡ  ಸಹ ಪ್ಲೇಓವರ್ ಮೇಲಿಂದ ಬೈಕ್ ಸವಾರ ಕೆಳಗೆ ಬಿದ್ದು ಸಾವನ್ನಪ್ಪಿರುವಂತಹ ಭೀಕರ ಅಪಘಾತ ಸಂಭವಿಸಿದೆ.

after hitting a divider and falling down  techie dies an elevated flyover  in Bengaluru gow

ಬೆಂಗಳೂರು (ಅ.24): ಬೆಂಗಳೂರಿನ ಫ್ಲೈ ಓವರ್ ಗಳು ವಾಹನ ಸವಾರರಿಗೆ ಎಷ್ಟು ಸುರಕ್ಷಿತ ಎನ್ನುವಂತಹ ಪ್ರಶ್ನೆ ಪದೇ ಪದೇ ಉದ್ಭವವಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಪ್ಲೇಓವರ್ ಮೇಲೆ ಅಪಘಾತಗಳು ಪದೇ ಪದೇ ನಡೆಯುತ್ತಿದ್ದು, ಇಂದು ಸಹ ಪ್ಲೇಓವರ್ ಮೇಲಿಂದ ಬೈಕ್ ಸವಾರ ಕೆಳಗೆ ಬಿದ್ದು ಸಾವನ್ನಪ್ಪಿರುವಂತಹ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೊಸೂರು ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಬರುತ್ತಿದ್ದ ಆಂಧ್ರ ಮೂಲದ ಟೆಕ್ಕಿ ಕೌರಿ ನಾಗಾರ್ಜುನ ಎಲೆಕ್ಟ್ರಾನಿಕ್ ಸಿಟಿ ಬಳಿ ಬಲಭಾಗಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಬೈಕ್ ವೇಗದ ಮಿತಿ ಹತ್ತೊಟಿಗೆ ಸಿಗದೆ ನೇರವಾಗಿ ತಡೆಗೋಡೆಗೆ ಡಿಕ್ಕಿ ಹೊಡೆದು ನಾಗಾರ್ಜುನ ಪ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಇನ್ನೂ ಮೃತ ನಾಗಾರ್ಜುನ ಆಂಧ್ರ ಮೂಲದ ಯುವಕನಾಗಿದ್ದು ಕಳೆದ ಕೆಲ ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇಂದು ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಪ್ಲೈ ಓವರ್ ಮಾರ್ಗವಾಗಿ ಬರುವ ಸಂಧರ್ಭದಲ್ಲಿ ತಲೆಗೆ ಹೆಲ್ಮೆಟ್ ಧರಿಸದೆ ಕೈಯಲ್ಲಿ ಹಿಡಿದುಕೊಂಡು ಇದ್ದುದರಿಂದ ಪ್ಲೈ ಓವರ್ ಮೇಲಿಂದ ಕೆಳಗೆ ಬೀಳುತ್ತಿದ್ದಂತೆ ನೇರವಾಗಿ ರಸ್ತೆಗೆ ತಲೆ ಬಡಿದಿದೆ.

ಅಂಡರ್‌ಪಾಸ್ ಅವಾಂತರ, ಕಸದ ಲಾರಿಗೆ ಬಾಲಕಿ ಬಲಿ, ಬಿಬಿಎಂಪಿ ವಿರುದ್ಧ ಆಕ್ರೋಶ

ಇದೇ ರೀತಿ ಕೆಲ ತಿಂಗಳುಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಪ್ಲೈ ಓವರ್ ಲೇ ಬೇ ಬಳಿ ನಿಂತಿದ್ದ ಯುವಕ ಯುವತಿಗೆ ಕಾರುಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೆ ಬೈಕ್ ಸವಾರ ಪ್ಲೈಓವರ್ ಮೇಲಿಂದ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದು ಎಲೆಕ್ಟ್ರಾನಿಕ್ ಸಿಟಿ ಫ್ಲೈ  ಓವರ್ ಎಷ್ಟು ಸುರಕ್ಷತೆ ಇದೆ ಎನ್ನುವ ಪ್ರಶ್ನೆ ಸಾರ್ವಜನಿಕರು ಮಾಡುತ್ತಿದ್ದಾರೆ. ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಅಲ್ಲಲ್ಲಿ ಸಿಸಿಟಿವಿಗಳು ಇದ್ದರೂ ಸಹ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

ಬೆಂಗಳೂರು: ಫ್ಲೈಓವರ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಕಾರು ಡಿಕ್ಕಿ, ಸವಾರ ಸಾವು!

ಒಟ್ಟಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು, ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಫ್ಲೈ ಓವರ್ ನಿರ್ವಹಣೆ ಮಾಡುತ್ತಿರುವ ಎಲೆಕ್ಟ್ರಾನಿಕ್ ಸಿಟಿ BETPL ಅಧಿಕಾರಿಗಳು ಮತ್ತಷ್ಟು ಸೂಚನಾ ಫಲಕಗಳನ್ನ ಹಾಕಿ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವ ಮೂಲಕ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ತಾರಾ ಕಾದು ನೋಡಬೇಕಿದೆ

Latest Videos
Follow Us:
Download App:
  • android
  • ios