Asianet Suvarna News Asianet Suvarna News

ಕಡಿಮೆ ಬೆಲೆಗೆ ಮೊಬೈಲ್‌ ಎಂದು ಸೋಪ್... ವಂಚಕರ ಗ್ಯಾಂಗ್‌ನಲ್ಲಿ ಮಹಿಳೆಯರದ್ದೇ ಪಾರಮ್ಯ!

* ನವದೆಹಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ
* ಕಾಲ್ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಜಾಲ
* ಕಡಿಮೆ ಬೆಲೆಗೆ ಮೊಬೈಲ್ ನೀಡುತ್ತೇವೆ ಎಂದು ನಂಬಿಸಿ ಸೋಪ್ ಬಾಕ್ಸ್
* ಭಾರತೀಯ ಅಂಚೆ ಇಲಾಖೆ ಸೇವಯನ್ನು ಬಳಸಿಕೊಳ್ಳುತ್ತಿದ್ದ ತಂಡ

Delhi Police bust gang offering cellphones but delivering soaps instead mah
Author
Bengaluru, First Published Oct 30, 2021, 1:49 AM IST

ನವದೆಹಲಿ(ಅ. 30)   ದೆಹಲಿ ಪೊಲೀಸರು (Delhi Police)  ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಡಿಮೆ ಬೆಲೆಗೆ ಮೊಬೈಲ್(Mobile) ಪೋನ್ ನೀಡುತ್ತೇವೆ ಎಂದು ನಂಬಿಸಿ ಸೋಪ್ (soaps)ಮತ್ತು ವಾಲೆಟ್ ಕಳುಹಿಸಿಕೊಡುತ್ತಿದ್ದ ಜಾಲವನ್ನು (Crime News) ವಶಕ್ಕೆ ಪಡೆದಿದ್ದಾರೆ.

ದೆಹಲಿ ರೋಹಿಣಿ ಏರಿಯಾದಲ್ಲಿ ದಾಳಿ ನಡೆಸಲಾಗಿದ್ದು 46 ಮಹಿಳೆಯರು (Woman) ಸೇರಿ  53 ಜನರನ್ನು ಬಂಧಿಸಲಾಗಿದೆ.  ದುಬಾರಿ ಬೆಲೆಯ ಸ್ಮಾರ್ಟ್ ಪೋನ್(Smart Phone)ಗಳನ್ನು ಕೇವಲ 4,500 ರೂ. ಗೆ  ನೀಡುತ್ತೇವೆ ಎಂದು ಜನರನ್ನು ನಂಬಿಸುತ್ತಿದ್ದರು. ಇದಕ್ಕಾಗಿ ಕಾಲ್ ಸೆಂಟರ್ (call centres)ಒಂದನ್ನು ತೆರೆದುಕೊಂಡಿದ್ದರು.

ಅಂಚೆ ಇಲಾಖೆಯ (Indian Post) ಸಿಬ್ಬಂದಿಯಂತೆ ನಟಿಸುತ್ತ ಕಾಲ್ ಸೆಂಟರ್ ಮೂಲಕ ಕರೆ ಮಾಡುತ್ತಿದ್ದರು.  ಪೊಲೀಸರು ಹೇಳುವಂತೆ ಈ ಕಾಲ್ ಸೆಂಟರ್  ಗಳಲ್ಲಿ ಒಂದನ್ನು ಭಾರತೀಯ ಅಂಚೆ ಇಲಾಖೆಯ ಅಧಿಕಾರಿಯೊಬ್ಬರೇ ನಿರ್ವಹಿಸುತ್ತಿದ್ದರು.

ಸೈಬರ್ ವಂಚಕರಿಂದ ಬಚಾವಾಗಲು ಸರಳ ಸೂತ್ರ

ಎಲ್ಲ ರಾಜ್ಯಗಳ ಜನರಿಗೂ ಕರೆ ಮಾಡುತ್ತಿದ್ದರು. ಅತ್ಯಾಕರ್ಷಕ ಆಫರ್ ನೀಡುವ ಮೂಲಕ ಅವರನ್ನು ಸೆಳೆದುಕೊಳ್ಳುತ್ತಿದ್ದರು. ಹದಿನೆಂಟು ಸಾವಿರದ ಮೊಬೈಲ್ ನ್ನು ಕೇವಲ 4,500 ರೂ. ಗೆ ನೀಡುತ್ತೇವೆ ಎಂದು ನಂಬಿಸುತ್ತಿದ್ದರು.  ಆದರೆ ಭಾರತೀಯ ಅಂಚೆ ಸೇವೆಯನ್ನೇ ಬಳಸಿಕೊಂಡು ಕ್ಯಾಶ್ ಆನ್ ಡಿಲೆವರಿ ಮೂಲಕವೇ ಕೆಲಸ ಮಾಡುತ್ತಿದ್ದರು.

ಪ್ರಾಡಕ್ಟ್ ಬೈ ಮಾಡಲು ಒಪ್ಪಿಕೊಂಡವರಿಗೆ ಸೋಪ್ ಬಾಕ್ಸ್ ಕಳುಹಿಸಿಕೊಡಲಾಗುತ್ತಿತ್ತು.  ಐವತ್ತಕ್ಕಿಂತ ಅಧಿಕ  ಜನರ ಜತೆ ಆರು ಕಂಪ್ಯೂಟರ್, ಒಂದು ಬಾರ್ ಕೋಡ್ ಸ್ಕಾನರ್ ಮತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಆನ್  ಲೈನ್ ನಲ್ಲಿಯೂ ಇದೇ ರೀತಿಯ ವಂಚನೆ ನಡೆದ ಹಲವು ಪ್ರಕರಣಗಳಿವೆ. ಅತಿ ಕಡಿಮೆ ಬೆಲೆಗೆ ಬ್ರ್ಯಾಂಡೆಡ್‌ ವಸ್ತುಗಳನ್ನು ನೀಡುತ್ತೇವೆ ಎಂದು ನಂಬಿಸುವವರ ಮಾತಿಗೆ ಮರುಳಾದರೆ ಅಷ್ಟೇ!

Follow Us:
Download App:
  • android
  • ios