ಮೊಬೈಲ್ ಕಳ್ಳತನ ಪ್ರಕರಣವೊಂದು ಅನೈತಿಕ ಸಂಬಂಧವನ್ನು ಬಯಲು ಮಾಡಿದೆ. ಗಂಡನ ಮೊಬೈಲ್‌ನಲ್ಲಿದ್ದ ಗೆಳೆಯನೊಂದಿಗಿನ ಖಾಸಗಿ ಫೋಟೋಗಳನ್ನು ಅಳಿಸಲು ಪತ್ನಿಯೇ ಕಳ್ಳತನ ಮಾಡಿಸಿದ್ದಾಳೆ.
ನವದೆಹಲಿ: ಮೊಬೈಲ್ ಕಳ್ಳತನ ಪ್ರಕರಣವೊಂದು ರೋಚಕ ತಿರುವು ಪಡೆದುಕೊಂಡಿರುವ ಘಟನೆ ದಕ್ಷಿಣ ದೆಹಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಬೈಲ್ ಕಳ್ಳತನದ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಅಕ್ರಮ ಸಂಬಂಧ ಬಯಲು ಮಾಡಿದ್ದಾರೆ. ಗಂಡನ ಮೊಬೈಲ್ ಕಳ್ಳತನ ಮಾಡಲು ಮಹಿಳೆಯೇ ವ್ಯಕ್ತಿಯನ್ನು ನೇಮಿಸಿದ್ದಳು. ಈ ಮೂಲಕ ಗಂಡನ ಮೊಬೈಲ್‌ನಲ್ಲಿರುವ ಗೆಳೆಯನೊಂದಿಗಿನ ತನ್ನ ಆಕ್ಷೇಪಾರ್ಹ ಫೋಟೋಗಳನ್ನು ಡಿಲೀಟ್ ಮಾಡಲು ಮಹಿಳೆ ಪ್ಲಾನ್ ಮಾಡಿದ್ದಳು.
ಏನಿದು ಪ್ರಕರಣ?
ಮೊಬೈಲ್ ಕಳ್ಳತನವಾಗಿದೆ ಎಂದು ವ್ಯಕ್ತಿಯೊಬ್ಬರು ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ತನ್ನ ಮೊಬೈಲ್ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಕಳ್ಳತನವಾದ ಪ್ರದೇಶದ ವ್ಯಾಪ್ತಿಯಲ್ಲಿನ ಸುಮಾರು 70 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮೊಬೈಲ್ ಕಳ್ಳತನದ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಬೈಲ್ ಮತ್ತು ಆಧಾರ್ ಕಾರ್ಡ್ ಸಂಖ್ಯೆ
ಸಿಸಿಟಿವಿಯಲ್ಲಿ ನೀಲಿ ಶರ್ಟ್ ಧರಿಸಿದ್ದ ವ್ಯಕ್ತಿಯೇ ಕಳ್ಳತನ ಮಾಡಿರೋದು ಕಾಣಿಸಿತ್ತು. ಆರೋಪಿ ಕಳ್ಳ ಬಂದ ಸ್ಕೂಟಿಯ ನಂಬರ್ ಜಾಡು ಹಿಡಿದು ಬಂಧನಕ್ಕೆ ಬಲೆ ಬೀಸಿದ್ದರು. ದರಿಯಾಗಂಜ್‌ನಿಂದ ಸ್ಕೂಟರ್ ಬಾಡಿಗೆಗೆ ಪಡೆದುಕೊಂಡಿದ್ದನು. ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR - Automatic number-plate recognition) ಕ್ಯಾಮೆರಾದಿಂದ ಪೊಲೀಸರು ಪತ್ತೆ ಮಾಡಿದ್ದಾರೆ. ಸ್ಕೂಟಿ ಬಾಡಿಗೆಗೆ ಪಡೆದುಕೊಳ್ಳುವಾಗ ಆತ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ದಾಖಲೆಯಾಗಿ (Documents) ನೀಡಿದ್ದನು. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾದಲ್ಲಿದ್ದ ಅಂಕಿತ್ ಗೆಹ್ಲೋಟ್ ಎಂಬಾತನನ್ನು ಬಂಧಿಸಿದ್ದಾರೆ. ಇಬ್ಬರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮುಂದೆ ಆತನ ಪತ್ನಿಯೇ ಮೊಬೈಲ್ ಕಳ್ಳತನಕ್ಕೆ ತಮ್ಮನ್ನು ನೇಮಿಸಿದ್ದಳು ಎಂಬ ಆಘಾತಕಾರಿ ವಿಷಯವನ್ನು ತಿಳಿಸಿದ್ದಾನೆ. ಕಳ್ಳನ ಹೇಳಿಕೆಯನ್ನು ಆಧರಿಸಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆಕೆಯೂ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಮದುವೆಯಾಗಿದ್ರೂ ತಾನು ಅಕ್ರಮ ಸಂಬಂಧ ಹೊಂದಿರೋದಾಗಿ ಮಹಿಳೆ ತಿಳಿಸಿದ್ದಾಳೆ.
ಗಂಡನ ಮೊಬೈಲ್‌ನಲ್ಲಿ ಆಕೆ ಫೋಟೋ!
ಪತ್ನಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆಕೆಯ ಮೊಬೈಲ್‌ನಲ್ಲಿದ್ದ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್‌ಗೆ ಟ್ರಾನ್ಸ್‌ಫರ್ ಮಾಡಿಕೊಂಡಿದ್ದನು. ಈ ವಿಷಯ ಮಹಿಳೆ ತಿಳಿದಾಗ ಆತಂಕಗೊಂಡಿದ್ದಳು. ಗಂಡ ಫೋಟೋ ಗೆಳೆಯನೊಂದಿಗಿನ ಖಾಸಗಿ ಫೋಟೋ ಬಹಿರಂಗಪಡಿಸಿದ್ರೆ ಕುಟುಂಬದಲ್ಲಿ ತನ್ನ ಗೌರವ ಕಡಿಮೆಯಾಗುತ್ತೆ ಎಂದು ಕಳ್ಳತನಕ್ಕೆ ಪ್ಲಾನ್ ಮಾಡಿದ್ದಳು.
ಗಂಡ ಮೊಬೈಲ್ ಕಳ್ಳತನ ಮಾಡಲು ಅಂಕಿತ್ ಗೆಹ್ಲೋಟ್‌ನನ್ನು ನೇಮಿಸಿದ್ದಳು. ಅಂಕಿತ್‌ಗೆ ಗಂಡನ ದಿನಚರಿಯ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿದ್ದಳು. ಮೊಬೈಲ್ ಕದ್ದು, ಅದರೊಳಗಿದ್ದ ತನ್ನ ಎಲ್ಲಾ ಖಾಸಗಿ ಫೋಟೋ ಡಿಲೀಟ್ ಮಾಡಿದ್ದಳು. ಇದೀಗ ಪೊಲೀಸರು ಮಹಿಳೆ ಮತ್ತು ಅಂಕಿತ್‌ನನ್ನು ಬಂಧಿಸಿದ್ದಾರೆ.
ಪೊಲೀಸರಿಂದ ಮಾಹಿತಿ
ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಂಕಿತ್ ಚೌಹಾಣ್ , ಜೂನ್ 19 ರಂದು ಓಲ್ಡ್ ಯುಕೆ ಪೇಂಟ್ ಫ್ಯಾಕ್ಟರಿ ಬಳಿ ವ್ಯಕ್ತಿಯೊಬ್ಬರ ಫೋನ್ ಕಸಿದುಕೊಳ್ಳಲಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆತನ ಪತ್ನಿಯೇ ಕಳ್ಳತನ ಮಾಡಿಸಿರೋದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 12 ವರ್ಷ ಕೆಲಸಕ್ಕೆ ಹೋಗದೆ ₹28 ಲಕ್ಷ ಸಂಬಳ ಪಡೆದ ಪೊಲೀಸ್! ಪತ್ತೆ ಹಚ್ಚಿದ್ದು ಹೇಗೆ?
