ನವದೆಹಲಿ​ (ಜೂ. 05) ಪೂರ್ವ ದೆಹಲಿಯಲ್ಲೊಂದು ಅಮಾನುಷ ಘಟನೆ ನಡೆದಿದೆ.  ವೃದ್ಧ ಮಹಿಳೆಯೊಬ್ಬಳ ಮೇಲೆ ಕಾರು ಹರಿದಿದೆ.  ವೇಗವಾಗಿ ಬಂದ  ಕಾರು ಹರಿದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.

ವೇಗವಾಗಿ ಬಂದ ಕಾರು ಮಹಿಳೆಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮೇಲೆ ಹಾರಿ ನೆಲಕ್ಕೆ ಬಿದ್ದಿದ್ದಾರೆ.  ಹತ್ತಿರದಲ್ಲಿದ್ದ ಜನ ಮಹಿಳೆಯ ರಕ್ಷಣೆಗೆ ಓಡಿ ಬಂದಿದ್ದಾರೆ. ಆದರೆ ಕಾರು ಚಾಲಕ ಮಾತ್ರ ಸುಮ್ಮನಾಗಿಲ್ಲ. ಮತ್ತೆ ಕಾರು ಸ್ಟಾರ್ಟ್ ಮಾಡಿ ಮಹಿಳೆಯ ಮೇಲೆ ಹಾಯಿಸಲು ಬಂದಿದ್ದಾನೆ.

ವಿಧಾನಸೌಧದಲ್ಲೇ ಅಪಘಾತವಾದರೂ ಕೇಳುವವರಿಲ್ಲ

ಕಾರನ್ನು ಅಡ್ಡ ಹಾಕಿದರೂ ಚಾಲಕ ವೇಗವಾಗಿ ಪರಾರಿಯಾಗಿದ್ದಾನೆ. ಸದ್ಯ ಕಾರು ಚಾಲಕನ ಬಂಧನವಾಗಿದ್ದು ವಿಚಾರಣೆ ನಡೆಯುತ್ತಿದೆ. ವೃದ್ಧೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.ಮಹಿಳೆ ತಪ್ಪಿಸಿಕೊಳ್ಳಲು ಯತ್ನ ಮಾಡಿದಕ್ಕೆ ಕಾರು ಹತ್ತಿಸಲಾಗಿದೆಯಾ ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣ ಇದೇಯಾ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.