ಕತ್ತು ಹಿಸುಕಿ ಪ್ರೇಮಿಯ ಕೊಲೆ: ಸೋದರಿ ಸಹಾಯದಿಂದ ಶವವನ್ನು 12 ಕಿ.ಮೀ. ದೂರ ಎಸೆದ ಪಾಪಿ!

ಈಶಾನ್ಯ ದೆಹಲಿಯಲ್ಲಿ 25 ವರ್ಷದ ಮಹಿಳೆಯನ್ನು ಆಕೆಯ ಲಿವ್‌ ಇನ್‌ ಪ್ರೇಮಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಮತ್ತು ಆಕೆಯ ಮೃತದೇಹವನ್ನು ಮನೆಯ ಹೊರಗೆ 12 ಕಿಲೋಮೀಟರ್ ದೂರಕ್ಕೆ ಎಸೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

delhi horror man kills live in partner dumps body 12 km away with sister s help ash

ಹೊಸದೆಹಲಿ (ಏಪ್ರಿಲ್ 22, 2023): ರಾಷ್ಟ್ರ ರಾಜಧಾನಿಯಲ್ಲಿ ಅಫ್ತಾಬ್ ಪೂನಾವಾಲಾ ತನ್ನ ಲಿವ್‌ ಇನ್‌ ಪಾರ್ಟ್‌ನರ್‌ ಆಗಿದ್ದ ಶ್ರದ್ಧಾ ವಾಕರ್‌ನಲ್ಲಿ ಭೀಕರವಾಗಿ ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ್ದ. ಇದೀಗ ಲಿವ್ ಇನ್ ಪಾರ್ಟ್‌ನರ್‌ ವಿರುದ್ಧ ಮತ್ತೊಂದು ಭಯಾನಕ ಅಪರಾಧ ದೆಹಲಿಯಿಂದ ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿಯಲ್ಲಿ 25 ವರ್ಷದ ಮಹಿಳೆಯನ್ನು ಆಕೆಯ ಲಿವ್‌ ಇನ್‌ ಪ್ರೇಮಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಮತ್ತು ಆಕೆಯ ಮೃತದೇಹವನ್ನು ಮನೆಯ ಹೊರಗೆ 12 ಕಿಲೋಮೀಟರ್ ದೂರಕ್ಕೆ ಎಸೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಶವ ಪತ್ತೆಯಾಗಿರುವ ಕುರಿತು ಏಪ್ರಿಲ್ 12 ರಂದು ಪೊಲೀಸರಿಗೆ ತಡರಾತ್ರಿ ಕರೆ ಬಂದಿತ್ತು. ಆ ವೇಳೆ, ಮಹಿಳೆಯ ಮೃತ ದೇಹವು ಆಘಾತದ ಯಾವುದೇ ಗೋಚರ ಲಕ್ಷಣಗಳನ್ನು ಹೊಂದಿರಲಿಲ್ಲ. ನಂತರ, ಶವ ಪರೀಕ್ಷೆ ನಡೆಸಿದಾಗ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ನಿರ್ಧರಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಹೇಳಿದ್ದಾರೆ. 

ಇದನ್ನು ಓದಿ: ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ರಕ್ತ ಮಾರ್ತಿದ್ದ ತಂದೆ: ದುಡ್ಡು ಹೊಂದಿಸಲಾಗದೆ ಆತ್ಮಹತ್ಯೆ ಮಾಡ್ಕೊಂಡ್ರು!

ರೋಹಿನಾ ಮತ್ತು ವಿನೀತ್ ಕಳೆದ 4 ವರ್ಷಗಳ ಹಿಂದೆ ತಮ್ಮ ತಮ್ಮ ಮನೆಯಿಂದ ಓಡಿಬಂದು ಅಮದಿನಿಂದಲೂ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ,  ಏಪ್ರಿಲ್ 12 ರಂದು ಈ ಇಬ್ಬರೂ ಜಗಳವಾಡಿದ್ದು, ಬಳಿಕ ಆರೋಪಿ ವಿನೀತ್ ರೋಹಿನಾಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನನ್ನು ಮದುವೆಯಾಗುವಂತೆ ಗರ್ಲ್‌ಫ್ರೆಂಡ್‌ ಒತ್ತಡ ಹಾಕಿದ ಕಾರಣ ಕೋಪಗೊಂಡು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. 

ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ವಿನೀತ್‌  ಸಂಜೆ ತನ್ನ ಸ್ನೇಹಿತನನ್ನು ಸಂಪರ್ಕಿಸಿದ್ದಾನೆ ಎಂದೂ ತಿಳಿದುಬಂದಿದೆ. ಇನ್ನು, ಈ ಘಟನೆಯ ತನಿಖೆಗಾಗಿ, ಸುಮಾರು 50 ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಘಟನೆ ನಡೆದ ಸ್ಥಳಗಳ ಸುತ್ತಮುತ್ತ ಇರುವ ಸಿಸಿ ಕ್ಯಾಮರಾ  ದೃಶ್ಯಾವಳಿಗಳ ಹುಡುಕಾಟ ನಡೆಸಿದಾಗ ಇಬ್ಬರು ಪುರುಷರು ಮಹಿಳೆಯ ಶವದೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬಾರ್‌ ಡ್ಯಾನ್ಸರ್‌ ಜತೆ ಲವ್ವಿ ಡವ್ವಿ: ದುಬೈನಿಂದ ಬಂದ ಐಐಟಿ ಎಂಜಿನಿಯರ್‌ ಈಗ ಪಕ್ಕಾ ಕ್ರಿಮಿನಲ್!

ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡ ಪೊಲೀಸರು ಕನಿಷ್ಠ 12 ರಿಂದ 13 ಕಿಲೋಮೀಟರ್ ದೂರದಲ್ಲಿ ಅವರ ಬೈಕ್ ಅನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಮಹಿಳೆಯ ಶವವನ್ನು ವ್ಯಕ್ತಿಯೊಬ್ಬರು ವಿಡಿಯೋದಲ್ಲಿ ಹೊತ್ತೊಯ್ಯುತ್ತಿದ್ದು, ಆತನ ಸಹೋದರಿ ಪಾರುಲ್ ಆತನನ್ನು ಹಿಂಬಾಲಿಸುತ್ತಿದ್ದಳು. ಆರೋಪಿಯ ಸಹೋದರಿ ತನ್ನ ಸ್ಕಾರ್ಫ್ ಬಳಸಿ ಇಬ್ಬರಿಗೆ ಮೃತದೇಹವನ್ನು ಮುಚ್ಚಲು ಸಹಾಯ ಮಾಡಿದರು ಎಂದೂ ಅಧಿಕಾರಿಗಳು ಹೇಳಿದರು. 

ಈ ಮಧ್ಯೆ, ಆರೋಪಿಪಿಗಳನ್ನು ಪತ್ತೆ ಹಚ್ಚಲು ಹಾಗೂ ಸೆರೆ ಹಿಡಿಯಲು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಹಿನ್ನೆಲೆ ಏಪ್ರಿಲ್ 20 ರಂದು ವಿನೀತ್‌ ಸಹೋದರಿ ಪಾರುಲ್ ಮತ್ತು ಆಕೆಯ ಇಬ್ಬರು ಮಕ್ಕಳು ಅವರು ವಾಸಿಸುತ್ತಿದ್ದ ಮನೆಯನ್ನು ತೊರೆದಿದ್ದಾರೆ. ಆದರೂ, ತನಿಖಾ ತಂಡವು ಸಿಸಿಟಿವಿ ದೃಶ್ಯಗಳ ಮೂಲಕ ಆಕೆಯ ಚಲನವಲನಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗೂ, ಲೋನಿ ಗಡಿಯ ಬಳಿ ಮಹಿಳೆ ಬಾಡಿಗೆಗೆ ಪಡೆದಿದ್ದ ಕುದುರೆ ಬಂಡಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಪೂರ್ವ ದೆಹಲಿಯಲ್ಲಿ ಬಂಧಿಸಲಾಗಿದೆ. 

ಇದನ್ನೂ ಓದಿ: ಉನ್ನಾವೋ ಗ್ಯಾಂಗ್‌ರೇಪ್‌ ಕೇಸ್‌ ಆರೋಪಿಗಳಿಗೆ ಜಾಮೀನು: ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಕೃತ್ಯಕ್ಕೆ ಸಹಕರಿಸಿರುವ ಬಗ್ಗೆ ಪಾರೂಲ್‌ ಪೊಲೀಸರ ಎದುರು ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಆದರೂ,  ವಿನೀತ್ ಹಾಗೂ ಆತನ ಗೆಳೆಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆಯೇ ನರಹತ್ಯೆಯ ಪ್ರಕರಣವೊಂದರಲ್ಲಿ  ವಿನೀತ್ ಮತ್ತು ಅವನ ತಂದೆ ಇಬ್ಬರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆದರೆ, ಜಾಮೀನಿನ ಕಾರಣ ಕಳೆದ ವರ್ಷ ನವೆಂಬರ್‌ನಿಂದ ಆರೋಪಿ ಜೈಲಿನಿಂದ ಹೊರಗಿದ್ದು ಈಗ ಗರ್ಲ್‌ಫ್ರೆಂಡ್‌ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Crime: ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ

Latest Videos
Follow Us:
Download App:
  • android
  • ios