Crime: ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ

ಮಹಿಳಾ ಪಬ್ಲಿಕ್‌ ಪ್ರಾಸಿಕ್ಯೂಟರ್‌ನ ಮಗನಾಗಿರುವ ಅಪರಾಧಿ ಆಕೆಯನ್ನು ಇತರರಿಂದ ರಕ್ಷಣೆ ಮಾಡಬೇಕಿತ್ತು. ಆದರೆ, ಅವನೇ ತಾಯಿಯನ್ನು ಹಿಂಸೆ ಮಾಡಿ ಮತ್ತು "ಪ್ರಾಣಿಯಂತೆ ವರ್ತಿಸಿ" ಭಯಾನಕ ಕೃತ್ಯ ಎಸಗಿದ್ದಾನೆ ಎಂದು ಜಡ್ಜ್‌ ಹೇಳಿದ್ದಾರೆ. 

like an animal haryana man rapes his own mother forces her to kill self life time imprisonment ash

ಗುರುಗ್ರಾಮ್ (ಏಪ್ರಿಲ್ 19, 2023): ಹರ್ಯಾಣದ ಗುರುಗ್ರಾಮ್‌ನ ನ್ಯಾಯಾಲಯವು ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಿಗೆ ಆತನ ಜೀವನಪರ್ಯಂತ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಹರ್ಯಾಣದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಹುಲ್ ಬಿಷ್ಣೋಯ್ ಅವರು ಅಪರಾಧಿಗೆ 20,000 ರೂ. ದಂಡ ವಿಧಿಸಿದ್ದಾರೆ.
 
ಮಹಿಳಾ ಪಬ್ಲಿಕ್‌ ಪ್ರಾಸಿಕ್ಯೂಟರ್‌ನ ಮಗನಾಗಿರುವ ಅಪರಾಧಿ ಆಕೆಯನ್ನು ಇತರರಿಂದ ರಕ್ಷಣೆ ಮಾಡಬೇಕಿತ್ತು. ಆದರೆ, ಅವನೇ ತಾಯಿಯನ್ನು ಹಿಂಸೆ ಮಾಡಿ ಮತ್ತು "ಪ್ರಾಣಿಯಂತೆ ವರ್ತಿಸಿ" ಭಯಾನಕ ಕೃತ್ಯ ಎಸಗಿದ್ದಾನೆ. ಈ ಹಿನ್ನೆಲೆ, ಮಹಿಳೆಗೆ ತನ್ನ ಜೀವವನ್ನು ಕಳೆದುಕೊಳ್ಳುವುದನ್ನು ಬಿಟ್ಟು ಬೇರೆ ಯಾವ ಆಯ್ಕೆಯೂ ಇರಲಿಲ್ಲ ಎಂದು ನ್ಯಾಯಾಧೀಶರು, ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Crime: ರೇಪ್‌ ಮಾಡಿ ಮಹಿಳೆಗೆ ಬೆಂಕಿ ಹಚ್ಚಿದ ರಾಕ್ಷಸ: ಆಸ್ಪತ್ರೆಯಲ್ಲಿ ಬಲಿಯಾದ ಸಂತ್ರಸ್ತೆ

ಅಪರಾಧಗಳ ಸ್ವರೂಪ, ಅಪರಾಧಗಳನ್ನು ಎಸಗುವ ವಿಧಾನ ಮತ್ತು ಅಪರಾಧಿಯ ಪೂರ್ವವರ್ತನೆ ಹಾಗೂ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಅಪರಾಧಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಅಪರಾಧಿ ಸಾಯುವವರೆಗೂ ಜೈಲಿನಲ್ಲೇ ಇರುತ್ತಾನೆ ಎಂದೂ ಜಡ್ಜ್‌ ಆದೇಶ ನೀಡಿದ್ದಾರೆ. ನವೆಂಬರ್ 16, 2020 ರಂದು, ಹರಿಯಾಣದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಸಂಬಂಧ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಹೆಂಡತಿಗೆ ಅತ್ಯಾಚಾರ ಮಾಡಿ ಈ ರೀತಿ ಮಾಡಿರಬಹುದು ಎಂದು ಹೇಳಿಕೆ ನೀಡಿದ್ದರು. ಹಿರಿಯ ಮಗ ಮಾದಕ ವ್ಯಸನಿಯಾಗಿದ್ದು, ಆಗಾಗ್ಗೆ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದ ಎಂದೂ ಪತಿ ತಿಳಿಸಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಪತಿ ತೀರಿಕೊಂಡ ನಂತರ ಮಹಿಳೆ ತನ್ನ ಸೋದರ ಮಾವನ ಜೊತೆ ಮದುವೆಯಾಗಿದ್ದಳು ಎಂದೂ ತಿಳಿದುಬಂದಿತ್ತು.

ಇದನ್ನೂ ಓದಿ: ಛೀ ಪಾಪಿ..! ಬಿಹಾರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ: ವಿಡಿಯೋ ವೈರಲ್‌ ಬಳಿಕ ಪೊಲೀಸರಿಂದ ತನಿಖೆ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ವೇಳೆ ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮಹಿಳೆಯ ಮಗನನ್ನು ನವೆಂಬರ್ 21, 2020 ರಂದು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯವನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. 18 ಸಾಕ್ಷಿಗಳು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ಆರೋಪಿ ವಿರುದ್ಧದ ಆರೋಪಗಳು ಸರಿ ಎಂದು ಸಾಬೀತಾಗಿದೆ ಎಂದೂ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್

ದೇಶಾದ್ಯಂತ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಪ್ರಕರಣದಲ್ಲಿ ಹೆತ್ತ ತಾಯಿಯ ಮೇಲೆ ರೇಪ್‌ ಮಾಡಿರೋದು ನಿಜಕ್ಕೂ ಹೇಸಿಗೆಯ ವರ್ತನೆಯಾಗಿದೆ.  

ಇದನ್ನೂ ಓದಿ: ಹತ್ರಾಸ್‌ ಗ್ಯಾಂಗ್‌ರೇಪ್‌, ಕೊಲೆ ಕೇಸ್‌: ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್‌; ಒಬ್ಬರು ಮಾತ್ರ ದೋಷಿ

Latest Videos
Follow Us:
Download App:
  • android
  • ios