ದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. ದೆಹಲಿ ಬಿಜೆಪಿ ಯೂಥ್ ಅಧ್ಯಕ್ಷನ ಒಂದು ತಿಂಗಳ ಪುತ್ರಿಯನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪಹರಿಸಿದ ಘಟನೆ ನಡೆದಿದೆ.

ನವದೆಹಲಿ(ಫೆ.09): ದೆಹಲಿಯಲ್ಲಿ ಭಯಾಕನ ಘಟನೆಯೊಂದು ನಡೆದಿದೆ. ದೆಹಲಿ ಬಿಜೆಪಿ ಯೂಥ್ ಪ್ರಸಿಡೆಂಡ್ ವಾಸು ರುಖಾರ್ ಅವರ ಒಂದು ತಿಂಗಳ ಕಂದನ ಅಪಹರಿಸಿದ ಘಟನೆ ನಡೆದಿದೆ. ವಾಸು ಪತ್ನಿ ಪುತ್ರಿ ಸರಿಯಾ ಜೊತೆ ಮನೆಯ ಪಕ್ಕದ ಜಾನ್ಸಿ ರಾಣಿ ರಸ್ತೆಯಲ್ಲಿರುವ ದೇವಸ್ಥಾನ ತೆರಳಿ ಮರಳುತ್ತಿರುವಾಗ ಈ ಘಟನೆ ನಡೆದಿದೆ. ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಈ ವೇಳ ಕಿರುಚಾಡುತ್ತಲೆ ವಾಸು ಪತ್ತೆ ಕುಸಿದು ಬಿದ್ದಿದ್ದಾರೆ. ಸ್ಥಳೀಯರ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಮಗು ರಸ್ತೆ ಬದಿಯಲ್ಲಿ ಅಳುತ್ತಿರುವುದು ಪತ್ತೆಯಾಗಿದೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ

ಜಾನ್ಸಿ ರಾಣಿ ರಸ್ತೆಯಲ್ಲಿರುವ ಜ್ಞಾನದೇವಲನ್ ಮಂದಿರಕ್ಕೆ ವಾಸು ಪತ್ನಿ ತಮ್ಮ ಒಂದು ತಿಂಗಳ ಮಗುವಿನೊಂದಿಗೆ ತೆರಳಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರಳುತ್ತಿರುವ ವೇಳೆ ವೇಗವಾಗಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರರು, ವಾಸು ಪತ್ನಿ ಅವರ ಕೈಯಿಂದ ಮಗುವನ್ನು ಎತ್ತಿ ಅಪಹರಿಸಿದ್ದಾರೆ. ಮಗುವನ್ನು ಅಪಹಕರಕಾರರು ಎತ್ತಿಕೊಂಡು ಬೈಕ್‌ನಲ್ಲಿ ಸಾಗುತ್ತಿದ್ದಂತೆ ತಾಯಿ ಕಿರುಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಆತಂಕ ಹಾಗೂ ಆಘಾತದಿಂದ ರಸ್ತೆಯಲ್ಲಿ ಕುಸಿದಿದ್ದಾರೆ.

ಮಧ್ಯರಾತ್ರಿ ಬೆಂಗಳೂರು ಪೊಲೀಸರ ಡೆಡ್ಲಿ ಚೇಸಿಂಗ್, ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪರ್ಸ್‌ ಬಂಧನ

ನೆರವಿಗೆ ಬಂದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಎಲ್ಲಾ ಕಡೆ ನಾಕಾ ಬಂದಿ ಹಾಕಿದ್ದಾರೆ. ಎಲ್ಲಾ ಠಾಣೆಗಳಿಗೆ ಅಲರ್ಟ್ ಸಂದೇಶ ನೀಡಲಾಗಿದೆ. ಹೀಗಾಗಿ ಎಲ್ಲಾ ದಿಕ್ಕಿನಿಂದ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇತ್ತ ಮಗುವಿನ ಫೋಟೋ ಸಾಮಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡಿತು. ಕೆಲ ಗಂಟೆಗಳ ಕಾಲ ಯಾವುದೇ ಸುಳಿವು ಸಿಕ್ಕಿಲ್ಲ. ವಾಸು ರುಖಾರ್ ಸಂಬಂಧಿಕರು ಘಟನೆ ನಡೆದ ಸ್ಥಳ ಸುತ್ತ ಹುಡುಕಾಟ ಆರಂಭಿಸಿದ್ದಾರೆ. 

ಹುಡುಕಾಟದ ವೇಳೆ ಮೌರಿಸ್ ನಗರ್ ಪೋಲೀಸ್ ಠಾಣಾ ವ್ಯಾಪ್ತಿಯ ಕಾಳಿ ಮಂದಿರದ ಬಳಿ ಪುಟ್ಟ ಕಂದಮ್ಮನನ್ನ ರಸ್ತೆ ಬದಿಯಲ್ಲಿ ಅನಾಥವಾಗಿ ಬಿಟ್ಟುಹೋಗಿರುವುದು ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಪಾಸನೆ ನಡೆಸಿ ಮಗು ಆರೋಗ್ಯವಾಗಿರುವುದು ದೃಢಪಡಿಸಿದ್ದಾರೆ. ಇತ್ತ ಪೊಲೀಸರು ಸೆಕ್ಷನ್ 363 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಇತ್ತ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ. 

ಇದ್ದರೆ ಇರಬೇಕು ನಿನ್ನಂಥ ಅಪ್ಪ..!ಕಿಡ್ನ್ಯಾಪ್ ಆದ ಮಗನನ್ನೂ 24 ವರ್ಷದ ಬಳಿಕ ಮರಳಿ ಪಡೆದ!

ಮುಸುಕುದಾರಿಗಳಿಂದ ಮಗು ಕಳ್ಳತನಕ್ಕೆ ಯತ್ನ?
ಇಬ್ಬರು ಮುಸುಕುದಾರಿಗಳು ಬೈಕ್‌ನಲ್ಲಿ ಬಂದು 5 ವರ್ಷದ ಮಗುವನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದಿಂದಾಗಿ ಕರ್ನಾಟಕದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಪೌಡರ್‌ ಮಾರಾಟಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಪೌಡರ್‌ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದು ಮಹಿಳೆ ಬೇಡ ಅಂತ ಕಳುಹಿಸಿದ್ದಾರೆ. ಮತ್ತೆ ಸಂಜೆ ವೇಳೆ ಅದೇ ಬೀದಿಯಲ್ಲಿ ಬೈಕ್‌ನಲ್ಲಿ ಇಬ್ಬರು ಮುಸುಕುದಾರಿಗಳು ಓಡಾಟ ನಡೆಸಿ ರಾತ್ರಿ 8 ಗಂಟೆ ವೇಳೆ ಮನೆ ಮುಂದೆ ಇದ್ದ 5 ವರ್ಷದ ಮಗು ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.