ಬೆಂಗಳೂರು [ಡಿ.10]:  ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ ಒಂದು ನಟೋರಿಯಸ್ ಗ್ಯಾಂಗ್ ಬೆಂಗಳೂರಿಗರೇ ಎಚ್ಚರ! ಹಂತರ ಟೀಂ ಒಂದು ಬೆಂಗಳೂರು ಪ್ರವೇಶಿಸಿದ್ದು, ಚಿನ್ನ ಕದಿಯೋ ಜೊತೆಗೆ ಪ್ರಾಣ ತೆಗೆದೂ ಹೋಗ್ತಾರೆ. ಸದ್ಯ ಈ ಗ್ಯಾಂಗ್ ಬೆಂಗಳೂರು ಪೊಲೀಸರ ನಿದ್ದೆ ಗೆಡಿಸಿದ್ದು, ಇವರ ಬಂಧನಕ್ಕೆ ಬಲೆ ಬೀಸಿದೆ. 

ಕ್ಯಾತ್ಸಂದ್ರದಲ್ಲಿ ಮಹಿಳೆಯೊಬ್ಬರನ್ನ ಈ ಗ್ಯಾಂಗ್ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದು, ಬೈಕಿನಲ್ಲಿ ಆಗಮಿಸಿ ಚಿನ್ನ ಕಿತ್ತುಕೊಳ್ಳುವುದಲ್ಲದೇ  ಕತ್ತು ಸೀಳಿ ಕೊಲೆ ಮಾಡಿ ತೆರಳುತ್ತಾರೆ. 

ವೇಶ್ಯಾವಾಟಿಕೆ ದಂಧೆ : ನಟ ಸಾಧುಕೋಕಿಲಾಗೆ ರಿಲೀಫ್...

ಉತ್ತರ ಪ್ರದೇಶದಿಂದ ಬಂದಿರೋ ಗ್ಯಾಂಗಿನ ಕೈಯಲ್ಲಿ ಯಾರೇ ಸಿಕ್ಕಿದರೂ ಕೂಡ ಅವರು ಪ್ರಾಣ ತೆಗೆದು ದೋಚಿಕೊಂಡು ಪರಾರಿಯಾಗುತ್ತಾರೆ. ದಂಡುಪಾಳ್ಯ ಗ್ಯಾಂಗ್ ನಂತೆಯೇ ಭೀಕರವಾಗಿ ಕೊಲೆ ಮಾಡುವ ಈ ಗ್ಯಾಂಗ್ ಸೋಲದೇವನಹಳ್ಳಿ, ಹೇಸರಘಟ್ಟ, ಪೀಣ್ಯ ಈ ಭಾಗದಲ್ಲಿ ನೆಲೆಸಿದೆ ಎನ್ನಲಾಗುತ್ತಿದೆ. 

ಸದ್ಯ ಬೆಂಗಳೂರು ಪೊಲೀಸರು ಈ ಖತರ್ನಾಕ್ ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.