ಬೆಂಗಳೂರು [ಡಿ. 10]: ಮೈಸೂರಿನ ಮಸಾಜ್ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಸಿದ ಆರೋಪದಕ್ಕೆ ನಟ ಸಾಧು ಕೋಕಿಲಾಗೆ ಹೈ ಕೋರ್ಟಿನಿಂದ ರಿಲೀಫ್ ಸಿಕ್ಕಿದೆ. 

ಮೈಸೂರಿನ ಮಸಾದ್ ಕೇಂದ್ರದಲ್ಲಿ ನಟ ಸಾಧು ಕೋಕಿಲಾ ಹಾಗೂ ಇನ್ನೋರ್ವ ನಟ ಮಂಡ್ಯ ರಮೇಶ್ ವಿರುದ್ಧ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡ ಆರೋಪ ಎದುರಾಗಿತ್ತು. 

ಈ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಆರೋಪ ಪಟ್ಟಿಯಲ್ಲಿ ಸಾಧುಕೋಕಿಲ ಹೆಸರು ಸೇರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. 

'ಕುಚ್ಚಿಕು' ಸಾಂಗ್ ರೀಮೆಕ್‌; ಡಿ-ಬಾಸ್‌ಗೆ ಜೋಡಿಯಾಗಿ ಟೈಗರ್!...

ಈ ನಿಟ್ಟಿನಲ್ಲಿ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸ್ಯಾಂಡಲ್ ವುಡ್ ನಟ ಸಾಧುಕೋಕಿಲಾ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ದೂರಿನ ಅನ್ವಯ ಪ್ರಕರಣ ವಿಚಾರಣೆ ನಡೆಸಿದ ಹೈ ಕೋರ್ಟ್ ಸಾಧುಕೋಕಿಲಾ ವಿರುದ್ಧ ಮುಂದಿನ ಕ್ರಮಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಇದರಿಂದ ಇವರ ವಿರುದ್ಧ  ಪ್ರಕರಣ ಸಂಬಂಧ ಇದೀಗ ಸಾಧು ಕೋಕಿಲಾಗೆ ರಿಲೀಫ್ ಸಿಕ್ಕಂತಾಗಿದೆ.