ಚುನಾವಣೆ ಪ್ರಚಾರದ ವೇಳೆ ಚಿತ್ರ ಬಿಡಿಸಿ ಉಡುಗೊರೆ ಕೊಟ್ಟಿದ್ದ ಬಾಗಲಕೋಟೆ ಯುವತಿಗೆ ಪ್ರಧಾನಿ ಮೋದಿ ಪತ್ರ!

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಭಾವಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಯುವತಿಗೆ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ಮಾತಿನಂತೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.

PM Modi wrote a letter to bagalkot girl nagaratna meti for gifting creative portrait rav

ಬಾಗಲಕೋಟೆ (ಮೇ.13): ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಭಾವಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಬಾಗಲಕೋಟೆ ಯುವತಿಗೆ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿ ಪತ್ರ ಬರೆದಿದ್ದಾರೆ.

ಕಳೆದ ತಿಂಗಳು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿಗೆ ಕಾರ್ಯಕ್ರಮಕ್ಕೆ ಬಂದಿದ್ದ ಯುವತಿ ನಾಗರತ್ನ ಮೇಟಿ ತಾನು ಬಿಡಿಸಿದ ಚಿತ್ರ ಹಿಡಿದು ವೇದಿಕೆ ಮುಂಭಾಗದಲ್ಲಿ ನಿಂತಿದ್ದಳು. ಪ್ರಧಾನಿ ಮೋದಿಯತ್ತ ಚಿತ್ರಿಸಿದ ಸ್ಕೆಚ್‌ ತೋರಿಸಿದ್ದಳು. ತಾಯಿಯ ಫೋಟೋ ಫ್ರೆಮ್ ನೋಡಿ ಎಸ್ ಪಿಜಿ ಸಿಬ್ಬಂದಿಗೆ ಹೇಳಿ ತರಿಸಿಕೊಂಡಿದ್ದ ಮೋದಿ. ಅದರಲ್ಲಿ ನಿನ್ನ ಹೆಸರು, ವಿಳಾಸ ಬರೆದುಕೊಡು ನಾನು ಪತ್ರ ಕಳಿಸುತ್ತೇನೆ ಎಂದಿದ್ದ ಪ್ರಧಾನಿ ಮೋದಿ ಇದೀಗ ಕೊಟ್ಟ ಮಾತಿನಂತೆ ಯುವತಿಗೆ ಮೇ.5ರಂದು ಪತ್ರ ಬರೆದು ಪೋಸ್ಟ್ ಮೂಲಕ ಯುವತಿಗೆ ಕಳಿಸಿದ್ದಾರೆ.

ರಾಹುಲ್‌ ಗಾಂಧಿ ಜೊತೆ ಚರ್ಚೆಗೆ BJYM ಉಪಾಧ್ಯಕ್ಷ ಅಭಿನಾ ಪ್ರಕಾಶ್‌ರನ್ನ ನೇಮಿಸಿದ ಬಿಜೆಪಿ!

ಮೋದಿ ಬರೆದ ಪತ್ರದಲ್ಲೇನಿದೆ?

ಇಂತಹ ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದ್ದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಚಿತ್ರವು ಮಾನವನ ಭಾವನೆಗಳ ಪ್ರಾಮುಖ್ಯತೆಯನ್ನ ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ. ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ರಚನಾತ್ಮಕ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಿ ಶುಭವಾಗಲಿ ಎಂದು ಪ್ರಧಾನಿ ಯುವತಿಗೆ ಹಾರೈಸಿದ್ದಾರೆ.

Latest Videos
Follow Us:
Download App:
  • android
  • ios