ಎಸ್‌ಎಂಎಸ್‌ ನಂಬಿ ಹೂಡಿಕೆ ಮಾಡಿದ್ದ ₹1.12 ಲಕ್ಷ ವಂಚನೆ: ದೂರು ದಾಖಲು

ಮೊಬೈಲ್‌ಗೆ ಬಂದು ಸಂದೇಶವೊಂದನ್ನು ನಂಬಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ₹1.12 ಲಕ್ಷ ವಂಚನೆಯಾಗಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

1 12 lakh invested by trusting SMS fraud at Bengaluru gvd

ಬೆಂಗಳೂರು (ಮೇ.13): ಮೊಬೈಲ್‌ಗೆ ಬಂದು ಸಂದೇಶವೊಂದನ್ನು ನಂಬಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ₹1.12 ಲಕ್ಷ ವಂಚನೆಯಾಗಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಪ್ಪನ ಅಗ್ರಹಾರ ಸಾಯಿಶ್ರೀ ಲೇಔಟ್‌ ನಿವಾಸಿ ರವಿಶಂಕರ್‌ ಮಂತ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. 

ಖಾಸಗಿ ಕಂಪನಿ ಉದ್ಯೋಗಿ ರವಿ ಶಂಕರ್‌ ಮೊಬೈಲ್‌ಗೆ ‘ಜಿಎಸ್ಎಫ್‌ ಪ್ರೋ ಆ್ಯಪ್‌’ ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸಂದೇಶ ಬಂದಿದೆ. ಈ ಸಂದೇಶವನ್ನು ನಂಬಿದ ರವಿ ಶಂಕರ್‌, ಆ್ಯಪ್‌ ಡೌನ್‌ಲೋಡ್‌ ಮಾಡಿ ಅಪರಿಚಿತ ವ್ಯಕ್ತಿಯ ಬ್ಯಾಂಕ್‌ ಖಾತೆಗೆ ವಿವಿಧ ಹಂತಗಳಲ್ಲಿ ₹1.12 ಲಕ್ಷ ಹಣ ವರ್ಗಾಯಿಸಿದ್ದಾರೆ. ಕೆಲ ದಿನಗಳ ಬಳಿಕ ಜಿಎಸ್‌ಎಫ್‌ ಆ್ಯಪ್‌ ಡಿಲೀಟ್‌ ಆಗಿದೆ. ಅಪರಿಚಿತ ವ್ಯಕ್ತಿ ಸಂಪರ್ಕ ಕಡಿದುಕೊಂಡಿದ್ದಾನೆ. ಬಳಿಕ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ನಂತರ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗೋದು ಖಚಿತ: ಒವೈಸಿ

76 ಲಕ್ಷ ಕಳೆದುಕೊಂಡ ವೈದ್ಯ: ಸ್ಟಾಕ್‌ ಎಕ್ಸ್‌ಚೇಂಜ್‌ ಮಾರ್ಕೆಟ್‌ನಲ್ಲಿ ಹಣ ಹೂಡಿ ನಗರದ ವೈದ್ಯರೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಅವರು ಬರೋಬ್ಬರಿ 76 ಲಕ್ಷ ರುಪಾಯಿಯನ್ನು ಕಳೆದುಕೊಂಡಿದ್ದಾರೆ. ವಿಐಪಿ ಆನಂದ್‌ ವ್ಯಾನ್ಗಾರ್ಡ್‌ ಗ್ರೂಪ್‌ ಕಂಪನಿ ಹೆಸರಿನಲ್ಲಿ ವಂಚಕರು ವೈದ್ಯರೊಬ್ಬರಿಗೆ ಕರೆ ಮಾಡಿ ಸ್ಟಾಕ್‌ ಎಕ್ಸ್‌ಚೇಂಜ್‌ ಮಾಕೆರ್ಟ್‌ನಲ್ಲಿ ಆಸಕ್ತಿ ಇದೆಯಾ, ಹಾಗಿದ್ದರೆ ಬಂಡವಾಳ ಹೂಡಿ ಹೆಚ್ಚು ಲಾಭ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹಾಗಾಇ ವೈದ್ಯರು ಕಳೆದ ಮಾರ್ಚ್‌ 24 ರಿಂದ ಏಪ್ರಿಲ್‌ 16ರ ಅವಧಿಯೊಳಗೆ ವಿವಿಧ ಖಾತೆಗಳಿಗೆ 76 ಲಕ್ಷ ರು. ಜಮಾ ಮಾಡಿದ್ದಾರೆ. ಇನ್ನು 22 ಲಕ್ಷ ರುಪಾಯಿ ಸಂದಾಯ ಮಾಡಬೇಕೆಂದು ವಂಚಕರು ಹೇಳಿದ್ದಾರೆ. ಅದ್ದರಿಂದ ಸಂಶಯಗೊಂಡ ವೈದ್ಯರು ನಗರದ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ರೀತಿ ಸ್ಟಾಕ್‌ ಎಕ್ಸ್‌ಚೇಂಜ್‌ ಮಾರ್ಕೆಟ್‌ನಲ್ಲಿ ಹಣ ಹೂಡುವಂತೆ ಬರುವ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

Latest Videos
Follow Us:
Download App:
  • android
  • ios