ಹಿಂದಿನ ಪ್ರಕರಣವೊಂದರ ವಿಚಾರಣೆಗೆಂದು ಡಿಡಿಪಿಐ ಕಚೇರಿಗೆ ತನಿಖೆಗೆ ಹೋದಾಗ ಅವರು ತಪ್ಪಿಸಿಕೊಂಡು ಹೋಗಿದ್ದು, ಸೋಮವಾರ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಅಂಟಿಸಿ ಬಂದಿರುವ ಪ್ರಸಂಗ ಶುಕ್ರವಾರ ನಡೆದಿದೆ.

ಹಾವೇರಿ (ಜೂ.11) ಹಿಂದಿನ ಪ್ರಕರಣವೊಂದರ ವಿಚಾರಣೆಗೆಂದು ಡಿಡಿಪಿಐ ಕಚೇರಿಗೆ ತನಿಖೆಗೆ ಹೋದಾಗ ಅವರು ತಪ್ಪಿಸಿಕೊಂಡು ಹೋಗಿದ್ದು, ಸೋಮವಾರ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಅಂಟಿಸಿ ಬಂದಿರುವ ಪ್ರಸಂಗ ಶುಕ್ರವಾರ ನಡೆದಿದೆ.

ಕಳೆದ ವರ್ಷ ಡಿಡಿಪಿಐ ಜಗದೀಶ್ವರ್‌ ಅವರ ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದ ವೇಳೆ ನಗದು ಹಾಗೂ ಕೆಲ ದಾಖಲೆಗಳು ಸಿಕ್ಕಿದ್ದವು. ಆ ಪ್ರಕರಣ ಲೋಕಾಯುಕ್ತಕ್ಕೆ (Karnataka lokayukta) ಹಸ್ತಾಂತರವಾಗಿತ್ತು. ಈ ಪ್ರಕರಣದ ವಿಚಾರಣೆಗೆ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಡಿಡಿಪಿಐ ಜಗದೀಶ್ವರ್‌(DDPI Jagadishwar) ಅವರ ವಿಚಾರಣೆಗೆ ಶುಕ್ರವಾರ ಸಂಜೆ ತೆರಳಿದ್ದರು. ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಅಲ್ಲಿಂದ ನಾಪತ್ತೆಯಾಗಿದ್ದಾರೆ. ತನಿಖೆಗೆ ಅಸಹಕಾರ ತೋರಿದ್ದು, ಸೋಮವಾರ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಡಿಡಿಪಿಐ ಕಚೇರಿ ಗೋಡೆಗೆ ನೋಟಿಸ್‌ ಅಂಟಿಸಿ ಬರಲಾಗಿದೆ. ಇದೇ ರೀತಿ ಅಸಹಕಾರ ತೋರಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಚಾಮರಾಜನಗರ: ಲಂಚ ಸ್ವೀಕಾರ, ಪಿಡಬ್ಲ್ಯೂಡಿ ಎಎಎ, ಎಇ ಲೋಕಾಯುಕ್ತ ಬಲೆಗೆ

ಅಕ್ರಮ ಆಸ್ತಿ ಗಳಿಕೆ : 3.35 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ

ಬೆಂಗಳೂರು (ಜೂ.11) ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಾಲಿಕೆ ಮಾಜಿ ಸದಸ್ಯೆ ಗೌರಮ್ಮ ಅವರಿಗೆ ಸೇರಿದ 3.35 ಕೋಟಿ ರು. ಮೌಲ್ಯದ 18 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಅಜಾದ್‌ನಗರ ವಾರ್ಡ್‌ನ ಸದಸ್ಯೆಯಾಗಿದ್ದ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜು ವಿರುದ್ಧ ಲೋಕಾಯುಕ್ತ ಸಂಸ್ಥೆಯು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ದಾಳಿ ನಡೆಸಿ ಪರಿಶೋಧ ನಡೆಸಿತು. ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಅಕ್ರಮ ಆಸ್ತಿ ಸಂಪಾದನೆ ಮಾಡಿ ಕುಟುಂಬ ಸದಸ್ಯರ ಹೆಸರಲ್ಲಿ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರು. ಅಲ್ಲದೇ ಅಕ್ರಮ ಆಸ್ತಿ ಗಳಿಕೆ ಮಾಡಿದ್ದರು. ಇದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಗೌರಮ್ಮ ಅವರಿಗೆ ಸೇರಿದ 3.35 ಕೋಟಿ ರು. ಮೌಲ್ಯದ 18 ಸ್ಥಿರಾಸ್ತಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಲೋಕಾಯುಕ್ತ ದಾಳಿ: 14 ಭ್ರಷ್ಟ ಅಧಿಕಾರಿಗಳ ಬಳಿ 48 ಕೋಟಿ ಆಸ್ತಿ ಪತ್ತೆ