ಚಾಮರಾಜನಗರ: ಲಂಚ ಸ್ವೀಕಾರ, ಪಿಡಬ್ಲ್ಯೂಡಿ ಎಎಎ, ಎಇ ಲೋಕಾಯುಕ್ತ ಬಲೆಗೆ
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆಂಪರಾಜು ಹಾಗೂ ಸಹಾಯಕ ಎಂಜಿನಿಯರ್ ಮಧುಸೂಧನ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣದ ಸಮೇತ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಚಾಮರಾಜನಗರ(ಜೂ.10): ರಸ್ತೆ ಕಾಮಗಾರಿ ನಿರ್ವಹಣೆ ಸಂಬಂಧ ಗುತ್ತಿಗೆದಾರರಿಂದ 30 ಸಾವಿರ ರು.ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಶುಕ್ರವಾರ ಸಂಜೆ ನಡೆದಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆಂಪರಾಜು ಹಾಗೂ ಸಹಾಯಕ ಎಂಜಿನಿಯರ್ ಮಧುಸೂಧನ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣದ ಸಮೇತ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಮೈಸೂರಿನ ಗುತ್ತಿಗೆದಾರ ಸುನೀಲ್ ಕಾಮಗಾರಿ ನಿರ್ವಹಣೆ ಮಾಡಿದ್ದು, ಲೋಕಾಯುಕ್ತ ಅಧಿಕಾರಿಗಳಿಗೆ ಲಂಚ ಕೇಳುತ್ತಿರುವ ಬಗ್ಗೆ ಇವರ ವಿರುದ್ಧ ದೂರು ನೀಡಿದ್ದರು.
ಚಾಮರಾಜನಗರ: ಮದ್ಯದ ಜತೆ ವಿಷ ಸೇವಿಸಿ ಇಬ್ಬರು ಆತ್ಮೀಯ ಸ್ನೇಹಿತರು ಆತ್ಮಹತ್ಯೆಗೆ ಯತ್ನ, ಓರ್ವ ಸಾವು
ಕುದೇರು-ಬಾಗಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟದ ಪರಿಶೀಲನೆಗೆ ತೆರಳಿದ್ದ ಇಬ್ಬರು ಅಧಿಕಾರಿಗಳು ಗುತ್ತಿಗೆದಾರರಿಂದ ಸ್ಥಳದಲ್ಲಿಯೇ 30 ಸಾವಿರ ರು. ಲಂಚ ಪಡೆದು ಪರಾರಿಯಾಗುತ್ತಿದ್ದಂತೆ ಲೋಕಾಯುಕ್ತ ಪೊಲೀಸರ ತಂಡ ಸಿನಿಮೀಯ ರೀತಿಯಲ್ಲಿ ಇವರಿಬ್ಬರು ಅಧಿಕಾರಿಗಳು ಇದ್ದ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿನಿಲ್ಲಿಸಿ ತಪಾಸಣೆ ಮಾಡಿದಾಗ ಲಂಚವಾಗಿ ಸ್ವೀಕರಿಸಿದ್ದ ಹಣದೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಮ್ಯಾಥ್ಯು ಥಾಮಸ್ ಅವರ ನೇತೃತ್ವದ ತಂಡ ಗುತ್ತಿಗೆದಾರ ಸುನೀಲ್‌ನಿಂದ ದೂರು ಪಡೆದು, ಲಂಚ ಕೊಡುತ್ತಿದ್ದಾಗ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರ ತಂಡವು ಇಬ್ಬರು ಅಧಿಕಾರಿಗಳನ್ನು ತೀವ್ರ ತನಿಖೆ ನಡೆಸಿ, ಪ್ರಕರಣ ದಾಖಲು ಮಾಡಿದ್ದು, ಮಧ್ಯರಾತ್ರಿ ವೇಳೆಗೆ ನ್ಯಾಯಾದೀಶರ ಮುಂದೆ ಹಾಜರುಪಡಿಸಲಿದ್ದಾರೆ.