ಸಿನಿಮಾದಲ್ಲಿ ಲೀಡ್ ರೋಲ್ ಕೊಡಿಸ್ತೀನಿ ಎಂದು ವಂಚನೆ ಮಾಡಿ 58 ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಆರೋಪಿ ಧನುಷ್ ಎಂಬಾತ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು (ಮಾ.1): ನಾನು‌ ಸಿನಿಮಾದಲ್ಲಿ ನಟಿಸಬೇಕು, ನಾನು ಸ್ಟಾರ್ ಆಗಬೇಕು ಅಂದುಕೊಳ್ಳೋರು ಹುಷಾರಾಗಿರಿ. ಅದರಲ್ಲೂ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಬೇಕು ಅಂದುಕೊಳ್ಳೋರು ಕೂಡ ಹುಷಾರಾಗಿರಿ. ಸಿನಿಮಾ ಅವಕಾಶಕ್ಕಾಗಿ ಕಂಡ ಕಂಡವರನ್ನ ನಂಬಿ ಮೋಸ ಹೋಗಬೇಡಿ. ಸಿನಿಮಾದಲ್ಲಿ ಲೀಡ್ ರೋಲ್ ಕೊಡಿಸ್ತೀನಿ ಎಂದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. 58 ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಆರೋಪಿ ಧನುಷ್ ಎಂಬಾತ ವಂಚಿಸಿದ್ದಾನೆ.

ಯುವಕ, ಯುವತಿಯರು ಸೇರಿ 58 ಜನ ಈಗ ಠಾಣೆ ಮೆಟ್ಟಿಲೇರಿದ್ದಾರೆ. 58 ಜನರಿಂದ ಈತ ಪಡೆದುಕೊಂಡಿದ್ದು ಬರೋಬ್ಬರಿ 18 ಲಕ್ಷ ರೂ ಹಣ. ಹಣ ಕಳೆದುಕೊಂಡವರು ಈಗ ರಾಜಾಜಿನಗರ ಠಾಣೆಗೆ ಧನುಷ್ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಬೀಗ ಹಾಕಿದ ಮನೆಗಳಲ್ಲಿ ಚಿನ್ನ ದೋಚುತ್ತಿದ್ದ ನೇಪಾಳಿ ಗ್ಯಾಂಗ್‌

ಸದ್ಯ ಆರೋಪಿ ಧನುಷ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಾಂಗ್ಲಿಯಾನ ಖ್ಯಾತಿಯ ಹಿರಿಯ ನಟಿ ಭವ್ಯ ಪ್ರಾಂಶುಪಾಲರಾಗಿರುವ ಆ್ಯಕ್ಟಿಂಗ್ ಸ್ಕೂಲ್ ನಲ್ಲಿ ಈತ ಆ್ಯಕ್ಟಿಂಗ್ ಮತ್ತು ಡ್ಯಾನ್ಸ್ ಹೇಳಿಕೊಡ್ತಿದ್ದ ಎಂದು ತಿಳಿದುಬಂದಿದೆ. ಅಲ್ಲಿ ಪರಿಚಯ ಆದವರಿಗೆ ಆ್ಯಕ್ಟಿಂಗ್ ಚಾನ್ಸ್ ಕೊಡಿಸ್ತೀನಿ ಎಂದು ಆಮಿಷ ಒಡ್ಡಿ, ಲೀಡ್ ರೋಲ್ ನಲ್ಲಿ ನಟಿಸೋ ಹಾಗೆ ಮಾಡ್ತೀನಿ ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದ.

HUBBALLI CRIME NEWS: ಆಟವಾಡಲು ಹೋಗಿದ್ದ ಬಾಲಕನ ಭೀಕರ ಹತ್ಯೆ!

ಹೀಗೆ ಒಬ್ಬೊಬ್ಬರಿಂದ ಬರೋಬ್ಬರಿ 20 ಸಾವಿರದಿಂದ 50 ಸಾವಿರ ವರೆಗೆ ಹಣ ಸುಲಿಗೆ ಮಾಡಿದ್ದು, ಒಟ್ಟು 18 ಲಕ್ಷ ರೂ ಹಣ ನಾಮ ಹಾಕಿದ್ದಾನೆ. ಕೆಲವರಿಗೆ ಸಿನಿಮಾದಲ್ಲಿ ಸಣ್ಣ ಪುಟ್ಟ ರೋಲ್ ಕೊಡಿಸಿದ್ದಾನೆ ಕೂಡ ಆದರೆ ಲೀಡ್ ರೋಲ್ ಕೊಡಿಸಿಲ್ಲ ಎಂದು ದೂರು ದಾಖಲು ಮಾಡಲಾಗಿದೆ.