Cyber Crime: 'ಅಶ್ಲೀಲ ವಿಡಿಯೋ ಡಿಲೀಟ್ ಮಾಡ್ತೀವಿ, ₹50 ಸಾವಿರ ಕೊಡಿ ': ಸಿಬಿಐ ಹೆಸರಲ್ಲಿ ವಂಚನೆಗೆ ಯತ್ನ
Cyberb Crime: ನಿಮ್ಮ ಮೊಬೈಲಿನಿಂದ ಅಶ್ಲೀಲ ವಿಡಿಯೋ ಅಪ್ಲೋಡ್ ಆಗಿದೆ. ಹೀಗಾಗಿ ನೀವು ವಿಚಾರಣೆಗೆ ಕಚೇರಿಗೆ ಬರ್ಬೇಕಾಗುತ್ತೆ ಎಂದು ಸಿಬಿಐ ಹೆಸರಲ್ಲಿ ಗದಗ ಜಿಲ್ಲೆ ನರಗುಂದ ಮೂಲದ ಸಿದ್ದಪ್ಪ ಎಂಬುವವರಿಗೆ ಕರೆ ಬಂದಿತ್ತು.
ಗಿರೀಶ ಕಮ್ಮಾರ, ಗದಗ
ಗದಗ (ಜೂ. 30): ಫೇಸ್‌ಬುಕ್ ಹ್ಯಾಕ್ ಮಾಡಿ ನಿಮಗೇ ಗೊತ್ತಿಲ್ಲದೇ ನಿಮ್ಮ ಹೆಸರಲ್ಲಿ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಡೋ ಜಾಲ ವ್ಯಾಪಕವಾಗಿದೆ. ಇಂಥ ಪ್ರಕರಣ ನಿಮ್ಮ ಗಮನಕ್ಕೂ ಬಂದಿರಬಹುದ. ಫೇಸ್‌ಬುಕ್ ಅಕೌಂಟ್‌ಗೆ ಹಣ ಕೇಳ್ಕೊಂಡು ಮೆಸೇಜ್ ಬಂದ್ರೆ ಸಾಮಾನ್ಯವಾಗಿ ಅವೈಡ್ ಮಾಡ್ತಾರೆ. ಯಾಕಂದ್ರೆ ಇಂಥ ವಂಚನೆಗಳು ಸಾಮಾನ್ಯವಾಗಿದ್ದು ಜನರಿಗೆ ಈ ಬಗ್ಗೆ ಅರಿವು ಮೂಡಿದೆ. ಸದ್ಯ ಇಂಥ ಟ್ರಿಕ್‌ಗಳು ವರ್ಕೌಟ್ ಆಗ್ತಿಲ್ಲ ಅನ್ನೋದನ್ನು ಅರಿತಿರೋ ಆನ್ಮಲೈನ್ ಖದೀಮರು ಹೊಸ ಮಾರ್ಗಗಳನ್ನು ಕಂಡು ಕೊಳ್ತಿದಾರೆ. ಸಿಬಿಐ ಅಧಿಕಾರಿ ಅಂತಾ ಹೇಳ್ಕೊಂಡು ಆಪರೇಟ್ ಮಾಡೋ ಜಾಲ ಸದ್ಯ ಫುಲ್ ಆ್ಯಕ್ಟಿವ್ ಆಗಿದೆ. ಜನರ ಭಯವನ್ನು ಬಂಡವಾಳ ಮಾಡ್ಕೊಂಡು ಹಣ ಕೀಳುವ ಪ್ರಕರಣ ಇತ್ತೀಚೆಗೆ ಹೆಚ್ಚಾಗ್ತಿವೆ.
ಸಿಬಿಐ ಅಧಿಕಾರಿ ಹೆಸರಲ್ಲಿ ಮೋಸ ಯತ್ನ: ಸಿಬಿಐ ಅಧಿಕಾರಿ ಹೆಸರಲ್ಲಿ ಸಿದ್ದಪ್ಪ ಅನ್ನೋರಿಗೆ ಯಾಮಾರಿಸೋದಕ್ಕೆ ವಂಚಕರ ಟೀಮ್ ಮುಂದಾಗಿತ್ತು. ಗದಗ ಜಿಲ್ಲೆ ನರಗುಂದ ಮೂಲದ ಸಿದ್ದಪ್ಪ ಅನ್ನೋರಿಗೆ ಕಳೆದ ಕೆಲ ದಿನದ ಹಿಂದೆ ಸಿಬಿಐ ಅಧಿಕಾರಿ ಅಂತಾ ಹೇಳ್ಕೊಂಡು ಫೋನ್ ಬಂದಿತ್ತು. ನಿಮ್ಮ ಮೊಬೈಲಿನಿಂದ ಅಶ್ಲೀಲ ವಿಡಿಯೋ ಅಪ್ಲೋಡ್ ಆಗಿದೆ. ಹೀಗಾಗಿ ನೀವು ವಿಚಾರಣೆಗೆ ಕಚೇರಿಗೆ ಬರ್ಬೇಕಾಗುತ್ತೆ ಅಂತಾ ಹೇಳಿಕೊಂಡಿದ್ರು.
ತಬ್ಬಿಬ್ಬಾಗಿದ್ದ ಸಿದ್ದಪ್ಪ ಅಶ್ಲೀಲ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸಾಮಾನ್ಯ ಡ್ರೈವರ್, ನನಗೆ ವೀಡಿಯೋ ಬಗ್ಗೆ ಗೊತ್ತಿಲ್ಲ ಎಂದು ಸಿದ್ದಪ್ಪ ಹೇಳಿದ್ರು. ಆದರೆ ಅಧಿಕಾರಿಯ ಸೋಗಿನಲ್ಲಿ ಮಾತಾಡ್ತಿದ್ದ ಆನ್‌ಲೈನ್ ಖದೀಮ ಯೂಟ್ಯೂಬ್ ದೆಹಲಿ ಕಚೇರಿಯಿಂದ ಮಾಹಿತಿ ಬಂದಿದೆ. ಅವರ ಜೊತೆ ಮಾತನಾಡು ಎಂದು ಹೇಳಿ ಇನ್ನೊಂದು ನಂಬರ್ ಕೊಟ್ಟಿದ್ರು.
ಕೀ ಪ್ಯಾಡ್ ಮೊಬೈಲ್ ಯೂಸ್ ಮಾಡೋ ವ್ಯಕ್ತಿಗೆ ಬ್ಲ್ಯಾಕ್ ಮೇಲ್: ಸಿದ್ದಪ್ಪ ವೃತ್ತಿಯಿಂದ ಡ್ರೈವರ್ ಆಗಿದ್ದಾರೆ. ಸ್ಮಾರ್ಟ್‌ಫೋನ್ ಬಳಸೋದಕ್ಕೂ ಗೊತ್ತಿಲ್ಲ.ಬಳಕೆಗೆ ತಮ್ಮ ಬಳಿ ಸಣ್ಣದೊಂದು ಕೀ ಪ್ಯಾಡ್ ಮೊಬೈಲ್ ಇಟ್ಕೊಂಡಿದಾರೆ. ಆದ್ರೆ, ಜೂನ್ 25 ನೇ ತಾರೀಕು ಮಧ್ಯಾಹ್ನ, ಸಿಬಿಐ ಹೆಸರಲ್ಲಿ ವ್ಯಕ್ತಿಯೊಬ್ಬ ಫೋನ್ ಮಾಡಿದ್ದ. ನಿಮ್ಮ ಮೊಬೈಲ್ ನಿಂದ ಅಶ್ಲೀಲ ವೀಡಿಯೋ ಅಪ್ ಲೋಡ್ ಆಗ್ತಿದೆ, ವಿಚಾರಣೆಗೆ ಬನ್ನಿ ಅಂದಿದ್ದ. ನನ್ನ ಬಳಿ ಕೀ ಪ್ಯಾಡ್ ಫೋನ್ ಇದೆ ಅಂತಾ ಹೇಳ್ದಾಗ, ಯೂಟ್ಯೂಬ್ ದೆಹಲಿ ಕಚೇರಿಗೆ ಫೋನ್ ಮಾಡು ಅವ್ರು ಹೆಲ್ಪ್ ಮಾಡ್ಬಹುದು ಅಂತಾ ಹೊಸ ಕಥೆ ಕೊಟ್ಟಿದ್ದ.
ಇದನ್ನೂ ಓದಿ: 'ನಿಮ್ಮ ನಗ್ನ ಚಿತ್ರ ನನ್ನ ಬಳಿ ಇದೆ': ಸಿಬಿಐ ಹೆಸರಲ್ಲಿ ಮಹಿಳೆಗೆ ಬ್ಲ್ಯಾಕ್‌ಮೇಲ್
ಅಲ್ಲದೇ ತಮ್ಮದೇ ತಂಡದ ಮತ್ತೊಬ್ಬ ಖದೀಮನ ನಂಬರ್ ಕೊಟ್ಟು ಇದು ಯೂಟ್ಯೂಬ್ ನ ದೆಹಲಿ ಕಚೇರಿ ನಂಬರ್, ಫೋನ್ ಮಾಡಿ ವಿಚಾರಿಸು ಎಂದು ಹೇಳಿದ್ನಂತೆ. ಮೊದಲೇ ಗಾಬರಿಯಾಗಿದ್ದ ಸಿದ್ದು ಕರೆ ಮಾಡಿನನ್ನ ಕಡೆಯಿಂದ ವಿಡಿಯೋ ಅಪ್ ಲೋಡ ಆಗಿಲ್ಲ ಅಂತಾ ಹೇಳೋದಕ್ಕೆ ಮುಂದಾಗಿದ್ದ.
ಆದರೆ ಯೂಟ್ಯೂಬ್ ಕಚೇರಿಯ ಸಿಬ್ಬಂದಿ ಅಂತಾ ಹೇಳ್ಕೊಂಡು ಮಾತನಾಡಿದ ವ್ಯಕ್ತಿ, ನಿಮ್ಮ ನಂಬರ್ ನಿಂದ ವೀಡಿಯೋ ಅಪ್ ಲೋಡ್ ಆಗಿದೆ. ಸಿಸ್ಟಮ್ ನಲ್ಲಿ ತೋರಿಸ್ತಿದೆ. ಡಿಲೀಟ್ ಮಾಡೋದಕ್ಕೆ 50 ಸಾವಿರ ರೂಪಾಯಿ ಖರ್ಚು ಆಗುತ್ತೆ.. ಫೋನ್ ಪೇ ಮಾಡ್ಬಿಡಿ ಅಂದ್ದಿದ್ದಾರೆ. ದಿಕ್ಕು ತೋಚದಂತಾಗಿದ್ದ ಸಿದ್ದುಈ ವಿಷಯವನ್ನು ಸ್ನೇಹಿತರಿಗೆ ಹೇಳಿದ್ದಾರೆ. ಸ್ನೇಹಿತರ ಸಹಾಯದಿಂದ ವಿಷಯ ಪೊಲೀಸರಿಗೆ ತಿಳಿಸಲಾಗಿದೆ.
ಎಸಿಬಿ ಅಧಿಕಾರಿಗಳ ಹೆಸರಲ್ಲೂ ವಂಚನೆ ಯತ್ನ: ಭ್ರಷ್ಟಾಚಾರ ನಿಗ್ರಹದಳ(ACB) ಡಿವೈಎಸ್ ಪಿ ಎಮ್ ವಿ ಮಲ್ಲಾಪುರ ಹೆಸರಲ್ಲಿ ಫೋನ್ ಮಾಡಿ ರೋಣ ತಹಶೀಲ್ದಾರ್ ಸೇರಿದಂತೆ ಅನೇಕರಿಗೆ ಹಣದ ಬೇಡಿಕೆ ಇಟ್ಟಿದ್ದ ಪ್ರಕರಣ ಗದಗನಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪಾ ಕುಂಬಾರ (56), ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮುಗುಲಿ ಗ್ರಾಮದ ರಜನಿಕಾಂತ್ (46) ಎಂಬುವವರನ್ನ ಮೇ ತಿಂಗಳಲ್ಲಿ ಬಂಧಿಸಲಾಗಿತ್ತು. ಆರೋಪಿಗಳನ್ನ ಹಾಸನದಲ್ಲೇ ಎಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿದ್ದರು.
ಇದನ್ನೂ ಓದಿ: Online ವಂಚನೆ, Virtual ಜಗತ್ತಿನ ಬಣ್ಣದ ಮಾತಿಗೆ ಮರಳಾಗೋ ಮುನ್ನ ಇರಲಿ ಎಚ್ಚರ!
ಅಧಿಕಾರಿಗಳನ್ನ ಟಾರ್ಗೆಟ್ ಮಾಡಿ ಎಸಿಬಿ ದಾಳಿಯ ಭಯ ಹುಟ್ಟಿಸಿ ಈ ಇಬ್ಬರು ಖದೀಮರು ವಂಚನೆ ಮಾಡ್ರಿದ್ರು. ಎಸಿಬಿ ರೇಡ್ ತಪ್ಪಿಸೋದಕ್ಕೆ ಗೂಗಲ್ ಪೇ ಮೂಲಕ ಹಣ ಸೆಂಡ್ ಮಾಡಿ ಎಂದು ಬೆದರಿಸಿದ್ದರು .ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಫೇಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆನ್‌ಲೈನ್ ವ್ಯವಹಾರ ಮಾಡುವ ಮುನ್ನ ಎಚ್ಚರ: ಆನ್‌ಲೈನ್ ಪ್ರಕರಣಗಳಲ್ಲಿ ಅಮಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದ್ದು, ಫೇಸ್ ಬುಕ್ ಹ್ಯಾಕ್ ಮಾಡಿ ಹಣ ಕೀಳಲು ಪ್ರಯತ್ನಿಸುತ್ತಿದ್ದ ಖದೀಮರು ಸದ್ಯ ಡಿಫರೆಂಟ್ ಐಡಿಯಾದೊಂದಿಗೆ ವಂಚನೆ ಮಾಡೋದಕ್ಕೆ ಮುಂದಾಗಿದ್ದಾರೆ. ಹೀಗಾಗಿ ಹಣದ ವ್ಯವಹಾರ ಮಾಡುವ ಮುನ್ನ ಕುಟುಂಬ ಹಾಗೂ ಸ್ನೇಹಿತರ ಗಮನಕ್ಕೆ ತಂದು ಮುಂದುವರೆಯುವುದು ಒಳಿತು.