Asianet Suvarna News Asianet Suvarna News

Crime News: 'ನಿಮ್ಮ ನಗ್ನ ಚಿತ್ರ ನನ್ನ ಬಳಿ ಇದೆ': ಸಿಬಿಐ ಹೆಸರಲ್ಲಿ ಮಹಿಳೆಗೆ ಬ್ಲ್ಯಾಕ್‌ಮೇಲ್

ಸೈಬರ್ ದರೋಡೆಕೋರರು ಜನರನ್ನು ವಂಚಿಸಲು ಹೊಸ ಮಾರ್ಗವೊಂದನ್ನು ಕಂಡುಹಿಡಿದ್ದಾರೆ. ಈಗ ಸಿಬಿಐ ಹೆಸರಿನಲ್ಲಿ ಕಳ್ಳರು ವಂಚನೆ ಮಾಡುತ್ತಿದ್ದಾರೆ. ಜನರಿಗೆ ಕರೆ ಮಾಡಿ ನಾನು ಸಿಬಿಐಯಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದು, ನನ್ನ ಬಳಿ ನಿಮ್ಮ ಬೆತ್ತಲೆ ಫೋಟೋ ಇದೆ ಎಂದು ಹೇಳಿದ್ದಾರೆ.  ಇದಾದ ನಂತರ ಬ್ಲಾಕ್ ಮೇಲ್ ಮಾಡುವ ಆಟ ಶುರುವಾಗಿದೆ. 

Uttar Pradesh Women asked to send nude photo in the name of cbi mnj
Author
Bengaluru, First Published Jun 23, 2022, 5:05 PM IST

ಉತ್ತರಪ್ರದೇಶ (ಜೂ. 23): "ಹಲೋ ನಾನು ಸಿಬಿಐಯಿಂದ ಮಾತನಾಡುತ್ತಿದ್ದೇನೆ, ನಿಮ್ಮ ನಗ್ನ ಚಿತ್ರ ನನ್ನ ಬಳಿ ಇದೆ. ನೀವು ಎಲ್ಲಿ ಅನೈತಿಕ ಕೃತ್ಯಗಳಲ್ಲಿ ತೊಡಗಿದ್ದೀರಿ?" ಎಂದು ಉತ್ತರಪ್ರದೇಶ ಯುವತಿಗೆ ಕರೆಯೊಂದು ಬಂದಿತ್ತು. ಆದರೆ ಆ ಫೋಟೋ ತನ್ನದಾಗಲು ಸಾಧ್ಯವೇ ಇಲ್ಲ ಎಂದು ಯುವತಿ ಉತ್ತರಿಸಿದ್ದಳು. ಆದರೆ ಇಷ್ಟಕ್ಕೆ ಸುಮ್ಮನಾಗದ ವಂಚಕರು ಯುವತಿಗೆ ಬೆದರಿಕೆ ಹಾಕಿದ್ದು ಮತ್ತು ಆಕೆಯ ನಗ್ನ ಫೋಟೋವನ್ನು ಕಳುಹಿಸುವಂತೆ ತಿಳಿಸಿದ್ದಾರೆ. 

ಫೋಟೋ ಮ್ಯಾಚ್ ಮಾಡಿದ ನಂತರ ಅದು ಯಾರ ಫೋಟೋ ಎಂಬುದು ಗೊತ್ತಾಗುತ್ತದೆ ಎಂದ ವಂಚಕರು ಫೋಟೋಗಾಗಿ ಬೇಡಿಕೆ  ಇಟ್ಟಿದ್ದಾರೆ. ಇದನ್ನು ನಂಬಿದ ಯುವತಿ ತನ್ನ ಫೋಟೋವನ್ನು ಕಳುಹಿಸಿದ್ದಾಳೆ. ಕರೆ ಮಾಡಿದವರು ಯುವತಿ ಕಳುಹಿಸಿದ ಫೋಟೋವನ್ನೇ ಬಳಸಿ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾರೆ. 

ಜನರನ್ನು ವಂಚಿಸಲು ಹೊಸ ಮಾರ್ಗ: ಈ ಘಟನೆ 15 ದಿನಗಳ ಹಿಂದೆ ನಡೆದಿದ್ದು, ಈ ವಂಚಕ ನಗರದ ತಾರಾಲಯ ಪ್ರದೇಶದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಿಂದ ಸಿಬಿಐ ಹೆಸರಿನಲ್ಲಿ ಆಕೆಯ ನಗ್ನ ಚಿತ್ರ ಪಡೆದು ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹದಿನೈದು ದಿನಗಳ ಹಿಂದೆ ಈ ವಿಷಯ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ತನಿಖೆಯ ವೇಳೆ ಆರೋಪಿ ಪ್ರಯಾಗ್‌ರಾಜ್‌ ಪ್ರದೇಶದವನು ಎಂದು ತಿಳಿದುಬಂದಿದೆ.

ಇದನ್ನೂ ಓದಿ12 ವರ್ಷದ ಮಗಳಿಗೆ ಎರಡೆರಡು ಬಾರಿ ಮದ್ವೆ: ತಾಯಿಯ ಬಂಧನ

ಆರೋಪಿ ಸ್ವಲ್ಪ ಸೈಕೋ ಮೈಂಡೆಡ್‌ ಎಂದು ಸೈಬರ್ ಪೊಲೀಸ್ ತಂಡ ತಿಳಿಸಿದೆ. ಈ ಹಿಂದೆಯೂ ಫೋರ್ಜರಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಆರೋಪಿಯನ್ನು ಸೈಬರ್ ಠಾಣೆಯ ತಂಡ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿತ್ತು. ಈಗ ಗೋರಖ್‌ಪುರ ಜಿಲ್ಲೆಯಲ್ಲಿ ಸಿಬಿಐ ಅಧಿಕಾರಿ ಸೊಘಲ್ಲಿ ನಡೆದ ಮೊದಲ ಆನ್‌ಲೈನ್ ವಂಚನೆ ಇದಾಗಿದೆ.

ಇಪಿಎಫ್ ಅಧಿಕಾರಿ ಸೋಗಲ್ಲಿ 1.09 ಲಕ್ಷ ರೂ ವಂಚನೆ: ಇನ್ನು ನಗರದ ಮತ್ತೋರ್ವ ಮಹಿಳೆ ಇಪಿಎಫ್ ಅಧಿಕಾರಿಯ ಹೆಸರಲ್ಲಿ 1.09 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ. ವಂಚಕನು ಇಪಿಎಫ್ ಅಧಿಕಾರಿಯಂತೆ ನಟಿಸಿ ಮಹಿಳೆಯ ಖಾತೆಯಿಂದ 1.09 ಲಕ್ಷ ರೂ ಪಡೆದಿದ್ದಾನೆ. ವಂಚಕ ಮಹಿಳೆಯ ಮೊಬೈಲ್‌ಗೆ ಕಳುಹಿಸಿದ ಒಟಿಪಿ ಪಡೆದು ಆಕೆಯ ಖಾತೆಗೆ 1.09 ಲಕ್ಷ ರೂ. ಮಹಿಳೆಯ ದೂರಿನ ಮೇರೆಗೆ ಸೈಬರ್ ಠಾಣೆಯ ತಂಡವು ಪ್ರಕರಣದ ತನಿಖೆಯಲ್ಲಿ ತೊಡಗಿದೆ.

ಸೈಬರ್‌ ವಂಚನೆ ತಡೆಗಟ್ಟುವುದು ಹೇಗೆ?   

  • ಯಾವುದೇ ಅಪರಿಸಚಿತರಿಂದ ಕರೆ ಸ್ವೀಕರಿಸಿ, ಯಾವುದೇ ವೈಯುಕ್ತಿಕ ಮಾಹಿ ನೀಡಬೇಡಿ 
  • ಟ್ರೂಕಾಲರ್ ಸಂಖ್ಯೆಗಳನ್ನು ಅವಲಂಬಿಸಬೇಡಿ. ಸಿಬಿಐ ಅಧಿಕಾರಿ ಅಥವಾ ಇನ್ಯಾವುದೋ ಹೆಸರಿನೊಂದಿಗೆ ಟ್ರೂಕಾಲರ್‌ನಲ್ಲಿ ಯಾರೊಬ್ಬರ ಸಂಖ್ಯೆ ಬಂದರೆ, ಅದನ್ನು ನಂಬುವ ಅಗತ್ಯವಿಲ್ಲ.
  • ನಿಮ್ಮ ಬಳಿ ನಗ್ನ ಫೋಟೋ ಇದೆ ಎಂದು ಯಾರಾದರೂ ಹೇಳಿದರೆ ಅದನ್ನು ನಂಬಬೇಡಿ.
  • ಕರೆ ಮಾಡಿದವರಿಗೆ ಭಯಪಡುವ ಅಗತ್ಯವಿಲ್ಲ, ಕರೆ ಮಾಡಿದವರ ಬಗ್ಗೆ ಯಾವುದೇ ಸಂದೇಹವಿದ್ದರೂ ತಕ್ಷಣ ಸೈಬರ್‌ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ. 
  • ನಿಮ್ಮ ಬಳಿ ನಗ್ನ ಫೋಟೋ ಇದೆ ಎಂದು ಯಾರಾದರೂ ಹೇಳಿದರೆ, ತಕ್ಷಣ ನಿಮ್ಮ ಕುಟುಂಬ ಸದಸ್ಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿ.
  • ಸೈಬರ್ ಸೇಫ್ ಪೋರ್ಟಲ್ ಮೂಲಕ ಕರೆ ಮಾಡುವವರ ಸಂಖ್ಯೆಯನ್ನು ಪರಿಶೀಲಿಸಿ. ಅದನ್ನು ಪರಿಶೀಲಿಸಿದಾಗ, ನಂಬರ್ ವಂಚನೆಯದ್ದೋ ಅಥವಾ ನಿಜವಾದ ವ್ಯಕ್ತಿಯದ್ದೋ ಎಂದು ತಿಳಿಯುತ್ತದೆ.
  • ಅಂತಹ ಘಟನೆಗಳನ್ನು ತಕ್ಷಣವೇ 112 ಕರೆ ಮಾಡಿ ವರದಿ ಮಾಡಿ.
Follow Us:
Download App:
  • android
  • ios