Asianet Suvarna News Asianet Suvarna News

ಆನ್ ಲೈನ್ ವಂಚನೆಯಾಗಿದ್ದರೆ ಡೋಂಟ್‌ ವರಿ; Golden hourನಲ್ಲಿ ತಪ್ಪದೆ ಹೀಗೆ ಮಾಡಿ

ಆನ್ ಲೈನ್ ವಂಚನೆ ಪ್ರಕರಣಗಳಲ್ಲಿ ಈ ತಕ್ಷಣದ ದೂರು ದಾಖಲಾತಿಯನ್ನು ಗೋಲ್ಡನ್ ಅವರ್(Golden hour) ಎಂದು ಪರಿಗಣಿಸಲಾಗುತ್ತೆ. ಸಕಾಲದಲ್ಲಿ ದಾಖಲಾದ ದೂರಿನ ಬೆನ್ನು ಹತ್ತಿದ ಉಡುಪಿಯ ಸೈಬರ್ ಕ್ರೈಂ(Cyber Crime) ಪೊಲೀಸರು, ಮಹಾರಾಷ್ಟ್ರ(Maharashtra) ಮತ್ತು ಗುಜರಾತ್(Gujarath) ನಲ್ಲಿ ಕಾರ್ಯಾಚರಣೆ ನಡೆಸಿ ವಂಚಕ ಜಾಲದ ಹೆಡೆಮುರಿ ಕಟ್ಟಿದ್ದಾರೆ. ಮೂವರನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ. 

Cyber crime Here is what to do if an online fraud udupi ravjkl
Author
First Published Sep 17, 2022, 12:16 PM IST

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.17) : ನಿಮಗೆ ಆನ್ ಲೈನ್ ವಂಚನೆಯಾಗಿದೆಯೇ? ಕಳೆದುಕೊಂಡ ಹಣ ಇನ್ನು ಕೈ ಸೇರೋದೇ ಇಲ್ಲ ಎಂದು ಆಸೆ ಬಿಟ್ಟಿದ್ದೀರಾ? ಡೋಂಟ್ ವರಿ, ಆನ್ ಲೈನ್  ವಂಚಕರಿಗೂ ಪಾಠ ಕಲಿಸುವ ಕಾಲ ಬಂದಿದೆ. ಆ ಒಂದು ಗೋಲ್ಡನ್ ಅವರ್ ಒಳಗೆ, ನೀವು ದೂರು ಕೊಟ್ಟರೆ ಸಾಕು. ನೀವು ಕಳೆದುಕೊಂಡ ಹಣವನ್ನು ಪೊಲೀಸರು ಮತ್ತೆ ಒದಗಿಸಿಕೊಡುತ್ತಾರೆ.

Udupi; ಗಾಯಾಳುವನ್ನು ಏರ್ ಲಿಫ್ಟ್ ಮಾಡಲು ಸಹಾಯ ಕೇಳಿ 3 ಲಕ್ಷ ವಂಚನೆ

ದಿನ ಬೆಳಗಾದರೆ ಆನ್ಲೈನ್ ವಂಚನೆ(Online fraud)ಯ ನಾನಾ ಅವತಾರಗಳನ್ನು ಕಾಣುತ್ತೇವೆ. ಓಟಿಪಿ(OTP)ಗೆ ಬೇಡಿಕೆ, ಸಹಾಯ ಯಾಚನೆ, ಅಕೌಂಟ್ ಫ್ರೀಜ್ ಮಾಡುವ ಬೆದರಿಕೆ... ಹೀಗೆ ನಾನಾ ನೆಪಗಳನ್ನು ಒಡ್ಡಿ ನಾಗರಿಕರಿಂದ ಹಣ ದೋಚುವ ಪ್ರಕರಣಗಳು ಪ್ರತಿದಿನ ವರದಿಯಾಗುತ್ತದೆ. ಡಿಜಿಟಲ್ ಇಂಡಿಯಾ(Digital India) ಮುಂದಿರುವ ಬಹಳ ದೊಡ್ಡ ಸವಾಲು ಎದುರಿಸಲು ಪೊಲೀಸ್ ಇಲಾಖೆ(Department of Police ) ಸಿದ್ದವಾಗಿದೆ. 

ಉಡುಪಿ(Udupi)ಯಲ್ಲಿ ನಡೆದ ಆನ್ಲೈನ್ ವಂಚನೆ ಪ್ರಕರಣದಲ್ಲಿ, ಆರೋಪಿಗಳ ಬಂಧನ ಸಹಿತ ವಂಚನೆಯಾದ ಹಣವನ್ನು ಸಂತ್ರಸ್ತರಿಗೆ ಮರಳಿಸಲಾಗಿದೆ.ಉಡುಪಿ ಜಿಲ್ಲೆಯ ಮಂದಾರ್ತಿ(Mandarti) ಮೂಲದ ಉದ್ಯಮಿಯೊಬ್ಬರು ಯುರೋಬಾಂಡ್ ಕಂಪನಿಯ ಡೀಲರ್ ಆಗಿದ್ದಾರೆ. ಇದೇ ಕಂಪನಿಯ ಮಾಲೀಕನ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ಮಗನಿಗೆ ಅಪಘಾತವಾಗಿದೆ, ತಕ್ಷಣ ಏರ್‌ಲಿಫ್ಟ್ ಮಾಡಿ ಮಂಗಳೂರಿನ ಎ.ಜೆ.ಆಸ್ಪತ್ರೆ(A.J.Hospital)ಗೆ ದಾಖಲಿಸಬೇಕು. ನಾನು ಮಂಗಳೂರಿಗೆ ಬರುತ್ತೇನೆ ನನ್ನ ಬಳಿ 12 ಲಕ್ಷ ನಗದು ಇದೆ, Airlift ಮಾಡೋದಕ್ಕೆ ತಕ್ಷಣ 3 ಲಕ್ಷ ರೂಪಾಯಿ ನನ್ನ ಖಾತೆಗೆ ವರ್ಗಾಯಿಸಿ ಎಂದು ಒತ್ತಾಯಿಸಿದ್ದಾನೆ. 

ಮಾನವೀಯ ನೆಲೆಯಲ್ಲಿ ಒಪ್ಪಿದ ಉದ್ಯಮಿ ಪ್ರಮೋದ್(Pramod), ತನ್ನ ಖಾತೆಯಿಂದ 50,000, ಮತ್ತು ವಿವಿಧ ಸ್ನೇಹಿತರ ಖಾತೆಯಿಂದ ಎರಡೂವರೆ ಲಕ್ಷ ರೂಪಾಯಿ ಸಂಗ್ರಹಿಸಿ ಹಣ ವರ್ಗಾಯಿಸಿದ್ದಾರೆ. ನಂತರ ಮಂಗಳೂರಿಗೆ ತೆರಳಿ ಎಜೆ ಆಸ್ಪತ್ರೆ ಆವರಣದಲ್ಲಿ ಎಷ್ಟು ಹೊತ್ತು ಕಾದರೂ, ಯುರೋ ಬಾಂಡ್ ಕಂಪನಿಯ ಮಾಲೀಕ ಎಂದು ಹೇಳಿಕೊಂಡ ವ್ಯಕ್ತಿ ಬರಲೇ ಇಲ್ಲ. ತಮಗೆ ವಂಚನೆಯಾಗಿರೋದು, ಗೊತ್ತಾಗುತ್ತಿದ್ದಂತೆ ಉದ್ಯಮಿ ಪ್ರಮೋದ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಆನ್ ಲೈನ್ ವಂಚನೆ ಪ್ರಕರಣಗಳಲ್ಲಿ ಈ ತಕ್ಷಣದ ದೂರು ದಾಖಲಾತಿಯನ್ನು ಗೋಲ್ಡನ್ ಅವರ್(Golden hour) ಎಂದು ಪರಿಗಣಿಸಲಾಗುತ್ತೆ. ಸಕಾಲದಲ್ಲಿ ದಾಖಲಾದ ದೂರಿನ ಬೆನ್ನು ಹತ್ತಿದ ಉಡುಪಿಯ ಸೈಬರ್ ಕ್ರೈಂ(Cyber Crime) ಪೊಲೀಸರು, ಮಹಾರಾಷ್ಟ್ರ(Maharashtra) ಮತ್ತು ಗುಜರಾತ್(Gujarath) ನಲ್ಲಿ ಕಾರ್ಯಾಚರಣೆ ನಡೆಸಿ ವಂಚಕ ಜಾಲದ ಹೆಡೆಮುರಿ ಕಟ್ಟಿದ್ದಾರೆ. ಮೂವರನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ. 

ಯಾರಿಗೇ ಆಗಲಿ ಆನ್ಲೈನ್ ಮೂಲಕ ವಂಚನೆ ಆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರದಿಂದ ವ್ಯವಸ್ಥೆಗೊಂಡಿರುವ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್(National Cyber ​​Crime Reporting Portal) ಗೆ ಈ ಮಾಹಿತಿ ಸಿಕ್ಕರೆ, ಕೂಡಲೇ ಗ್ರಾಹಕ ಹಾಗೂ ಹಣ ವರ್ಗಾವಣೆಗೊಂಡ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಇದರಿಂದ, ವಂಚಕರನ್ನು ನಂಬಿ ಹಣ ಹಾಕಿದವರು ಮೋಸ ಹೋಗುವುದು ತಪ್ಪುತ್ತದೆ.

18ರ ಪೋರನಿಂದ Uber ಡೇಟಾ ಹ್ಯಾಕ್, ಜೋಕ್ ಎಂದು ಸುಮ್ಮನಿದ್ದ ಉದ್ಯೋಗಿಗಳಿಗೆ ಶಾಕ್!

ಗೋಲ್ಡನ್ ಅವರ್ ನಲ್ಲಿ ದೂರು ದಾಖಲಿಸಿದ ಉಡುಪಿಯ ಉದ್ಯಮಿ ಪ್ರಮೋದ್, ಸದ್ಯ ಫುಲ್ ಖುಷ್ ಆಗಿದ್ದಾರೆ. ಇವರು ವರ್ಗಾಯಿಸಿದ 50,000 ಹಣವನ್ನು ಅಕೌಂಟ್ ಫ್ರೀಜ್ ಮಾಡಿರುವ ಕಾರಣ ನ್ಯಾಯಾಲಯದ ಮೂಲಕ ಪಡೆಯಲಿದ್ದಾರೆ. ಸ್ನೇಹಿತರಿಂದ ಆನ್ಲೈನ್ ಮೂಲಕ ವರ್ಗಾಯಿಸಿದ್ದ ಎರಡೂವರೆ ಲಕ್ಷ ಹಣವನ್ನು, ಆರೋಪಿಗಳಿಂದ ಪೀಕಿಸಿ ಪೊಲೀಸರು ಮರಳಿಸಿದ್ದಾರೆ. ಸದ್ಯ ಮೂವರನ್ನು ವಶಕ್ಕೆ ಪಡೆದಿರುವ ಉಡುಪಿ ಪೊಲೀಸರು, ಜಾಲದ ಬೆನ್ನು ಹತ್ತಿದ್ದಾರೆ.

Follow Us:
Download App:
  • android
  • ios