ಸೈಬರ್‌ ಕ್ರೈಂ, ಮಾದಕ ವಸ್ತು ದುಷ್ಪರಿಣಾಮ ಜಾಗೃತಿ: ಕೆ.ಪಿ. ದೀಕ್ಷಿತ್‌

ಮಕ್ಕಳಲ್ಲಿ ಸ್ಮಾರ್ಟ್ ಫೋನ್‌ ಬಳಕೆಯಿಂದ ಸೈಬರ್‌ ಕ್ರೈಂ  ಹೆಚ್ಚಾಗುತ್ತಿರುವ ಬಗ್ಗೆ ಪಾಲಕರು ಗಮನ ಹರಿಸಬೇಕಿದೆ ಎಂದು  ಕೆ.ಪಿ. ದೀಕ್ಷಿತ್‌ ಸಲಹೆ ನೀಡಿದರು

 

 

Cyber crime and drug abuse awarenes says kp disksheethrav

ಗೋಣಿಕೊಪ್ಪ ಜು.25: ವಿದ್ಯಾರ್ಥಿಗಳಲ್ಲಿ ಸೈಬರ್‌ ಕ್ರೈಂ, ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುವುದು ಎಂದು ಗೋಣಿಕೊಪ್ಪ ಪೊಲೀಸ್‌ ಉಪ ನಿರೀಕ್ಷಕ ಕೆ.ಪಿ. ದೀಕ್ಷಿತ್‌ ತಿಳಿಸಿದರು. ನೂತನವಾಗಿ ಕರ್ತವ್ಯ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಕೂನ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಜನಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಸ್ಮಾರ್ಚ್‌ಫೋನ್‌(Smart phone) ಬಳಕೆಯಿಂದ ಸೈಬರ್‌ ಕ್ರೈಂ(Cyber crime) ಹೆಚ್ಚಾಗುತ್ತಿರುವ ಬಗ್ಗೆ ಪಾಲಕರು ಗಮನ ಹರಿಸಬೇಕಿದೆ. ಬ್ಯಾಂಕ್‌ ಖಾತೆಗೆ ಕನ್ನ(Bank account) ಹಾಕುವವವರು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಿಯಂತ್ರಿಸಲು ಹೆಚ್ಚು ಜಾಗೃತಿ ಮೂಡಿಸಲಾಗುವುದು. ವಿದ್ಯಾರ್ಥಿಗಳು(Students) ಮಾದಕ ವಸ್ತು ಸೇವನೆ ಚಟಕ್ಕೆ ಒಳಗಾಗುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಸೇವನೆ ಮಾಡುವವರ ಮೇಲೆ ಕೇಸ್‌ ಹಾಕಲು ಇರುವ ಕಾನೂನು ಪಾಲನೆಗೂ ಮುಂದಾಗುವುದಾಗಿ ತಿಳಿಸಿದರು.

ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ನೀಗಿಸಲು ನಮ್ಮ ಸಿಬ್ಬಂದಿ ಪ್ರಯತ್ನ ಪಡುತ್ತಿದ್ದಾರೆ. ವಾಹನ ದಟ್ಟಣೆ ಇರುವ ಕಡೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು. ಜನರ ಸ್ಪಂದನೆ ಕೂಡ ಉತ್ತಮವಾಗಿರುವುದರಿಂದ ಇಲಾಖೆಗೆ ಪ್ರೋತ್ಸಾಹ ಸಿಗುತ್ತಿದೆ. ಲಯನ್ಸ್‌ ಶಾಲೆ, ಕಾವೇರಿ ಕಾಲೇಜು ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್‌ ಅಳವಡಿಸುವುದು, ಚೀತಾ ದ್ವಿಚಕ್ರ ವಾಹನದ ಮೂಲಕ ಸಿಬ್ಬಂದಿ ನಿಯೋಜಿಸಿ ಅತಿ ವೇಗದ ವಾಹನ, ಸವಾರರ ಮೇಲೆ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

Online Fraud; ಆನ್​ಲೈನ್​ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!

ಗ್ರಾಮ ಮಟ್ಟದಲ್ಲಿ ಕೋವಿ ನೋಂದಣಿ ಅಭಿಯಾನ ನಡೆಸಲಾಗುವುದು. ಇದರಿಂದ ಹಿರಿಯರು ಠಾಣೆಗೆ ಬರುವುದು ತಪ್ಪುತ್ತದೆ. ಪಾಸ್‌ಪೋರ್ಚ್‌ ಪÜರಿಶೀಲನೆಯನ್ನು ಆದಷ್ಟುಖುದ್ದು ಮನೆಗೆ ತೆರಳಿ ಪರಿಶೀಲಿಸಿ ನೀಡುವ ನಿಯಮವನ್ನು ಪ್ರಾಯೋಗಿಕವಾಗಿ ನಡೆಸಲಾಗುವುದು ಎಂದು ಕೆ.ಪಿ. ದೀಕ್ಷಿತ್‌ ಅವರು ತಿಳಿಸಿದರು.

ಟ್ರಾಫಿಕ್‌ ಸಮಸ್ಯೆ ನೀಗಿಸಲು ಪತ್ರಕರ್ತರು ಒಂದಷ್ಟುಸಲಹೆ ನೀಡಿದರು. ಪಾಲಿಬೆಟ್ಟರಸ್ತೆ ಜಂಕ್ಷನ್‌ನಲ್ಲಿ ಸಿಬ್ಬಂದಿ ನಿಯೋಜಿಸುವುದು, ಪೊನ್ನಂಪೇಟೆ ರಸ್ತೆ ಜಂಕ್ಷನ್‌ ಪೆಟ್ರೋಲ್‌ ಬಂಕ್‌ ಎದುರು ಬಸ್‌ ನಿಲುಗಡೆಗೆ ಅವಕಾಶ ಮಾಡಿಕೊಡುವುದು, ಉಮಾಮಹೇಶ್ವರಿ ದೇವಸ್ಥಾನ ಸಮೀಪವಿರುವ ಗ್ಯಾರೇಜ್‌ ಸಿಬ್ಬಂದಿ ರಸ್ತೆಯಲ್ಲಿಯೇ ವಾಹನ ದುರಸ್ತಿ ಮಾಡುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ, ಬಸ್‌ ನಿಲ್ದಾಣ ಸಮೀಪ ಮೈಸೂರು- ಬೆಂಗಳೂರು ಮಾರ್ಗಕ್ಕೆ ತೆರಳುವ ಸರ್ಕಾರಿ ಸಾರಿಗೆ ಬಸ್‌ಗಳನ್ನು ಮತ್ತಷ್ಟುಮುಂದೆ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಅಪಘಾತ, ಕಳ್ಳತನ ಮಾಡುವವರುನ್ನು ಸೆರೆ ಹಿಡಿಯಲು ಕಡ್ಡಾಯವಾಗಿ ಮಳಿಗೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮಕೈಗೊಳ್ಳುವುದು, ಕರ್ಕಶ ಹಾರ್ನ್‌ ಶಬ್ದವಿರುವ ವಾಹನಗಳ ನಿಯಂತ್ರಣ, ಆಟೋ-ಬಾಡಿಗೆ ವಾಹನಗಳಲ್ಲಿ ಕಡ್ಡಾಯವಾಗಿ ಇನ್ಶುರೆನ್ಸ್‌, ದಾಖಲಾತಿ ಪರಿಶೀಲನೆ, ವೇಗದ ಲಾರಿಗಳಿಗೆ ಕಡಿವಾಣಕ್ಕೆ ಕ್ರಮಕೈಗೊಳ್ಳಬೇಕು ಎಂಬ ಸಲಹೆಗಳು ಕೇಳಿ ಬಂದವು.

Cyber Fraud: ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ಸ್‌ ಸರ್ಚ್ ಮಾಡ್ತೀರಾ? ಹಾಗಿದ್ರೆ ಹುಷಾರ್!

ಸಂಘಧ ಅಧ್ಯಕ್ಷ ಸಣ್ಣುವಂಡ ಕಿಶೋರ್‌ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್‌.ಎನ್‌. ದಿನೇಶ್‌, ಉಪಾಧ್ಯಕ್ಷ ಮಚ್ಚಮಾಡ ಅನೀಶ್‌ ಮಾದಪ್ಪ, ಖಜಾಂಚಿ ವಿ.ವಿ. ಅರುಣ್‌ ಕುಮಾರ್‌, ಕಾರ್ಯದರ್ಶಿ ಮಂಡೇಡ ಅಶೋಕ್‌, ನಿರ್ದೇಶಕರಾದ ಚಿಮ್ಮಣಮಾಡ ದರ್ಶನ್‌ ದೇವಯ್ಯ, ಎಂ.ಎಂ. ಚನ್ನನಾಯಕ, ಎಚ್‌.ಆರ್‌. ಸತೀಶ್‌, ಸದಸ್ಯರಾದ ಎಚ್‌.ಕೆ. ಜಗದೀಶ್‌, ಡಿ. ನಾಗೇಶ್‌ ಇದ್ದರು.

Latest Videos
Follow Us:
Download App:
  • android
  • ios