ತಪ್ಪಾದ ಹೆಸರಿನೊಂದಿಗೆ 5,000 ರೂ. ಚೆಕ್ ಡೆಪಾಸಿಟ್ ಮಾಡಿ, 1 ಲಕ್ಷ ಕಳೆದುಕೊಂಡ ಮಹಿಳೆ!

ಖಾಸಗಿ ಬ್ಯಾಂಕ್ ನಲ್ಲಿ 5,000 ರೂಪಾಯಿ ಚೆಕ್ ಡೆಪಾಸಿಟ್ ಮಾಡಿದ 36 ವರ್ಷದ ಮಹಿಳೆಯೊಬ್ಬರು ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ . ಚೆಕ್ ನ್ನು ಮಾನ್ಯ ಮಾಡದಿದ್ದಾಗ  ಮಹಿಳೆ ಬ್ಯಾಂಕ್ ಸಂಪರ್ಕಿಸಿದ್ದು, ಚೆಕ್ ನಲ್ಲಿ ತನ್ನ ಹೆಸರನ್ನು ತಪ್ಪಾಗಿ ಬರೆದಿದ್ದರಿಂದ ಅವರ ವಿಳಾಸಕ್ಕೆ ಕೊರಿಯರ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Cyber crime 5000 with wrong name Deposit the cheque, the woman lost 1 lakh at Bengaluru rav

ಬೆಂಗಳೂರು (ಜ.12): ಖಾಸಗಿ ಬ್ಯಾಂಕ್ ನಲ್ಲಿ 5,000 ರೂಪಾಯಿ ಚೆಕ್ ಡೆಪಾಸಿಟ್ ಮಾಡಿದ 36 ವರ್ಷದ ಮಹಿಳೆಯೊಬ್ಬರು ಒಂದು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ .

ಚೆಕ್ ನ್ನು ಮಾನ್ಯ ಮಾಡದಿದ್ದಾಗ  ಮಹಿಳೆ ಬ್ಯಾಂಕ್ ಸಂಪರ್ಕಿಸಿದ್ದು, ಚೆಕ್ ನಲ್ಲಿ ತನ್ನ ಹೆಸರನ್ನು ತಪ್ಪಾಗಿ ಬರೆದಿದ್ದರಿಂದ ಅವರ ವಿಳಾಸಕ್ಕೆ ಕೊರಿಯರ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಂತರ ಕೊರಿಯರ್ ಪತ್ತೆಗಾಗಿ ಇಂಟರ್ ನೆಟ್ ನಲ್ಲಿ ಹುಡುಕಾಡಿದ್ದು, ಕೊರಿಯರ್ ಕಂಪನಿಯ ನಕಲಿ ನಂಬರ್ ಸಿಕ್ಕಿದೆ. ಆ ನಂಬರ್ ಗೆ ಕರೆ ಮಾಡಿದ ನಂತರ ಸೈಬರ್ ವಂಚಕರ ಸೂಚನೆಗಳಂತೆ ಆಕೆ 1 ಲಕ್ಷ ರೂ. ಕಳೆದುಕೊಂಡಿದ್ದಾರೆ. 

ಹೊಂಗಸಂದ್ರ ಮುಖ್ಯರಸ್ತೆ ನಿವಾಸಿ ಎಂ.ಎಸ್.ಸ್ಮಿತಾ ಹಣ ಕಳೆದುಕೊಂಡವರು. ಜನವರಿ 5 ಮತ್ತು 6 ರ ನಡುವೆ ಘಟನೆ ನಡೆದಿದ್ದು, ಈ ಸಂಬಂಧ ಸೋಮವಾರ ಬೇಗೂರು ಪೊಲೀಸರಿಗೆ ದೂರು ನೀಡಲಾಗಿದೆ. ಸ್ಮಿತಾ  ಉಳಿತಾಯ ಖಾತೆ ಹೊಂದಿರುವ ಖಾಸಗಿ ಬ್ಯಾಂಕ್‌ನಲ್ಲಿ ಜನವರಿ 3 ರಂದು ಚೆಕ್  ಜಮಾ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬೇರೊಬ್ಬ ವ್ಯಕ್ತಿಗೆ ನೀಡಿದ ಚೆಕ್‌ನಲ್ಲಿ ತನ್ನ ಹೆಸರು ತಪ್ಪಾಗಿ ಬರೆದಿರುವುದು ಆಕೆಯ ಗಮನಕ್ಕೆ ಬಂದಿರಲಿಲ್ಲ.

 

ಸೈಬರ್ ವಂಚನೆ ತಡೆಗೆ ಕಠಿಣ ಕ್ರಮ; 4 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ1000 ಕೋಟಿ ರೂ.ವಾಪಸ್

ಹೆಸರಿನಲ್ಲಿರುವ ತಪ್ಪಿನಿಂದಾಗಿ ಬ್ಯಾಂಕ್ ಆಕೆಯ ವಿಳಾಸಕ್ಕೆ ಚೆಕ್ ಅನ್ನು ಕೊರಿಯರ್ ಮಾಡಿದೆ. ಕೊರಿಯರ್ ಗಾಗಿ ಇಂಟರ್ ನೆಟ್ ನಲ್ಲಿ ಹುಡುಕಾಡಿದಾಗ ಕಸ್ಟಮರ್ ಕೇರ್ ಸಂಖ್ಯೆ ಎಂದು ಹೇಳುವ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ನಂಬರ್ ನಿಜವಾದ ಕಂಪನಿಯಂತೆ ನಟಿಸಿ ಮೋಸ ಮಾಡಲಾಗಿದೆ. ಆ ನಂಬರ್‌ಗೆ ಕರೆ ಮಾಡಿದಾಗ ಆಕೆಯ ಖಾತೆಯಿಂದ ಎರಡು ರೂಪಾಯಿ ಡೆಬಿಟ್ ಆಗಿದೆ. ಇದನ್ನು ಮಹಿಳೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. 

ಆರಂಭದಲ್ಲಿ  ಅವರ ಖಾತೆಯಿಂದ ಎರಡು ರೂ. ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಮರುದಿನ ನೆಟ್ ಬ್ಯಾಂಕಿಂಗ್ ಪರಿಶೀಲಿಸಿದಾಗ ಖಾತೆಯಿಂದ ಒಂದು ಲಕ್ಷ ರೂಪಾಯಿ ಡೆಬಿಟ್ ಆಗಿರುವುದು ಗೊತ್ತಾಗಿದೆ. ಕೂಡಲೇ ಆ ನಂಬರ್ ಗೆ ಡಯಲ್ ಮಾಡಿದಾಗ ಅದೇ ಅಸಲಿ ನಂಬರ್ ಎಂಬುದಾಗಿ ಖಚಿತಪಡಿಸಲಾಯಿತು. ಹಿಂದಿಯಲ್ಲಿ ಮಾತನಾಡಿದ ವಂಚಕ ಯಾವುದೇ ಅನುಮಾನ ಬಾರದಂತೆ ವ್ಯವಹರಿಸಿದ ಎಂದು ಎಂದು ಸ್ಮಿತಾ TNIE ಗೆ ತಿಳಿಸಿದರು.

 

ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೋನ್: ಬ್ಯಾಂಕ್‌ಗಳಿಗೆ ಉಂಡೇನಾಮ ತಿಕ್ಕಿದ್ದ ಕಳ್ಳ ಕೃಷ್ಣ ಕೊನೆಗೂ ಅರೆಸ್ಟ್ !

ವಂಚಕ ಕಂಪನಿಗಳ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ"ನಿಜವಾದ ಕಂಪನಿಗಳು ಅಧಿಕೃತ ವೆಬ್‌ಸೈಟ್  ಹೊಂದಿರುತ್ತವೆ" ಎಂದು ಅವರು ಹೇಳಿದರು. ಆರೋಪಿ ವಿರುದ್ಧ 2000ರ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios