ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೋನ್: ಬ್ಯಾಂಕ್‌ಗಳಿಗೆ ಉಂಡೇನಾಮ ತಿಕ್ಕಿದ್ದ ಕಳ್ಳ ಕೃಷ್ಣ ಕೊನೆಗೂ ಅರೆಸ್ಟ್ !
ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಸಾಲ ಮಾಡಿ ತಲೆಮರಿಸಿಕೊಂಡು ಐಷಾರಾಮಿಯಾಗಿ ಬದುಕುತ್ತಿದ್ದ ಖದೀಮ ಕೊನೆಗೂ ಪೊಲೀಸರ ಬಲೆ ಬಿದ್ದಿದ್ದಾನೆ.

ಬೆಂಗಳೂರು (ಸೆ.30): ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಸಾಲ ಮಾಡಿ ತಲೆಮರಿಸಿಕೊಂಡು ಐಷಾರಾಮಿಯಾಗಿ ಬದುಕುತ್ತಿದ್ದ ಖದೀಮ ಕೊನೆಗೂ ಪೊಲೀಸರ ಬಲೆ ಬಿದ್ದಿದ್ದಾನೆ.
ಕೃಷ್ಣಕುಮಾರ ಬಂಧಿತ ಆರೋಪಿ. ಅಮಾಯಕರ ಆಸ್ತಿಪತ್ರಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಖದೀಮ. ಈತನ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲೆಯಾಗಿವೆ. ಪ್ರತಿಸಲ ಬ್ಯಾಂಕ್‌ಗೆ ಉಂಡೇನಾಮ ತಿಕ್ಕುತ್ತಿದ್ದ ಖತರ್ನಾಕ್ ಬಳಿಕ ಇದ್ದಕ್ಕಿದ್ದಂತೆ ಯಾರ ಕೈಗೆ ಸಿಗದೇ ನಾಪತ್ತೆಯಾಗಿಬಿಡುತ್ತಿದ್ದ. ಬರೋಬ್ಬರಿ 10 ವರ್ಷಗಳ ಬಳಿಕ ಶೇಷಾದ್ರಿಪುರ ಪೊಲೀಸರ ಬಲೆಗೆ ಬಿದ್ದಿರುವ ಖತರ್ನಾಕ್ ಖದೀಮ ಕೃಷ್ಣಕುಮಾರ್
ಕೋಲಾರ: ಮೃತ ವ್ಯಕ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ
2013 ರಿಂದ ತಲೆ ಮರೆಸಿಕೊಂಡಿದ್ದ ಆರೋಪಿ. ನಕಲಿ ದಾಖಲೆ ಸೃಷ್ಟಿಸಿ ಸುಮಾರು 15 ಕೋಟಿಗೂ ಹೆಚ್ಚು ಲೋನ್ ಪಡೆದು ವಂಚನೆ ಮಾಡಿರುವ ಕಳ್ಳ ಕೃಷ್ಣ. ಖಾಲಿ ಸೈಟ್, ಆಸ್ತಿ ಮಾರಾಟ ಮಾಡುವವರ ಇವನ ಟಾರ್ಗೆಟ್. ಆಸ್ತಿ ಖರೀದಿಸುತ್ತೇನೆಂದು ಮಾಲೀಕರಿಂದ ಆಸ್ತಿಯ ದಾಖಲೆ ಪಡೆಯುತ್ತಿದ್ದ ಖದೀಮ. ಬಳಿಕ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಲೋನ್ ಪಡೆಯುತ್ತಿದ್ದ. 2018ರಲ್ಲೂ ಇಂಥದೇ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ. ಪೊಲೀಸರು ಹುಡುಕಾಟ ಮುಂದುವರಿಸಿದ್ದರು. ಹತ್ತು ವರ್ಷಗಳ ಬಳಿಕ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿರುವ ಪೊಲೀಸರು.
ಕೇಂದ್ರ ವಿಭಾಗದ ಡಿಸಿಪಿ ಶೇಖರ ಹೆಚ್ ಟೆಕ್ಕಣ್ಣವರ್ ಹೇಳುವಂತೆ, ಆರೋಪಿ ಕೃಷ್ಣಕುಮಾರ ಮೊದಲಿಗೆ ಖಾಲಿ ಸೈಟ್, ಪ್ಲಾಟ್ ಗಳ ಇರುವ ಸ್ಥಳಗಳನ್ನು ಪತ್ತೆ ಮಾಡುತ್ತಿದ್ದ ಬಳಿಕ ಅಂತಹ ಸೈಟ್‌ಗಳನ್ನು ಖರೀದಿಸುವವನಂತೆ ಮಾಲೀಕರನ್ನು ಸಂಪರ್ಕಿಸುತ್ತಿದ್ದ. ತಾನು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಪರಿಚಯಿಸಿಕೊಂಡು ಅವರಿಂದ ಆಸ್ತಿಯ ಝರಾಕ್ಸ್ ಪ್ರತಿಗಳನ್ನು ಪಡೆದು ಅದಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದ. ಹೀಗೆ ಮಾಡುತ್ತಲೇ ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 15-20 ಕೋಟಿ ಸಾಲ ಪಡೆದು ವಂಚನೆ ಮಾಡಿರುವ ಆರೋಪ.
ಅಪರಿಚಿತರಿಗೆ ದಾಖಲೆ ಕೊಡುವ ಮುನ್ನ ಎಚ್ಚರ:
ಅಪರಿಚಿತರಿಗೆ ಆಸ್ತಿ, ವೈಯಕ್ತಿಕ ದಾಖಲೆಗಳು ನೀಡುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು. ಸಿಮ್ ಖರೀದಿಗೆ, ಇನ್ಯಾವುದಕ್ಕೋ ಕೊಟ್ಟು ಬಂದ ಝರಾಕ್ಸ್ ಆಧಾರ್ ಕಾರ್ಡ್, ಫೋಟೊ, ಫ್ಲಾಟ್ ಖರೀದಿಸುತ್ತೇನೆಂದು ಬಂದ ಅಪರಿಚಿತನಿಗೆ ಕೊಟ್ಟ ಆಸ್ತಿಯ ದಾಖಲೆಗಳು ಮುಂದೊಂದು ದಿನ ಅನಾಹುತ ತಂದೊಡ್ಡಬಹುದು.
ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ
ಲೋನ್ ಕೊಡುವ ಮುನ್ನ ಬ್ಯಾಂಕ್‌ಗಳು ದಾಖಲೆ ಪರಿಶೀಲನೆ:
ಇನ್ನು ಲೋನ್ ಕೊಡುವ ಮುನ್ನ ಬ್ಯಾಂಕ್ ಸಿಬ್ಬಂದಿ ಎಚ್ಚರಿಕೆವಹಿಸಬೇಕು. ಸಾಲ ಪಡೆಯುವ ವ್ಯಕ್ತಿ ಯಾರು, ಅವನು ಕೊಟ್ಟಿರುವ ದಾಖಲೆ ನಕಲಿಯೇ ಅಸಲಿಯೇ ಎಂಬುದು ಪರಿಶೀಲಿಸಿದ ಬಳಿಕವೇ ಲೋನ್ ಕೊಡಲು ಮುಂದಾಗಬೇಕು. ಸಿಬ್ಬಂದಿ ಯಾಮಾರಿದರೆ ಖದೀಮರು ಯಾರದ್ದೋ ಹೆಸರಿನ ಡಾಕ್ಯುಮೆಂಟ್ ಬಳಸಿಕೊಂಡು ಕೋಟಿ ಕೋಟಿ ಲೋನ್ ಪಡೆದು ಅಮಾಯಕ ಜನರ ಬದುಕು ನರಕ ಮಾಡಿಬಿಡ್ತಾರೆ. ಹೀಗೆ ಬೇರೆಯವರ ಡಾಕ್ಯುಮೆಂಟ್‌ಗಳನ್ನೇ ಬಳಸಿಕೊಂಡು ಲೋನ್ ಪಡೆಯುವ ದೊಡ್ಡ ದಂಧೆ ತಲೆಯೆತ್ತಿದೆ ಎಂಬುದಕ್ಕೆ ಇಲ್ಲಿದೆ ನೋಡಿ. ಈ ಖದೀಮ ಏನು ಮಾಡಿದ್ದಾನೆ ನೋಡಿ. ಯಾರದ್ದೋ ಜಾಗ, ಯಾರದ್ದೋ ಡಾಕ್ಯುಮೆಂಟ್ ಬಳಸಿಕೊಂಡು ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಸಾಲ ಪಡೆದು ಉಂಡೇನಾಮ ತಿಕ್ಕುತ್ತಿದ್ದವನು ಕೊನೆಗೂ ಅರೆಸ್ಟ್ ಆಗಿದ್ದಾನೆ.