ಸೈಬರ್ ವಂಚನೆ ತಡೆಗೆ ಕಠಿಣ ಕ್ರಮ; 4 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ1000 ಕೋಟಿ ರೂ.ವಾಪಸ್
ಕೇಂದ್ರ ಸರ್ಕಾರ ಲೋಕಸಭೆಗೆ ನೀಡಿರುವ ಮಾಹಿತಿಯಲ್ಲಿ 4 ಲಕ್ಷಕ್ಕೂ ಅಧಿಕ ಸೈಬರ್ ವಂಚನೆ ಪ್ರಕರಣಗಳಲ್ಲಿ1000 ಕೋಟಿ ರೂ.ವಾಪಸ್ ಪಡೆದಿರುವ ಬಗ್ಗೆ ಮಾಹಿತಿ ನೀಡಿದೆ.
ನವದೆಹಲಿ (ಡಿ.19): ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಹಾಗೂ ನಿರ್ವಹಣೆ ವ್ಯವಸ್ಥೆ ಮೂಲಕ 4ಲಕ್ಷಕ್ಕೂ ಅಧಿಕ ಸೈಬರ್ ವಂಚನೆ ಪ್ರಕರಣಗಳಲ್ಲಿ 1,000 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಸಂರಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ. ಯುಕೋ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ವಂಚನೆ ನಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಹಣಕಾಸು ಇಲಾಖೆ ರಾಜ್ಯ ಸಚಿವ ಭಗ್ವತ್ ಕರಾಡ್ ಈ ಮಾಹಿತಿ ನೀಡಿದ್ದಾರೆ. ಯುಕೋ ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು 820 ಕೋಟಿ ರೂ. ಎಗರಿಸಿದ್ದರು. ಇದು ದೇಶದಲ್ಲಿ ನಡೆದ ದೊಡ್ಡ ಪ್ರಮಾಣದ ಡಿಜಿಟಲ್ ವಂಚನೆಯಾಗಿದ್ದು, ಈ ಬಗ್ಗೆ ಯುಕೋ ಬ್ಯಾಂಕ್ ನವೆಂಬರ್ 11ರಂದು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿತ್ತು.
ಯುಕೋ ಬ್ಯಾಂಕ್ ವಿವಿಧ ಖಾತೆಗಳಿಂದ 820 ಕೋಟಿ ರೂ. ಅನ್ನು ಸೈಬರ್ ವಂಚಕರು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಇದರಲ್ಲಿ 705.31 ಕೋಟಿ ರೂ. ಅನ್ನು ಡಿಸೆಂಬರ್ 7ರೊಳಗೆ ಹಿಂಪಡೆಯಲು ಯುಕೋ ಬ್ಯಾಂಕ್ ಯಶಸ್ವಿಯಾಗಿದೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.'ಗೃಹ ಸಚಿವಾಲಯದಿಂದ ಪಡೆದಿರುವ ಮಾಹಿತಿಗಳ ಅನ್ವಯ ಹಣಕಾಸು ವಂಚನೆಗಳ ಕುರಿತು ತಕ್ಷಣ ಮಾಹಿತಿ ನೀಡಿದ ಪ್ರಕರಣಗಳನ್ನು ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಹಾಗೂ ನಿರ್ವಹಣಾ ವ್ಯವಸ್ಥೆ ನಿರ್ವಹಿಸುತ್ತಿದೆ. ಡಿಸೆಂಬರ್ 4ರ ತನಕ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ ಒಟ್ಟು 1,000 ಕೋಟಿ ರೂ.ಗಿಂತಲೂ ಅಧಿಕ ಹಣ ಉಳಿಸಲಾಗಿದೆ' ಎಂದು ಭಗ್ವತ್ ಕರಾಡ್ ಮಾಹಿತಿ ನೀಡಿದ್ದಾರೆ.
ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡ್ತಿದೆ ಡಿಜಿಟಲ್ ಅರೆಸ್ಟ್? ಕೇವಲ 15 ದಿನದಲ್ಲಿ ಮೂರೂವರೆ ಕೋಟಿ ವಂಚನೆ!
ಹಣಕಾಸು ಸೇವಾ ವಲಯದಲ್ಲಿ ಸೈಬರ್ ಭದ್ರತೆ ಕುರಿತು ಹಾಗೂ ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಹಣಕಾಸು ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಚರ್ಚಿಸಲು ನವೆಂಬರ್ 28ರಂದು ಆರ್ ಬಿಐ, ಟ್ರಾಯ್, ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳ ಸಭೆ ನಡೆಸಿರುವ ಬಗ್ಗೆ ಕೂಡ ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು. ಮೊಬೈಲ್ ಸಾಧನಗಳ ವಿಶಿಷ್ಟ ಸಂಖ್ಯೆಯಾದ ಐಎಂಇಐ ಬ್ಲಾಕ್ ಮಾಡೋದು ಹಾಗೂ ಅನುಮಾನಾಸ್ಪದ ಖಾತೆಗಳಿಂದ ಹಣ ವಿತ್ ಡ್ರಾಗೆ ನಿರ್ಬಂಧ ವಿಧಿಸೋದು ಸೇರಿದಂತೆ ಅನೇಕ ಕ್ರಮಗಳನ್ನು ಜಾರಿಗೊಳಿಸಲು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ವಂಚಕರು ಹಣ ಸಂಗ್ರಹಿಸಲು ಅಥವಾ ವರ್ಗಾಯಿಸಲು ಮುಲೆ ಬ್ಯಾಂಕ್ ಖಾತೆಗಳನ್ನು ಬಳಸುತ್ತಾರೆ. ಸೈಬರ್ ವಂಚನೆ ಪ್ರಕರಣಗಳಲ್ಲಿ ಒಂದು ಖಾತೆಯಿಂದ ಕನ್ನಾ ಹಾಕಿರುವ ಹಣವನ್ನು ಅನೇಕ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ನಂತರ ಒಂದು ಖಾತೆಯಿಂದ ವಿತ್ ಡ್ರಾ ಮಾಡಲಾಗುತ್ತದೆ. ಹೀಗಾಗಿ ಇಂಥ ಪ್ರಕರಣಗಳಲ್ಲಿ ಬ್ಯಾಂಕ್ ಹಾಗೂ ಪೊಲೀಸರಿಗೆ ವಂಚಕರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗುತ್ತದೆ. ಹೀಗಾಗಿ ನಿಷ್ಕ್ರಿಯ ಹಾಗೂ ಮುಲೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಅಥವಾ ವಿತ್ ಡ್ರಾಗೆ ನಿಗದಿತ ಮಿತಿ ವಿಧಿಸುವ ಆಯ್ಕೆಗಳ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ.
ಹುಡುಗಿ ಹೆಸರಲ್ಲಿ ಫೇಸ್‌ಬುಕ್; ಬರೋಬ್ಬರಿ ₹6.87 ಲಕ್ಷ ರೂ.ವಂಚಿಸಿದ ಭೂಪ!
ಯುಪಿಐ ವಹಿವಾಟು 4 ಗಂಟೆ ವಿಳಂಬ
ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಯುಪಿಐ ವಹಿವಾಟು ನಡೆಯುವಾಗ ನಿರ್ದಿಷ್ಟ ಮೊತ್ತಕ್ಕೆ ಹೆಚ್ಚಿನದಕ್ಕೆ ಕನಿಷ್ಠ ಸಮಯ ಮಿತಿ ವಿಧಿಸಲು ಸರ್ಕಾರ ಯೋಜನೆ ರೂಪಿಸಿದೆ. 2 ಸಾವಿರ ರೂ. ಮೀರಿದ ಮೊತ್ತವನ್ನು ಮೊದಲ ಬಾರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಿ ವರ್ಗಾವಣೆ ಮಾಡುವಾಗ 4 ಗಂಟೆಗಳ ಸಮಯಾವಧಿ ನಿಗದಿಪಡಿಸುವ ಬಗ್ಗೆ ಯೋಚಿಸಲಾಗಿದೆ ಎಂದು