Asianet Suvarna News Asianet Suvarna News

Delhi Crime Rate: ಕೊರೋನಾ ನಿಯಂತ್ರಿಸಿದ ದೆಹಲಿಯಲ್ಲಿ ಅತ್ಯಾಚಾರ, ಕಿಡ್ನಾಪ್ ವಿಶ್ವದಲ್ಲೇ ಗರಿಷ್ಠ!

  • ಕೊರೋನಾ ಗೆದ್ದ ದಿಲ್ಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಏರಿಕೆ
  • ಅತ್ಯಾಚಾರ, ಕಿಡ್ನಾಪ್ ಪ್ರಕರಣ ವಿಶ್ವದಲ್ಲೇ ಗರಿಷ್ಠ, ಅಂಕಿ ಅಂಶ ಬಹಿರಂಗ
  • ಲಾಕ್‌ಡೌನ್‌ನಿಂದ ಇಳಿಕೆಯಾಗಿದ್ದ ಪ್ರಕರಣ, ಇದೀಗ ಮತ್ತೆ ಏರಿಕೆ
Crime rate against women is among highest in worldwide data shared by Delhi Police ckm
Author
Bengaluru, First Published Nov 22, 2021, 8:58 PM IST

ನವದೆಹಲಿ(ನ.22): ಲಾಕ್‌‌ಡೌನ್, ಕರ್ಫ್ಯೂ, ಕಂಟೈನ್ಮೆಂಟ್ ಝೋನ್ ಸೇರಿದಂತೆ ಹಲವು ನಿರ್ಬಂಧಗಳಿಂದ ಭಾರತ ಕೊರೋನಾ 2ನೇ ಅಲೆಯನ್ನು ಗೆದ್ದುಬಿಟ್ಟಿತು. ಅದರಲ್ಲೂ ಪರಿಸ್ಥಿತಿ ಕೈಮೀರಿದ್ದ ದೆಹಲಿಯಲ್ಲಿ(Delhi) ಕೊರೋನಾ ನಿಯಂತ್ರಣದಲ್ಲಿದೆ. ಆದರೆ ಕೊರೋನಾ(Coronavirus) ಕಡೆಗೆ ಗಮನಹರಿಸಿದ ಸರ್ಕಾರ, ಮಹಿಳೆಯ ವಿರುದ್ಧ ನಡೆಯುತ್ತಿರವ ಪ್ರಕರಣ ನಿಯಂತ್ರಿಸುವಲ್ಲಿ ವಿಫಲವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ಪ್ರಕರಣ(crime rate against women) ವಿಶ್ವದಲ್ಲೇ ಗರಿಷ್ಠವಾಗಿದೆ. ಈ ಕುರುತಿ ಪೊಲೀಸ್ ಬಹಿರಂಗ ಪಡಿಸಿದ ಅಂಕಿ ಅಂಶ ದೇಶದಲ್ಲಿನ ಮಹಿಳೆ ಹಾಗೂ ಮಕ್ಕಳ ಮೇಲಿನ ಸುರಕ್ಷತೆ ಕುರಿತು ಬೆಳಕು ಚೆಲ್ಲಿದೆ.

ವಿಶ್ವದ ಇತರ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಮಹಿಳೆಯ ವಿರುದ್ಧ ನಡೆಯುತ್ತಿರುವ ಪ್ರಕರಣಗಳು ಗರಿಷ್ಠವಾಗಿದೆ. ದೆಹಲಿ ಪೊಲೀಸರು(Delhi Police) ಬಿಡುಗಡೆ ಮಾಡಿದ ವರದಿ ಪ್ರಕಾರ,  ಈ ವರ್ಷ 3,117 ಮಹಿಳೆಯ ಕಿಡ್ನಾಪ್ ಕೇಸ್(Kidnap) ದಾಖಲಾಗಿದೆ. ಇನ್ನು 1,725 ಅತ್ಯಾಚಾರ(Rape) ಪ್ರಕರಣ ದಾಖಲಾಗಿದೆ. ಈ ಅಂಕಿ ಅಂಶ ಅಕ್ಟೋಬರ್ 31ರ ವರೆಗಿನ ದಾಖಲೆಗಳಾಗಿವೆ. 

Crime News; ಸೆಕ್ಸ್‌ಗೆ ಒಪ್ಪದ ಗೆಳೆಯನ ಮರ್ಮಾಂಗ ಕಟ್.. ಸಾರಿ ಮಿಸ್ಟೇಕ್‌ ಆಗೋಯ್ತು ಅಂದ್ಲು!

ಕಳೆದ ವರ್ಷಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಈ ವರ್ಷ ಅತ್ತೆ ಕೌರ್ಯ ಪ್ರಕರಣ ಸೇರಿದಂತೆ ಕೌಟುಂಬಿಕ ಕಲಹ ಪ್ರಕರಣಗಳು(Domestic violence) ದುಪ್ಪಟ್ಟಾಗಿದೆ. 2020ರಲ್ಲಿ ಅತ್ತೆ ಕೌರ್ಯದ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,931. ಈ ವರ್ಷ ಅಕ್ಟೋಬರ್ 31ರವರೆಗಿನ ದಾಖಲೆಗಳ ಪ್ರಕಾರ ಅತ್ತೆ ಕೌರ್ಯದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಖ್ಯೆ 3,742.

ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಕಿಡ್ನಾಪ್ ಸೇರಿದ ಪ್ರಕರಣಗಳಲ್ಲಿ ದೆಹಲಿ ಮುಂಚೂಣಿಯಲ್ಲಿದೆ. 2020ರಲ್ಲಿ ದೆಹಲಿಯಲ್ಲಿ ಈ ಪ್ರಕರಣಗಳು ಶೇಕಡಾ 24.65ರಷ್ಟು ಇಳಿಕೆ ಕಂಡಿತ್ತು. 2020ರಲ್ಲಿ ಮಹಿಳೆಯರ ವಿರುದ್ಧ ದಾಖಲಾದ ಪ್ರಕರಣ 10,093. 2019ರಲ್ಲಿ ಈ ಸಂಖ್ಯೆ 13,395. 

Quarantine Crime:ಕ್ವಾರಂಟೈನ್‌ನಲ್ಲಿದ್ದ ಸಹದ್ಯೋಗಿ ಮೇಲೆ ಇಬ್ಬರು ವೈದ್ಯರಿಂದ ಅತ್ಯಾಚಾರ, ಆರೋಪಿಗಳು ಅರೆಸ್ಟ್!

ಉತ್ತರ ಪ್ರದೇಶದಲ್ಲಿ ಹೆಚ್ಚು ಅತ್ಯಾಚಾರ, ಕೊಲೆ ಸೇರಿದಂತೆ ಘಟನೆಗಳು ವರದಿಯಾಗುತ್ತಿದೆ. ಯುಪಿಯಲ್ಲಿನ ಪ್ರತಿಯೊಂದು ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇಷ್ಟೇ ಅಲ್ಲ ಸರ್ಕಾರದ ಮೇಲೆ ವಿಪಕ್ಷಗಳು ಗೂಂಡಾ ರಾಜ್ಯ ಎಂದೇ ಬಿಂಬಿಸಿದೆ. ಆದರೆ ಉತ್ತರ ಪ್ರದೇಶಕ್ಕಿಂತ ಹೆಚ್ಚು, ಮಹಿಳೆಯರ ವಿರುದ್ಧ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗುತ್ತಿದೆ.  ದೆಹಲಿಯ ಕ್ರೈಂ ರೇಟ್ ಅದರಲ್ಲೂ ಮಹಿಳೆಯ ವಿರುದ್ಧ ನಡೆಯುತ್ತಿರುವ ಕ್ರೌರ್ಯ ಪ್ರಕರಣಗಳು ವಿಶ್ವದಲ್ಲೇ ಅತೀ ಹೆಚ್ಚು. 

ಈ ಅಂಕಿ ಅಂಶ ದೆಹಲಿಯಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ಸುರಕ್ಷತೆ ಎಷ್ಟಿದೆ ಅನ್ನೋದು ಬಹಿರಂಗ ಪಡಿಸಿದೆ. ನಿರ್ಭಯಾ (Nirbhaya) ಅತ್ಯಾಚಾರ ಪ್ರಕರಣದ ಬಳಿಕ ದೆಹಲಿ ಹಾಗೂ ಭಾರತ ವಿಶ್ವಮಟ್ಟದಲ್ಲಿ ತಲೆತಗ್ಗಿಸಿತ್ತು. ಈ ಘಟನೆ ಬಳಿಕ ಮಹಿಳೆಯರ ಸುರಕ್ಷತೆಗೆ ಸರ್ಕಾರ ಮೇಲ್ನೋಟಕ್ಕೆ ಕ್ರಮ ಕೈಗೊಂಡಂತೆ ಕಂಡರೂ ಪರಿಣಾಮಕಾರಿಯಾದ ಕ್ರಮ  ಹಾಗೂ ಕಾನೂನು ಜಾರಿಯಾಗಿಲ್ಲ. ಸುರಕ್ಷತೆ ಒದಗಿಸುವಲ್ಲಿ ಸರ್ಕಾರಗಳು ಎಡವುತ್ತಿವೆ. ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ದೇಶದ ಪ್ರತಿಯೊಬ್ಬ ನಾಗರೀಕನಿಗೆ ಸುರಕ್ಷತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಒಂದೊಂದೇ ಘಟನೆಗಳು ಮರುಕಳಿಸುತ್ತಲೇ ಇದೆ. ಪ್ರತಿ ಘಟನೆ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ ಹೊರತು, ಹೆಚ್ಚಿನ ಬದಲಾವಣೆಗಳನ್ನು ತಂದಿಲ್ಲ.
 

Follow Us:
Download App:
  • android
  • ios