Asianet Suvarna News Asianet Suvarna News

ಧೋನಿ, ಶಿಲ್ಪಾ ಶೆಟ್ಟಿ, ಅಭಿಷೇಕ್‌ ಪಾನ್‌ ಸಂಖ್ಯೆ ಬಳಸಿ ಕ್ರೆಡಿಟ್‌ ಕಾರ್ಡ್‌ ವಂಚನೆ

ಗೂಗಲ್‌ನಲ್ಲಿ ಲಭ್ಯವಿರುವ ಜಿಎಸ್‌ಟಿ ಗುರುತಿನ ಸಂಖ್ಯೆ ಬಳಸಿ ಎಂ.ಎಸ್‌ ಧೋನಿ, ಅಭಿಷೇಕ್‌ ಬಚ್ಚನ್‌, ಹಾಗೂ ಶಿಲ್ಪಾ ಶೆಟ್ಟಿಯಂತಹ ಕ್ರಿಕೆಟ್‌ ಹಾಗೂ ಬಾಲಿವುಡ್‌ ತಾರೆಯರ ಪಾನ್‌ ಮಾಹಿತಿಯನ್ನು ಕದ್ದು ಭಾರಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Credit Card Fraud celebrities like Dhoni, Shilpa Shetty, Abhishek PAN Number misused akb
Author
First Published Mar 4, 2023, 10:23 AM IST

ನವದೆಹಲಿ: ಗೂಗಲ್‌ನಲ್ಲಿ ಲಭ್ಯವಿರುವ ಜಿಎಸ್‌ಟಿ ಗುರುತಿನ ಸಂಖ್ಯೆ ಬಳಸಿ ಎಂ.ಎಸ್‌ ಧೋನಿ, ಅಭಿಷೇಕ್‌ ಬಚ್ಚನ್‌, ಹಾಗೂ ಶಿಲ್ಪಾ ಶೆಟ್ಟಿಯಂತಹ ಕ್ರಿಕೆಟ್‌ ಹಾಗೂ ಬಾಲಿವುಡ್‌ ತಾರೆಯರ ಪಾನ್‌ ಮಾಹಿತಿಯನ್ನು ಕದ್ದು ಭಾರಿ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಐವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಗಣ್ಯರ ಪಾನ್‌ ಸಂಖ್ಯೆ ಕದ್ದಿರುವ ಸೈಬರ್‌ ವಂಚಕರು, ಪುಣೆ (Pune) ಮೂಲದ ಸ್ಟಾರ್ಟ್‌ಅಪ್‌ (Startups) ಕಂಪನಿ 'ಒನ್‌ ಕಾರ್ಡ್‌' ಕಂಪನಿಯಿಂದ ತಾರೆಯರ ಹೆಸರಿನಲ್ಲಿ ಕ್ರೆಡಿಟ್‌ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

ಹೀಗೆಯೇ ಮಾಧುರಿ ದೀಕ್ಷಿತ್‌ (Madhuri Dixith), ಇಮ್ರಾನ್‌ ಹಷ್ಮಿಯವರ (Imran Hasmi) ಮಾಹಿತಿಯನ್ನೂ ಕದಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಎಸ್‌ಟಿ ಸಂಖ್ಯೆಯಲ್ಲಿ ಮೊದಲೆರಡು ಅಂಕಿಗಳು ಸ್ಟೇಟ್‌ ಕೋಡ್‌ ಹಾಗೂ ಉಳಿದ 10 ಅಂಕಿ ಪ್ಯಾನ್‌ ಸಂಖ್ಯೆಯಾಗಿರುತ್ತದೆ ಎಂಬುದನ್ನು ವಂಚಕರು ಅರಿತಿದ್ದಾರೆ. ತಾರೆಯರ ಜನ್ಮ ದಿನಾಂಕವೂ ಆನ್‌ಲೈನ್‌ನಲ್ಲಿ ಲಭ್ಯವಿದೆಯಾದ್ದರಿಂದ ಅವರ ದಾಖಲೆ ಇರುವ ನಕಲಿ ಪಾನ್‌ಕಾರ್ಡ್‌ನಲ್ಲಿ ತಮ್ಮ ಫೋಟೊಗಳನ್ನು ಹಾಕಿಕೊಂಡಿದ್ದ ವಂಚಕರು, ಅವುಗಳನ್ನು ಬಳಸಲು ಸಿದ್ಧರಾಗಿದ್ದ ವೇಳೆಯೇ ಪೊಲೀಸರ ಬಲೆಗೆ ಸಿಕ್ಕಿ ಬಂದಿದ್ದಾರೆ.

ಪ್ಯಾನ್ ಕಾರ್ಡ್ ಕಳೆದು ಹೋಗಿದೆಯಾ? ಡೋಂಟ್ ವರಿ, ಮರು ಅರ್ಜಿ ಸಲ್ಲಿಕೆ ಮಾಡಿ

ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು. ಇದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ.  ಪ್ಯಾನ್ ಕಾರ್ಡ್ಗೆ ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಯಾವುದೋ ಕಾರಣದಿಂದ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ರೆ ಆಗ ನೀವು ಮರಳಿ ಪ್ಯಾನ್ ಕಾರ್ಡ್ ಪಡೆಯಲು ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸೋದು ಅಗತ್ಯ. ಪ್ಯಾನ್ ಕಾರ್ಡ್ ಕಳೆದು ಹೋದ ತಕ್ಷಣ ಸ್ಥಳೀಯ ಪೊಲೀಸ್ ಠಾಣಿಯಲ್ಲಿ ಎಫ್ ಐಆರ್ ಫೈಲ್ ಮಾಡೋದು ಅಗತ್ಯ. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅನೇಕ ಬಾರಿ ಎಚ್ಚರಿಕೆ ಕೂಡ ನೀಡಿದೆ. ಹೀಗಾಗಿ ಪ್ಯಾನ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಎಚ್ಚರಿಕೆ ವಹಿಸೋದು ಅಗತ್ಯ.

Union Budget 2023:ಕೆವೈಸಿ ಪ್ರಕ್ರಿಯೆ ಸರಳ; ಡಿಜಿಟಲ್ ವ್ಯವಸ್ಥೆಗೆ ಪ್ಯಾನ್ ಸಾಮಾನ್ಯ ಗುರುತು ದೃಢೀಕರಣ ದಾಖಲೆ

Follow Us:
Download App:
  • android
  • ios