Asianet Suvarna News Asianet Suvarna News

Crime News: ಒಡವೆ ಆಸೆಗೆ ಸಹೋದ್ಯೋಗಿ ಕೊಲೆ; ವರ್ಷದ ಬಳಿಕ ಸೆರೆ

  • ಚಿನ್ನಕ್ಕಾಗಿ ಸಹೋದ್ಯೋಗಿ ಕೊಲೆ: ವರ್ಷದ ಬಳಿಕ ಸೆರೆ
  •  2021ರ ಜುಲೈನಲ್ಲಿ ಹತ್ಯೆಯಾಗಿದ್ದ ಚಾಮರಾಜಪೇಟೆ ನಿವಾಸಿ ಚಂದ್ರಕಲಾ
  • ಸಹೋದ್ಯೋಗಿ ಕಣ್ಣುಕುಕ್ಕಿತ್ತು ಮೈಮೇಲಿನ ಚಿನ್ನ
Coworker killed for greed; Arrested after a year at mandya rav
Author
Bengaluru, First Published Aug 22, 2022, 7:39 AM IST

 ಹಲಗೂರು(ಮಂಡ್ಯ) (ಆ.22) : ಕಳೆದ ಒಂದು ವರ್ಷದ ಹಿಂದೆ ಚಾಮರಾಜಪೇಟೆಯ ಮಹಿಳೆಯನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಹಲಗೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಅಂಚೆಪಾಳ್ಯ ಪೋಸ್ಟ್‌ ಚಳ್ಳಘಟ್ಟನಿವಾಸಿ ಲಕ್ಷ್ಮೇ (38), ಗೊಲ್ಲಹಳ್ಳಿ ನಿವಾಸಿ ನಾರಾಯಣ ಜಿ.ನಾಣಿ ಬಂಧಿತರು. ಆರೋಪಿಗಳು ಚಿನ್ನಾಭರಣಕ್ಕಾಗಿ ಚಾಮರಾಜಪೇಟೆ ನಿವಾಸಿ ಚಂದ್ರಕಲಾ (42) ಎಂಬುವವರನ್ನು ಹಲಗೂರು ಸಮೀಪ ಕೊಲೆಗೈದು ಪರಾರಿಯಾಗಿದ್ದರು.

ಆಸ್ತಿಗಾಗಿ ತಾತನನ್ನೇ ಹೊಡೆದು ಕೊಂದ ಮೊಮ್ಮಗ

ಔಷಧಿ ಕೊಡಿಸೋದಾಗಿ ಕರೆದೊಯ್ದಿದ್ದ ಆರೋಪಿಗಳು:

ಮೂಲತಃ ರಾಮನಗರ(Ramanagar) ಜಿಲ್ಲೆ ಚನ್ನಪಟ್ಟಣ(Channapattana) ತಾಲೂಕಿನ ಕೋಡಾಂಬಳ್ಳಿ ಲಕ್ಷ್ಮಿ ಮತ್ತು ಕೊಲೆಯಾದ ಚಾಮರಾಜಪೇಟೆ(Chamarajpete) ನಿವಾಸಿ ಚಂದ್ರಕಲಾ(Chandrakala) ಇಬ್ಬರು ಗೋಣಿ ಚೀಲ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಬನಶಂಕರಿ 3ನೇ ಹಂತದ ಚನ್ನಮ್ಮಕೆರೆ ಮಂಜುನಾಥ ಕಾಲೋನಿಯ ನಾರಾಯಣ ಜಿ.ನಾಣಿ ಆಟೋ ಡ್ರೈವರ್‌ ಕೆಲಸ ಮಾಡುತ್ತಿದ್ದ. ಕೊಲೆಯಾದ ಚಂದ್ರಕಲಾ ಯಾವಾಗಲೂ ಮೈಮೇಲೆ ವಡವೆ ಧರಿಸುತ್ತಿದ್ದರು. ಆದರೆ ಸದಾ ಅನಾರೋಗ್ಯ ಕಾÜುತ್ತಿತ್ತು. ಚಂದ್ರಕಲಾಳನ್ನು ಕೊಲೆ ಮಾಡಿದರೆ ಚಿನ್ನಾಭರಣ ಪಡೆಯಬಹುದೆಂದು ಹೊಂಚು ಹಾಕಿದ ಲಕ್ಷ್ಮಿ, ಆಟೋ ಡ್ರೈವರ್‌ ನಾಣಿ ಜತೆ ಸಂಚು ಹಂಚಿಕೊಂಡಿದ್ದಳು. ಹೀಗಾಗಿ ಇಬ್ಬರೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಾಟಿಔಷಧಿ ಕೊಡುತ್ತಾರೆ ಎಂದು 2021ರ ಜುಲೈ 27ರಂದು ಚಂದ್ರಕಲಾಳನ್ನು ಆಟೋದಲ್ಲೇ ಕರೆದೊಯ್ದಿದ್ದರು.

ಮುತ್ತತ್ತಿ ತಲುಪುವ ಮುನ್ನವೇ ಹಲಗೂರು ಹೋಬಳಿಯ ಮುಳ್ಳಯ್ಯನಕಟ್ಟೆಬಳಿ ಚಂದ್ರಕಲಾಳನ್ನು ನೇಣು ಬಿಗಿದು ಕೊಲೆ ಮಾಡಿ, ಗುರುತು ಸಿಗಬಾರದೆಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದರು. ಅಪರಿಚಿತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ನಿರುದ್ಯೋಗ: 11 ತಿಂಗಳ ಮಗುವನ್ನೇ ಕೊಂದು ಕಾಲುವೆಗೆ ಎಸೆದ ಅಪ್ಪ!

ಚಾಮರಾಜಪೇಟೆಯಲ್ಲಿ ದಾಖಲಾಗಿತ್ತು ಮಿಸ್ಸಿಂಗ್‌ ಕಂಪ್ಲೇಂಟ್‌: ಇನ್ನು 2021ರ ಜುಲೈನಲ್ಲಿ ಇತ್ತ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಹಲಗೂರು ಪೊಲೀಸರು ಕಾಣೆಯಾದ ಮಹಿಳೆ ಮತ್ತು ಕೊಲೆಯಾದ ಮಹಿಳೆ ಚಹರೆ ಗುರುತುಗಳನ್ನು ಹೋಲಿಕೆ ಮಾಡಿ ನೋಡಿದಾಗ ಇಬ್ಬರು ಒಬ್ಬಳೇ ಮಹಿಳೆ ಎಂದು ತಿಳಿದಿದೆ. ನಂತರ ಕೊಲೆಯಾದ ಮಹಿಳೆಯ ಮೊಬೈಲ್‌ ನಂಬರ್‌ ಮಾಹಿತಿ ಪಡೆದುಕೊಂಡ ಪರಿಶೀಲಿಸಿದಾಗ ಕೊನೆಯದಾಗಿ ಯಾರ ಜೊತೆ ಮಾತನಾಡಿದ್ದಾಳೆ ಎಂಬುದನ್ನು ತಿಳಿದು ಆರೋಪಿಗಳಾದ ಲಕ್ಷ್ಮೇ ಮತ್ತು ನಾಣಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

Follow Us:
Download App:
  • android
  • ios