Asianet Suvarna News Asianet Suvarna News

Sexual Harassment : ಮಲಗಿದ್ದ ಮಗಳನ್ನು ಟಚ್ ಮಾಡಿದ...ದಂಪತಿಯಿಂದ ಕೆಲಸಕ್ಕಿದ್ದ ವೃದ್ಧನ ಹತ್ಯೆ!

* ಮಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡ ಆರೋಪ
* ಮನೆಕೆಲಸಕ್ಕಿದ್ದ ವೃದ್ಧನ ಹತ್ಯೆ ಮಾಡಿದರು
* ಹತ್ಯೆ ಮಾಡಿ ಶವವನ್ನು ಮುಖ್ಯ ರಸ್ತೆಯಲ್ಲಿ ಬಿಸಾಡಿದ ದಂಪತಿ 
* ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು

Couple kills elderly domestic helper for molesting their daughter Mumbai mah
Author
Bengaluru, First Published Jan 4, 2022, 6:14 PM IST
  • Facebook
  • Twitter
  • Whatsapp

ಮುಂಬೈ(ಜ. 04)  ಅಪ್ರಾಪ್ತ ಮಗಳಿಗೆ (Girl) ಕಿರುಕುಳ (Sexual Harassment) ನೀಡುತ್ತಿದ್ದ ಎಂಬ ಶಂಕೆ ಮೇಲೆ  ದಂಪತಿ (Couple)ಮನೆ ಕೆಲಸಕ್ಕೆ ಇದ್ದ  70 ವರ್ಷದ  ವ್ಯಕ್ತಿಯನ್ನು ಹತ್ಯೆ (Murder)ಮಾಡಿದ್ದಾರೆ. ಬರ್ಬರವಾಗಿ ಕೊಂದು ಹಾಕಿದ್ದಾರೆ..
 
ಹತ್ಯೆ ಮಾಡಿ ಶವವನ್ನು ಮಂಖುರ್ದ್‌ ರೈಲ್ವೆ (Indian Railways) ನಿಲ್ದಾಣದ ಬಳಿ ಹಾಕಿದ್ದಾರೆ. ಕೊಲೆಯಾಗುವುದಕ್ಕೆ ಎಂಟು ದಿನಗಳ ಮುಂಚೆ ವೃದ್ಧ ಮನೆಕೆಲಸಕ್ಕೆ ಇವರ ಬಳಿ ಸೇರಿಕೊಂಡಿದ್ದ.

ಪೊಲೀಸರು ಹೇಳುವಂತೆ ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪ ಹೊತ್ತಿರುವ ದಂಪತಿ  ಬಿಹಾರ ಮೂಲದವರಾಗಿದ್ದು, ಪರಸ್ಪರ ಮೊದಲಿನಿಂದ ಪರಿಚಯಸ್ಥರು.

ಏನಾಯಿತು?  ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗಳು ಮಲಗಿದ್ದಳು. ಕೆಲಸಕ್ಕೆ ಸೇರಿಕೊಂಡಿದ್ದ ವೃದ್ಧ ಆಕೆಯನ್ನು  ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂಬ ಕಾರಣವೇ ಕೊಲೆಗೆ ಮೂಲ. ಮಗಳು ಕೂಗಿಕೊಂಡಾಗ ಅಲ್ಲಿಗೆ ಬಂದ ದಂಪತಿ  ಏಕಾಏಕಿ ಬೆಲ್ಟ್ ಮತ್ತು ಬಿದಿರಿನ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ದಂಪತಿಯ ಏಟಿಗೆ ವೃದ್ಧ ಸಾವನ್ನಪ್ಪಿದ್ದಾನೆ.

ವೃದ್ಧ ಸಾವನ್ನಪ್ಪಿದ್ದು ಖಚಿತವಾಗುತ್ತಿದ್ದಂತೆ  ಮೃತದೇಹವನ್ನು ಸಾತೆ ನಗರ ಸಮೀಪದ ಮನ್‌ಖುರ್ದ್‌ ಸಂಪರ್ಕ ರಸ್ತೆಗೆ ತಂದು ಎಸೆದಿದ್ದಾರೆ. ಬೆಳಿಗ್ಗೆ ಸ್ಥಳೀಯ ನಿವಾಸಿಯೊಬ್ಬರು ಶವವನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.  ಶವವನ್ನು ರಾಜವಾಡಿ ಆಸ್ಪತ್ರೆಗೆ ಕೊಂಡೊಯ್ದು ನಂತರ ವಿಚಾರಣೆ ಆರಂಭವಾಯಿತು. ಮೊದಲಿಗೆ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಲಿಲ್ಲ. ಪೊಲೀಸರು ಎಲ್ಲ ಸ್ಟೇಶನ್ ಗೂ ಮಾಹಿತಿ ನೀಡಿದ್ದಾರೆ.

Suvarna FIR :ಅರ್ಚನಾ ರೆಡ್ಡಿ ಕೊಲೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್.. ಊಹೆ ಮಾಡಲು ಸಾಧ್ಯವಿಲ್ಲ!

ಮೃತನ ಗುರುತು ಪತ್ತೆಯಾಗದ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೃದ್ಧನ ದೇಹದ ಹಲವು ಮೂಳೆಗಳು ಮುರಿದಿವುದು ಗೊತ್ತಾಗಿದೆ. ನಂತರ ಎಲ್ಲ ಕಡೆಯಿಂದ ಮಾಹಿತಿ ಕಲೆ ಹಾಕಿದಾಗ  ಮೃತ ವ್ಯಕ್ತಿ ಮೊಹಮ್ಮದ್ ಇಸ್ಮತ್ ಎಂದು ಗೊತ್ತಾಗಿದೆ.

ಸತ್ತವನ ಗುರುತು ಪತ್ತೆಯಾಗಿದ ನಂತರ  ತನಿಖೆ ಆರೋಪಿಗಳ ಪತ್ತೆಗೆ ಬಲೆ  ಬೀಸಲಾಗಿದೆ. ಕೊಲೆಗಾರರು ಪಾಟ್ನಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಅಲರ್ಟ್ ಆಗಿದ್ದು  ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.

ಪೊಲೀಸರು ಬಂಧಿಸಿದ ನಂತರ ಇಬ್ಬರು  ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಸ್ಥಳೀಯರಿಂದಲೂ ಮಾಹಿತಿ ಕಲೆಹಾಕಿದ್ದು  ದಂಪತಿ ಪೊಲೀಸ್ ವಶದಲ್ಲಿದ್ದಾರೆ. 

ರೇಪ್ ಎಸಗಿದ ನಕಲಿ ಪೊಲೀಸ್:  ಪೊಲೀಸ್ (Police Officer) ಅಧಿಕಾರಿಯಂತೆ ನಟಿಸಿದ ವ್ಯಕ್ತಿಯೊಬ್ಬ  ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ (Rape)ಎಸಗಿದ್ದಾನೆ.. ಈ ಕುರಿತು ಕುರುಪಾಂ ಪೊಲೀಸ್ ಠಾಣೆಯಲ್ಲಿ ರಾತ್ರಿ ದೂರು ದಾಖಲಾಗಿದ್ದು ಆರೋಪಿಯನ್ನು ವಿ ರಾಮಬಾಬು (35) ಎಂದು ಗುರುತಿಸಲಾಗಿದೆ.

ರಾಂಬಾಬು ಮತ್ತೆ ಮತ್ತೆ ಇಂಥದ್ದೇ ಪ್ರಕರಣದಲ್ಲಿ  ಭಾಗಿಯಾಗುತ್ತಿದ್ದ.  ಈತನ ವಿರುದ್ಧ ಈಗಾಗಲೇ  14 ಪ್ರಕರಣಗಳಿವೆ.  ಸರ್ಕಾರಿ ವಸತಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕ್ರೌರ್ಯ ಮೆರೆದಿದ್ದ.

ಪೊಲೀಸರು ಹೇಳುವಂತೆ ಇಬ್ಬರು ಬಾಲಕಿಯರು ತಮ್ಮ ಗೆಳೆಯರೊಂದಿಗೆ ಸಮಯ ಕಳೆಯಲು ಹತ್ತಿರದ ಹಳ್ಳಿಗೆ ಹೋಗಿದ್ದರು. ರವಡಾ ಗ್ರಾಮದ ನದಿ ಪ್ರದೇಶಕ್ಕೆ ತೆರಳಿದ್ದರು. ಇದನ್ನು ಆರೋಪಿ ರಾಂಬಾಬು ಗಮನಿಸಿದ್ದಾನೆ.   ಅಲ್ಲಿಗೆ ತೆರಳಿ ಹುಡುಗ ಮತ್ತು ಹುಡುಗಿಯರ ಪೋಟೋ ತೆಗೆದುಕೊಂಡಿದ್ದು ಅವರನ್ನು ಬೆದರಿಸಲು ಆರಂಭಿಸಿದ್ದಾನೆ. ಈ ಪೋಟೋಗಳನ್ನು ನಿಮ್ಮ ಶಿಕ್ಷಕರು ಮತ್ತು ಪಾಲಕರಿಗೆ ತೋರಿಸುತ್ತೇನೆ ಎಂದು ಬೆದರಿಸಿದ್ದಾನೆ.

ಬಾಲಕರನ್ನು ಬೆದರಿಸಿ ಅಲ್ಲಿಂದ ಕಳಿಸಿ. ಹುಡುಗಿಯರನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ   ಲೈಂಗಿಕ ದೌರ್ಜನ್ಯ ಎಸಗಿದ್ದು ಯಾರಿಗಾದರೂ ಬಹಿರಂಗಪಡಿಸಿದರೆ ಫೋಟೋಗಳನ್ನು ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣ ವರದಿಯಾಗಿತ್ತು.

 

Follow Us:
Download App:
  • android
  • ios