Asianet Suvarna News Asianet Suvarna News

Hassan: ಕಲುಷಿತ ಆಹಾರ ಸೇವಿಸಿ ಮೃತಪಟ್ಟ ದಂಪತಿ ಸಾವಿನ ರಹಸ್ಯ ಬಯಲು: ಮಗನೇ ತಂದೆ-ತಾಯಿಗೆ ವಿಷ ಹಾಕಿದ

ಇತ್ತಿಚೆಗಷ್ಟೇ ಅರಕಲಗೂಡು ತಾಲ್ಲೂಕಿನ, ಬಿಸಿಲಹಳ್ಳಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದೆ. 

couple died by eating contaminated food case twist son killed parents by poisoning gvd
Author
First Published Aug 28, 2023, 9:45 AM IST

ಹಾಸನ (ಆ.28): ಇತ್ತಿಚೆಗಷ್ಟೇ ಅರಕಲಗೂಡು ತಾಲ್ಲೂಕಿನ, ಬಿಸಿಲಹಳ್ಳಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದೆ. ಪುತ್ರನೇ ತನ್ನ ಪೋಷಕರಿಗೆ ವಿಷ ಹಾಕಿ ಕೊಲೆ ಮಾಡಿರುವ ಅಘಾತಕಾರಿ ಸತ್ಯ ಬಹಿರಂಗವಾಗಿದೆ.

ಹೌದು! ಪುತ್ರ ಮಂಜುನಾಥ್ (27) ತಿಂಡಿಗೆ ವಿಷ ಬೆರೆಸಿ ತಂದೆ ತಾಯಿಗೆ ತಿನ್ನಿಸಿ ಕೊಲೆ ಮಾಡಿದ್ದಾನೆ. ಪುತ್ರ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ‌ ಮಾಡಿರುವ ವಿಷಯ ಬಯಲಾಗಿದೆ. ವಿಧವೆ ಜೊತೆ ಪುತ್ರ ಮಂಜುನಾಥ್‌ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ಮಂಜುನಾಥ್ ತಾಯಿ ಉಮಾ ವಿರೋಧ ವ್ಯಕ್ತಪಡಿಸಿದ್ದರು. ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ. ಅಕ್ರಮ ಸಂಬಂಧಕ್ಕೆ ವಿರೋಧ ಹಾಗೂ ಹಣ ನೀಡುವಂತೆ ಪದೇ ಪದೇ ತಾಯಿ ಉಮಾ ಒತ್ತಾಯಿಸುತ್ತಿದ್ದರು. 

Bengaluru: ತೆಲಂಗಾಣ ಕಾಂಗ್ರೆಸ್​ ನಾಯಕನ ವಿರುದ್ಧ ನಗರದಲ್ಲಿ ಅತ್ಯಾಚಾರ ಪ್ರಕರಣ ದಾಖಲು!

ಇದರಿಂದ ಕೋಪಗೊಂಡು ತಾಯಿಯ ಹತ್ಯೆಗೆ ನೀಚ ಮಂಜುನಾಥ್ ಸ್ಕೆಚ್ ಹಾಕಿದ್ದ. ಆ.15 ರಂದು ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ ಉಮಾ ಪಲಾವ್ ಮಾಡಿದ್ದರು. ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆನಂತರ ಪಲಾವ್‌ಗೆ ಕಳೆನಾಶಕವನ್ನು ಮಂಜುನಾಥ್ ಬೆರೆಸಿದ್ದ. ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ಕೊಲೆಗಾರ ಮಂಜುನಾಥ್ ವಾಂತಿ ಮಾಡಿ ನಾಟಕವಾಡಿದ್ದ. ಆಗಸ್ಟ್ 15 ರಂದು ಮನೆಯಲ್ಲಿ ತಿಂಡಿ ಮಾಡಿದ ಬಳಿಕ ದಂಪತಿ ಅಸ್ವಸ್ಥಗೊಂಡಿದ್ದರು. ಕಳೆದ ಗುರುವಾರ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ದಿಢೀರ್ ಸಾವಿಗೀಡಾಗಿದ್ದರು. 

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಹೆಣಕ್ಕೆ ಬಳಸುವ ಉಪ್ಪು ಕೈದಿಗಳ ಆಹಾರಕ್ಕೆ?: ವಿಡಿಯೋ ವೈರಲ್‌

ಉಮಾ (48), ನಂಜುಂಡಪ್ಪ (55) ಮೃತಪಟ್ಟಿದ್ದ ದಂಪತಿ. ದಂಪತಿಗಳ ಹಠಾತ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ದಂಪತಿಯ ಕಿರಿಯ ಪುತ್ರ. ಗುರುವಾರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದ‌ ವೇಳೆ‌ ಗ್ರಾಮಕ್ಕೆ ಆಗಮಿಸಿ ಅಂತ್ಯಕ್ರಿಯೆಯನ್ನು ಪೊಲೀಸರು ತಡೆದಿದ್ದರು. ಕುಟುಂಬ ಸದಸ್ಯರ ಮನವೊಲಿಸಿ ಬಳಿಕ‌ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಪೊಲೀಸರು ಕೊಂಡೊಯ್ದಿದ್ದರು. ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದರು. ಇದೀಗ ಪೋಷಕರನ್ನೇ ಕೊಲೆ ಮಾಡಿರುವ ಸತ್ಯವನ್ನು ಮಗ ಬಾಯ್ಬಿಟ್ಟಿದ್ದು, ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow Us:
Download App:
  • android
  • ios