Asianet Suvarna News Asianet Suvarna News

ವಾಮಾಚಾರ ಮಾಡುತ್ತಿದ್ದ ದಂಪತಿ ಸಜೀವ ದಹನ, 17 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌!

ಒಡಿಶಾದಲ್ಲಿ ವಾಮಾಚಾರದ ಕಾರಣಕ್ಕೆ ದಂಪತಿಗಳನ್ನು ಸಜೀವವಾಗಿ ದಹನ ಮಾಡಿದ್ದ ಪ್ರಕರಣದಲ್ಲಿ ಜಿಲ್ಲಾ ಕೋರ್ಟ್‌ 17 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ. ಮೂರು ವರ್ಷದ ಹಿಂದೆ ಈ ಪ್ರಕರಣ ನಡೆದಿತ್ತು.
 

Couple burnt alive on suspicion of witchcraft in Odisha Life imprisonment to 17 san
Author
First Published Nov 17, 2023, 4:27 PM IST

ಭುವನೇಶ್ವರ (ನ.17): ಒಡಿಶಾದ ಜಾಜ್‌ಪುರ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ 17 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೂರು ವರ್ಷಗಳ ಹಿಂದೆ, ವಾಮಾಚಾರದ ಶಂಕೆಯಲ್ಲಿ ದಂಪತಿಯನ್ನು ಜೀವಂತ ಸುಟ್ಟುಹಾಕಿದ ಆರೋಪವನ್ನು ಇವರ ಮೇಲೆ ಮಾಡಲಾಗಿತ್ತು. ನ್ಯಾಯಾಲಯವು ತಪ್ಪಿತಸ್ಥರಿಗೆ ತಲಾ 10,000 ರೂಪಾಯಿ ದಂಡವನ್ನೂ ವಿಧಿಸಿದೆ. 2020ರ ಜುಲೈ 7 ರ ರಾತ್ರಿ, ಹಲವಾರು ಗ್ರಾಮಸ್ಥರು ಒಡಿಶಾದ ಕಳಿಂಗ ನಗರದ ನಿಮಾಪಾಲಿ ಗ್ರಾಮದಲ್ಲಿ ದಂಪತಿಗಳ ಮನೆಗೆ ಪ್ರವೇಶಿಸಿದರು. ದಂಪತಿಯನ್ನು ಶೈಲಾ ಬಲ್ಮುಜ್ ಮತ್ತು ಸಾಂಬ್ರಿ ಬಲ್ಮುಜ್ ಎಂದು ಗುರುತಿಸಲಾಗಿದೆ. ಗ್ರಾಮಸ್ಥರು ದಂಪತಿ ಮೇಲೆ ಹಲ್ಲೆ ನಡೆಸಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಪತಿ-ಪತ್ನಿ ಸಜೀವ ದಹನವಾಗಿದ್ದಾರೆ.

ಜಾಜ್‌ಪುರ ರಸ್ತೆ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹೃಷಿಕೇಶ್ ಆಚಾರ್ಯ ಅವರು ಪ್ರಕರಣದ ವಿಚಾರಣೆ ನಡೆಸಿ 20 ಸಾಕ್ಷಿಗಳು ಮತ್ತು ಹಲವಾರು ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆಯನ್ನು ಪ್ರಕಟಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರು 20 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದರು ಮತ್ತು ಅನೇಕ ಸಾಕ್ಷ್ಯಗಳನ್ನು ಈ ವೇಳೆ ಗಮನಿಸಿದ್ದಾರೆ ಎಂದು ಸರ್ಕಾರಿ ವಕೀಲ ರಜತ್ ಕುಮಾರ್ ರಾವುತ್ ಹೇಳಿದರು. ಈ ಹೇಳಿಕೆಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಧೀಶರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ಒಡಿಶಾದ ಸಂಬಲ್‌ಪುರ ಜಿಲ್ಲೆಯ ದಿಮಿರಿಕುಡ ಗ್ರಾಮದಲ್ಲಿ ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ. ಕಿಸಿಂಡಾ ಪೊಲೀಸರ ಪ್ರಕಾರ, ಸೋಮವಾರ ಈ ಘಟನೆ ನಡೆದಿದ್ದು, 50 ವರ್ಷದ ಶುಕ್ರು ಮಾಝಿ ಮೇಲೆ ಮಾಟಮಂತ್ರದ ಆರೋಪ ಹೊರಿಸಲಾಗಿತ್ತು.

ಸ್ಥಳ ಮಹಜರಿಗೆ ಬಂದಾಗ ಹೈಡ್ರಾಮ..! ಅವನನ್ನ ನಮಗೆ ಒಪ್ಪಿಸಿ ಎಂದ ಉಡುಪಿ ಜನರು..!

ಮಾಜ್ಹಿಯ ಮಾಟಮಂತ್ರದಿಂದಾಗಿ ನಾಲ್ಕು ವರ್ಷಗಳ ಹಿಂದೆ ತನ್ನ ನಾಲ್ಕು ವರ್ಷದ ಮಗನನ್ನು ಕಳೆದುಕೊಂಡಿದ್ದಾಳೆ ಎಂದು ಮಾಝಿಯ ನೆರೆಮನೆಯ ಸಂಜು ಶಂಕಿಸಿದ್ದಾರೆ. ಇದರಿಂದಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಕೊರಿಯರ್‌ ಡೆಲಿವರಿ ಸ್ಕ್ಯಾಮ್‌: 5 ರೂ ಪಾವತಿ ಮಾಡಿ 80 ಸಾವಿರ ಕಳೆದುಕೊಂಡ ಮಹಿಳೆ

Follow Us:
Download App:
  • android
  • ios