ಚಿಕ್ಕಬಳ್ಳಾಪುರ(ಮಾ. 02)   ತೋಟದ ಮನೆಯಲ್ಲಿ ನಾಡಬಂದೂಕು ತಯಾರಿ ಮಾಡಿ ಮಾರಾಟ ಮಾಡ್ತಿದ್ದವನ ಬಂಧನವಾಗಿದೆ. ಅಕ್ರಮವಾಗಿ ನಾಡಬಂದೂಕು ತಯಾರಿ ಮಾಡಿ ಮಾರಾಟ ಮಾಡ್ತಿದ್ದ ಅಸಾಮಿಯನ್ನ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಗುಂಗೀರ‍್ಲಹಳ್ಳಿ ಗ್ರಾಮದ ಗಂಗಾಧರ್ ಬಂಧಿತ ವ್ಯಕ್ತಿ. ಬಂಧಿತ ಗಂಗಾಧರ್ ಬಳಿ ಎರಡು ನಾಡಬಂದೂಕುಗಳು ಹಾಗೂ ನಾಡಬಂದೂಕು ಮಾಡಲು ಬೇಕಿರುವ ಸಲಕರೆಣಗಳು. ಹಾಗೂ ಬಂದೂಕಿಗೆ ತುಂಬೋ ಗನ್ ಪೌಡರ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ಕ್ವಾರಿ ಸ್ಫೋಟಕ್ಕೆ ಕಾರಣ ಏನು?

ಗುಂಗ್ಲೀರ‍್ಲಹಳ್ಳಿ ಗ್ರಾಮ ಹೊರವಲಯದಲ್ಲಿ ತೋಟದಲ್ಲಿ ಮನೆ ಕಟ್ಟಿಕೊಂಡು ವ್ಯವಸಾಯ ಮಾಡಿಕೊಂಡು ವಾಸವಾಗಿರುವ ಗಂಗಾಧರ್ ನಾಡಬಂದೂಕು ಮಾಡೋದ್ರಲ್ಲಿ ಎಕ್ಸ್‌ಫರ್ಟ್. .ತಾನೇ ನಾಡಬಂದೂಕು ತಯಾರಿ ಮಾಡೋಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನ ಸಂಗ್ರಹಿಸಿ, ತನ್ನ ಮನೆಯ ಮುಂದಿನ ಕುಲುಮೆಯಲ್ಲೇ ನಾಡಬಂದೂಕು ರೆಡಿ ಮಾಡುತ್ತಿದ್ದ.

ಹೀಗೆ ಹಲವು ದಿನಗಳಿಂದ ಕದ್ದು ಮುಚ್ಚಿ ನಾಡಬಂದೂಕುಗಳನ್ನ ತಯಾರಿ ಮಾಡಿ 5 ರಿಂದ 10 ಸಾವಿರಕ್ಕೆ ಮಾರಾಟ ಮಾಡ್ತಿದ್ದನಂತೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಂದಿಗಿರಿಧಾಮ ಪೊಲೀಸರು  ಅಕ್ರ್ರಮವಾಗಿ ನಾಡಬಂದೂಕು ತಯಾರಿ ಮಾಡ್ತಿದ್ದ ಆರೋಪಿ ಗಂಗಾಧರ್ ಮನೆ ಮೇಲೆ ದಾಳಿ ಮಾಡಿ ಈಗಾಗಲೇ ತಯಾರಿಸಿದ್ದ 2 ನಾಡಬಂದೂಕುಗಳು, ಹಾಗೂ ನಾಡಬಂದೂಕು ತಯಾರಿ ಮಾಡಲು ಇಟ್ಟುಕೊಂಡಿದ್ದ ಸಲಕರಣೆಗಳನ್ನ ವಶಕ್ಕೆ ಪಡೆದಿದ್ದಾರೆ.

ಇದೇ ಗಂಗಾಧರ್ ಬಳಿ ನಾಡಬಂದೂಕು ಖರೀಸಿದಿದ್ದ ರಾಜಾ ಹನುಮಂತಯ್ಯ ಹಾಗೂ ಅನಿಲ್ ರಿಪೇರಿಗೆ ಎಂದು ಬಂದು ಸಿಕ್ಕಿಹಾಕಿಕೊಂಡಿದ್ದಾರೆ.  ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ಅವರ ಬಳಿ ಇದ್ದ ನಾಡಬಂದೂಕು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಗಂಗಾಧರ್ ಹಾಗೂ ಮತ್ರಿಬ್ಬರನ್ನ ವಶಕ್ಕೆ ಪಡೆದಿರುವ ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕಾಡು ಪ್ರಾಣಿಗಳ ಬೇಟೆಯಾಡಲುಈ ಅಕ್ರಮ ನಾಡಬಂದೂಕುಗಳ ತಯಾರಿ ಮಾಡಿಕೊಡುತ್ತಿದ್ರು ಎಂಬ ಮಾಹಿತಿ ಲಭ್ಯವಾಗಿದ್ದು...ಇದುವರೆಗೂ ಯಾರ‍್ಯಾರಿಗೆ ಈ ನಾಡಬಂದೂಕುಗಳನ್ನ ಅಕ್ರಮವಾಗಿ ಮಾಡಿಕೊಟ್ಟಿದ್ದರು ಎಂಬ ಮಾಹಿತಿಯನ್ನ ಗಂಗಾಧರ್ ಬಳಿ ಪೊಲೀಸರು ಬಾಯಿಬಿಡಿಸುತ್ತಿದ್ದಾರೆ. ಕೃಷಿ ಕೆಲಸ ಮಾಡಿಕೊಂಡು ಸುಮ್ಮಿನಿರದ ಗಂಗಾಧರ್ ಅಕ್ರಮವಾಗಿ ನಾಡಬಂದೂಕು ತಯಾರಿ ಮಾಡಿ ಈಗ ಪೊಲೀಸರ ಅತಿಥಿಯಾಗಿ ಜೈಲು ಸೇರುವಂತಾಗಿದೆ. ಡಿವೈಎಸ್ಪಿ ರವಿಶಂಕರ್ ‌ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ನಂದಿಗಿರಿಧಾಮ ಪಿಎಸ್ಐ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಶಿವಪ್ಪ ಬ್ಯಾಕೋಡ, ಶ್ರೀನಿವಾಸ್, ಬಾಬು..ರಮೇಶ್..ಶೇಖರ್ ಮಧು..ಹಾಗೂ ಆಶೋಕ್  ದಾಳಿಯಲ್ಲಿ ಭಾಗವಹಿಸಿದ್ದರು.