ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ: 'ಮತಾಂತರ ನನ್ನಿಷ್ಟ' ಎಂದ ಮಹಿಳೆ ಅಧಿಕಾರಿಗಳ ಮುಂದೆ ಹೈಡ್ರಾಮಾ!
ಮತಾಂತರ ವಿಚಾರವಾಗಿ ನಡೆದ ಗಲಾಟೆ ವೇಳೆ ಮಹಿಳೆಯೊಬ್ಬಳು ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ತಾಂಡಾದಲ್ಲಿ ನಡೆದಿದೆ.
ವಿಜಯಪುರ (ಜ.12): ಮತಾಂತರ ವಿಚಾರವಾಗಿ ನಡೆದ ಗಲಾಟೆ ವೇಳೆ ಮಹಿಳೆಯೊಬ್ಬಳು ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ತಾಂಡಾದಲ್ಲಿ ನಡೆದಿದೆ.
ವಿಜಯಲಕ್ಷ್ಮಿ ಅಶೋಕ್ ಕುಮಾರ್, ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ. ಉಪ್ಪಲದಿನ್ನಿ ತಾಂಡಾದಲ್ಲಿ ಜನರನ್ನು ಮತಾಂತರ ಮಾಡುತ್ತಿದ್ದಾಳೆಂದು ಆರೋಪಿಸಿರುವ ಗ್ರಾಮಸ್ಥರು. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ ಸಭೆ ನಡೆಸಲು ತಾಂಡಾಕ್ಕೆ ಬಂದಿದ್ದ ತಹಸೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳು. ಈ ವೇಳೆ ತಾಂಡಾದ ಜನರೆಲ್ಲ ಅಧಿಕಾರಿಗಳ ಮುಂದೆಯೂ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಮತಾಂತರದ ಆರೋಪ ಮಾಡಿದ್ದರು. ಗ್ರಾಮಸ್ಥರ ಆರೋಪಕ್ಕೆ ಆಕ್ರೋಶಗೊಂಡ ಮಹಿಳೆ, ಮತಾಂತರ ನನ್ನ ಇಷ್ಟ ಎಂದು ಮುಖಂಡರ ಜೊತೆಗೆ ವಾಗ್ವಾದ ನಡೆಸಿದ್ದಳು.
ಮತಾಂತರ ನಿಷೇಧವಿದ್ರೂ ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ ಕೃತ್ಯ; ಪ್ರಮೋದ್ ಮುತಾಲಿಕ್ ಆಕ್ರೋಶ
ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ತಾಂಡಾದ ಮುಖಂಡರ ವಿರುದ್ಧ ದೂರು ನೀಡಿರುವ ವಿಜಯಲಕ್ಷ್ಮಿ. ವಿಜಯಲಕ್ಷ್ಮೀ ಮತಾಂತರ ಮಾಡುತ್ತಿದ್ದಾಳೆ ಎಂದು ಪ್ರತಿ ದೂರು ದಾಖಲಿಸಿದ್ದ ಗ್ರಾಮಸ್ಥರು. ಇದೇ ವಿಚಾರವಾಗಿ ನಡೆದ ಮಾತಿನಚಕಮಕಿ ವೇಳೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳ ಮುಂದೆಯೇ ಹೇಳಿದ ಮಹಿಳೆ. ಆದರೆ ಮಹಿಳೆಯ ಆತ್ಮಹತ್ಯೆ ಬೆದರಿಕೆಗೆ ಜಗ್ಗದ ಗ್ರಾಮಸ್ಥರು, ಲಂಬಾಣಿ ಸಮುದಾಯದ ಮೀಸಲಾತಿ ಬಳಸಿಕೊಂಡು ಮತಾಂತರ ಮಾಡಬೇಡಿ ಎಂದು ತಾಂಡಾದ ಜನರು ಆಗ್ರಹ. ಇಡೀ ತಾಂಡಾದ ಜನರು ಒಂದೆಡೆ, ಅಂಗನವಾಡಿ ಮಹಿಳೆ ಒಂದೆಡೆ. ತಾಂಡಾದಲ್ಲಿ ಶಾಂತಿ ನೆಲೆಸಲು ಸ್ಥಳದಲ್ಲೇ ಬಿಡುಬಿಟ್ಟ ಪೊಲೀಸರು.
ಹಾಸ್ಟೆಲ್‌ನಿಂದ ಕಾಣೆಯಾದ 26 ಬಾಲಕಿಯರು: ಬಲವಂತದ ಮತಾಂತರ ಆರೋಪ